
Ashwaveega News 24×7 ಸೆ. 03: ಧರ್ಮಸ್ಥಳ ಪ್ರಕರಣ ದಿನಕ್ಕೊಂದು ಆಯಾಮ ಪಡೀತಿದೆ.. ಧರ್ಮಸ್ಥಳ ವಿರೋಧಿ ಗ್ಯಾಂಗ್ ಹೆಣೆದ ಷಡ್ಯಂತ್ರ ಬಟಾಬಯಲಾಗಿದೆ.. ಎಸ್ಐಟಿ ಅಧಿಕಾರಿಗಳು ಷಡ್ಯಂತ್ರದ ಇಂಚಿಂಚೂ ಮಾಹಿತಿಯನ್ನ ಕಲೆಹಾಕುತ್ತಿದ್ದಾರೆ. ಇದ್ರ ನಡುವೆಯೇ ಕಳೆದ 2 ವರ್ಷದ ಹಿಂದೆಯೇ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೀತಿದೆ ಎಂಬ ರಹಸ್ಯ ವರದಿಯನ್ನು ಗುಪ್ತಚರ ಇಲಾಖೆ ರಾಜ್ಯ ಸರ್ಕಾರಕ್ಕೆ ನೀಡಿರೋದು ಬಹಿರಂಗವಾಗಿದೆ..
2023ರ ಜುಲೈ ತಿಂಗಳಲ್ಲಿ ಗುಪ್ತಚರ ಇಲಾಖೆ ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಒಂದು ಗುಂಪು ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲು ಯತ್ನಿಸಿದೆ.. ವ್ಯಾಟ್ಸಾಪ್, ಯೂಟ್ಯೂಬ್ಗಳಲ್ಲಿ ಷಡ್ಯಂತ್ರಕ್ಕೆ ಸಂಚು ನಡೀತಿದೆ ಅಂತಾ ಗುಪ್ತಚರ ಇಲಾಖೆ ಸರ್ಕಾರಕ್ಕೆ ವರದಿ ನೀಡಿತ್ತು.. ಗುಪ್ತಚರ ಇಲಾಖೆ ವರದಿ ನೀಡಿದ್ರೂ, ಸರ್ಕಾರ ಸೈಲೆಂಟ್ ಆಗಿದ್ದೇಕೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.
ಹಾಗಾದ್ರೆ, ಗುಪ್ತಚರ ಇಲಾಖೆ ಸರ್ಕಾರಕ್ಕೆ ಕೊಟ್ಟ ವರದಿಯಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೆ,
ಷಡ್ಯಂತ್ರದ ಬಗ್ಗೆ 2023ರಲ್ಲೇ ರಾಜ್ಯ ಸರ್ಕಾರಕ್ಕೆ ವರದಿ
ಗುಪ್ತಚರ ಇಲಾಖೆಯಿಂದಲೇ ರಾಜ್ಯ ಸರ್ಕಾರಕ್ಕೆ ವರದಿ
ಗುಪ್ತಚರ ವರದಿಯಲ್ಲಿ ಹಲವು ವಿಚಾರಗಳು ಬಹಿರಂಗ
ಒಂದು ದೊಡ್ಡ ಗುಂಪಿನಿಂದ ಷಡ್ಯಂತ್ರಕ್ಕೆ ಮಹಾಸಂಚು
ಕೆಲ ಸಂಘಟನೆಗಳಿಂದ ಧರ್ಮಸ್ಥಳ ವಿರುದ್ಧ ಅಪಪ್ರಚಾರ
ವ್ಯಾಟ್ಸಾಪ್ ಗ್ರೂಪ್ಗಳಿಂದ ಧರ್ಮಸ್ಥಳ ವಿರುದ್ಧ ಷಡ್ಯಂತ್ರ
ಯುಟ್ಯೂಬ್ ಚಾನೆಲ್ಗಳಿಂದಲೂ ಷಡ್ಯಂತ್ರಕ್ಕೆ ಸಂಚು
ಮುಂದೆ ಮತ್ತಷ್ಟು ಷಡ್ಯಂತ್ರ ನಡೆಯುವ ಕುರಿತು ಎಚ್ಚರಿಕೆ
ಇಷ್ಟೊಂದು ಅಂಶಗಳನ್ನು 2023ರಲ್ಲೇ ಗುಪ್ತಚರ ಇಲಾಖೆ ಸರ್ಕಾರಕ್ಕೆ ಸಲ್ಲಿಸಿತ್ತು.. ಆದ್ರೆ, ರಾಜ್ಯ ಸರ್ಕಾರ ಗುಪ್ತಚರ ವರದಿ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ವಾ..? ಅನ್ನೋ ಪ್ರಶ್ನೆ ಮೂಡಿದೆ..
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಅರೆಸ್ಟ್ ಆಗಿರೋ ʻಬುರುಡೆʼ ಚಿನ್ನಯ್ಯನನ್ನ ಮತ್ತೆ 4 ದಿನಗಳ ಕಾಲ ಎಸ್ಐಟಿ ಕಸ್ಟಡಿ ನೀಡಲಾಗಿದೆ.. ಸೆ.6ರಂದು ಚಿನ್ನಯ್ಯನನ್ನ ಕೋರ್ಟ್ಗೆ ಹಾಜರುಪಡಿಸುವಂತೆ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ. 12 ದಿನಗಳ ಎಸ್ಐಟಿ ಕಸ್ಟಡಿ ಇಂದು ಅಂತ್ಯಗೊಂಡಿ ಹಿನ್ನೆಲೆ ಚಿನ್ನಯ್ಯನನ್ನ ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ವಿಚಾರಣೆಗೂ ಮುನ್ನ ಸರ್ಕಾರಿ ಅಭಿಯೋಜಕರು ಕೋರ್ಟ್ಗೆ ತನಿಖಾ ಪ್ರಗತಿ ವರದಿಯನ್ನು ಸಲ್ಲಿಕೆ ಮಾಡಿದರು. ಅಲ್ಲದೇ ಸಾಕ್ಷಿ ಸಂಗ್ರಹಣೆ, ಬಾಕಿ ವಿಚಾರಣೆ ವಿವರಗಳನ್ನೂ ಸಲ್ಲಿಸಿದರು. ಇದೇ ವೇಳೆ ಎಸ್ಐಟಿಯಿಂದಲೂ ತನಿಖಾ ಪ್ರಗತಿ ವರದಿಯನ್ನ ಕೋರ್ಟ್ಗೆ ಸಲ್ಲಿಸಲಾಯಿತು.
ದೆಹಲಿ, ತಮಿಳುನಾಡಿನಲ್ಲಿ ಮಹಜರು ನಡೆಸಬೇಕಿರುವುದರಿಂದ ಮತ್ತೆ ಕಸ್ಟಡಿಗೆ ನೀಡುವಂತೆ ಎಸ್ಐಟಿ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದರು. ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್, ಚಿನ್ನಯ್ಯನನ್ನ ಮತ್ತೆ 4 ದಿನ ಕಸ್ಟಡಿಗೆ ನೀಡಿ ಆದೇಶಿಸಿದೆ.
ತಲೆಬುರುಡೆ ಪ್ರಕರಣ ತನಿಖೆ ನಡೆಸ್ತಿರೋ ಎಸ್ಐಟಿ, ಸದ್ದಿಲ್ಲದೇ ಸೌಜನ್ಯ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತಾ ಅನ್ನೋ ಪ್ರಶ್ನೆ ಮೂಡಿದೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪ ಹೊತ್ತು ಕ್ಲೀನ್ಚಿಟ್ ಪಡೆದವರಿಗೆ ಎಸ್ಐಟಿ ಬುಲಾವ್ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ರಾಜ್ಯ ಪೊಲೀಸ್, ಸಿಬಿಐ ತನಿಖೆ ಬಳಿಕವೂ ಪ್ರಕರಣದಲ್ಲಿ ಕ್ಲೀನ್ಚಿಟ್ ಪಡೆದುಕೊಂಡಿದ್ದ ಉದಯ್ ಕುಮಾರ್ ಜೈನ್ ಸೇರಿದಂತೆ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್ಗೆ ಎಸ್ಐಟಿ ಬುಲಾವ್ ನೀಡಿದೆ. ಹೀಗಾಗಿ ಆರೋಪ ಹೊತ್ತ ಉದಯ್ ಕುಮಾರ್ ಜೈನ್ ಎಸ್ಐಟಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ.
ಇನ್ನೂ ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ರಾಜಕೀಯ ಸ್ವರೂಪ ಪಡೀತಿದೆ. ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ . ಧರ್ಮಸ್ಥಳದ ಭಕ್ತರು ಕಾಂಗ್ರೆಸ್ ಪಕ್ಷದಲ್ಲೂ ಇದ್ದಾರೆ. ಧರ್ಮಸ್ಥಳ ಕೇವಲ ಒಂದು ಪಕ್ಷದ ಸ್ವತ್ತಲ್ಲ ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದ್ದಾರೆ. ಇನ್ನೂ ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡಬೇಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ .
ಒಟ್ನಲ್ಲಿ ಬುರುಡೆ ಚಿನ್ನಯ್ಯ ಮತ್ತೆ ಎಸ್ಐಟಿ ಕಸ್ಟಡಿ ಪಾಲಾಗಿದ್ದು, ನಾಳೆಯಿಂದ ಮತ್ತೆ ವಿಚಾರಣೆ ನಡೆಲಿದೆ. ಅಲ್ಲದೇ, ಮಂಡ್ಯ, ತಮಿಳುನಾಡಿನಲ್ಲೂ ಎಸ್ಐಟಿ ತಲಾಷ್ ನಡೆಸೋ ಸಾಧ್ಯತೆಯಿದೆ..