
Sujatha bhat
Ashwaveega News 24×7 ಅ. 19: ಧರ್ಮಸ್ಥಳದ ಸುತ್ತಾ ನಡೀತಿರೋ ಸದ್ಯದ ಬೆಳವಣಿಗೆಗಳು ಯಾವ ಸಿನಿಮಾಗೂ ಕಡಿಮೆಯಿಲ್ಲ. ಅದ್ರಲ್ಲೂ ಅನನ್ಯಾ ಭಟ್ ನಾಪತ್ತೆ ಕೇಸ್ ದಿನಕ್ಕೊಂದು ಕ್ಷಣಕ್ಕೊಂದು ಟ್ವಿಸ್ಟ್ ಪಡೀತಿದೆ.. ಪುತ್ರಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ಸುಜಾತ ಭಟ್ ಸುಳ್ಳು ಫೋಟೋ ಬಿಡುಗಡೆ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ.
ನೂರಾರು ಶವ ಹೂತಿರೋದಾಗಿ ಮಾಸ್ಕ್ ಮ್ಯಾನ್ ದೂರು ಕೊಡ್ತಿದ್ದಂತೆ, ಸುಜಾತಾ ಭಟ್ ಕೂಡ ಪ್ರತ್ಯಕ್ಷರಾಗಿದ್ರು.. 2003 ರಲ್ಲಿ ತನ್ನ ಮಗಳು ಅನನ್ಯಾ ಭಟ್ ಕೂಡ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ. ತನ್ನ ಸ್ನೇಹಿತೆರೊಂದಿಗೆ ಜೊತೆ ಧರ್ಮಸ್ಥಳಕ್ಕೆ ಬಂದಿದ್ದಾಗ, ನಾಪತ್ತೆಯಾಗಿದ್ದಾಳೆ. 2003 ರಲ್ಲೇ ನಾನು ಪೊಲೀಸರಿಗೆ ದೂರು ನೀಡಿದ್ರೂ, ಸ್ವೀಕರಿಸಲಿಲ್ಲ. ನಾನು ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ವೃದ್ಧೆ ಸುಜಾತ್ ಭಟ್ ಹೇಳಿದ್ರು.. ಆದ್ರೆ, ದೂರಿನ ವೇಳೆ ತಮ್ಮ ಮಗಳ ಫೋಟೋವನ್ನ ಸುಜಾತಾ ಭಟ್ ರಿವೀಲ್ ಮಾಡಿರಲಿಲ್ಲ. ಆದ್ರೀಗ, ವಕೀಲರ ಸಮ್ಮುಖದಲ್ಲಿ ನಾಪತ್ತೆಯಾಗಿರೋ ಅನನ್ಯಾ ಭಟ್ ಫೋಟೋವೊಂದನ್ನ ಸುಜಾತ ಭಟ್ ಬಿಡುಗಡೆ ಮಾಡಿದ್ದಾರೆ. ಈ ಫೋಟೋ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ..
ಸುಜಾತಾ ಭಟ್ ತನ್ನ ಮಗಳ ಫೋಟೋ ಬಿಡುಗಡೆ ಮಾಡ್ತಿದ್ದಂತೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಹಿಂದೆ ಮೃತರಾಗಿದ್ದ ಯುವತಿಯ ಫೋಟೋವನ್ನು ಸುಜಾತ ಭಟ್ ತೋರಿಸಿದ್ರಾ ಎಂಬ ಅನುಮಾನ ಶುರುವಾಗಿದೆ. ಸುಜಾತ ಭಟ್ ತೋರಿಸಿದ ಯುವತಿಯ ಪೋಟೋ ಅಸಲಿಗೆ ಅನನ್ಯಾ ಭಟ್ ಎಂಬ ಯುವತಿಯದ್ದಲ್ಲ. ಬದಲಿಗೆ ಅದು ವಾಸಂತಿ ಎಂಬ ಮಹಿಳೆಯ ಬಾಲ್ಯದ ಪೋಟೋ.. ವಾಸಂತಿ ಎಂಬ ಮಹಿಳೆಯು 2002-03 ರಲ್ಲಿ ಮೃತಪಟ್ಟಿದ್ದಾರೆ. ವಾಸಂತಿ ಪತಿ ಶ್ರೀವತ್ಸ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ವಾಸಂತಿ ಮಾವ ರಂಗಪ್ರಸಾದ್ ಇತ್ತೀಚಿಗೆ ಮೃತಪಟ್ಟಿದ್ದಾರೆ.. ರಂಗಪ್ರಸಾದ್ ಮನೆಯಲ್ಲಿ ಸುಜಾತ ಭಟ್ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಪೋಟೋವನ್ನೇ ತನ್ನ ಮಗಳು ಅನನ್ಯಾ ಭಟ್ ಎಂದು ಸುಜಾತ ಭಟ್ ತೋರಿಸಿದ್ದಾರೆ ಎಂಬ ಚರ್ಚೆಗಳು ನಡೀತಿವೆ.
ಸುಜಾತಾ ಭಟ್ ಈಗಲೂ ಬೆಂಗಳೂರಿನ ರಂಗಪ್ರಸಾದ್ ಅವರ ಮನೆಯಲ್ಲಿ ಕೆಲಸ ಮಾಡ್ತಿದ್ದಾರೆ. ಹೀಗಾಗಿ, ಸುಜಾತಾ ಭಟ್ಗೆ ನಿಜವಾಗಿಯೂ ಮಗಳು ಇದ್ದಾಳಾ ಅಥವಾ ಅನನ್ಯಾ ಭಟ್ ನಾಪತ್ತೆ ಪ್ರಕರಣ ಕಟ್ಟುಕಥೆಯಾ ಅನ್ನೋ ಸಂಶಯ ಬಂದಿದೆ. ಸುಜಾತ ಭಟ್ ತೋರಿಸಿರುವ ಪೋಟೋದಲ್ಲಿರೋದು ಅನನ್ಯಾ ಭಟ್ಟಾ ಅಥವಾ ವಾಸಂತಿ ಎಂಬ ಮಹಿಳೆಯ ಪೋಟೋವೋ ಎಂಬ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಸುಜಾತ್ ಭಟ್ ಎಂಬ ಮಹಿಳೆ ತಾನು ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿದ್ದೆ ಎಂದು ಹೇಳಿದ್ದಾರೆ. ಹೀಗಾಗಿ ಕೋಲ್ಕತ್ತಾದ ಸಿಬಿಐ ಕಚೇರಿಯಿಂದಲೂ ಎಸ್ಐಟಿ, ಸುಜಾತ ಭಟ್ ಬಗ್ಗೆ ಮಾಹಿತಿ ಪಡೆಯುವ ಕೆಲಸ ಮಾಡಬೇಕಾಗಿದೆ. ಅನನ್ಯಾ ಭಟ್ ನಾಪತ್ತೆಯ ನಿಗೂಢತೆಯನ್ನು ಭೇಧಿಸುವ ಕೆಲಸವನ್ನು ಮಾಡಬೇಕಾಗಿದೆ.
ಅನನ್ಯಾ ಭಟ್ ನಾಪತ್ತೆ ಕೇಸ್ ಕಟ್ಟುಕಥೆ ಅಂತ ಮಾಧ್ಯಮಗಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸುಜಾತಾ ಭಟ್ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಕೊಟ್ಟಿರೋ ಫೋಟೋ ಅನನ್ಯಾಳದ್ದು. ಅನನ್ಯಾ ಹಾಗೂ ವಸಂತಾ ಇಬ್ಬರು ಬೇರೆ. ನಾನು ಒತ್ತಡ ತಾಳಲಾರದೇ ಫೋಟೋ ಬಿಡುಗಡೆ ಮಾಡಿದೆ. ಒಬ್ಬ ವ್ಯಕ್ತಿಯಂತೆ 6-7 ಜನರು ಇರ್ತಾರೆ ಎಂದು ಅಶ್ವವೇಗ ನ್ಯೂಸ್ಗೆ ಸುಜಾತಾ ಭಟ್ ಹೇಳಿದ್ಧಾರೆ.
ಒಟ್ಟಿನಲ್ಲಿ ನಿಜಕ್ಕೂ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೀತಿದ್ಯಾ..? ಸುಜಾತಾ ದೂರು ಕೊಟ್ಟಿದ್ದು ಕಟ್ಟುಕಥೆಯಾ ಅನ್ನೋದು ಎಸ್ಐಟಿ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ..