
Ashwaveega News 24×7 ಸೆ. 03: ಭಾರತ ಮತ್ತು ಅಮೇರಿಕಾ ನಡುವಿನ ಸುಂಕ ಸಮರ ತಾರಕಕ್ಕೇರಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನಸ್ಸಿಗೆ ಬಂದಂತೆ ಭಾರತದ ವಿರುದ್ಧ ಸುಂಕ ಸಮರ ಸಾರಿದ್ದಾರೆ.. ಬರೋಬ್ಬರಿ 50ರಷ್ಟು ಟ್ಯಾಕ್ಸ್ ಹೆಚ್ಚಿಸೋ ಮೂಲಕ ಶಾಕ್ ಮೇಲೆ ಶಾಕ್ ಕೊಟ್ಟಿದ್ರು.. ಆದ್ರೆ, ಟ್ರಂಪ್ ಆಟಾಟೋಪಕ್ಕೆ ಪ್ರಧಾನಿ ಮೋದಿ ಡೋಂಟ್ಕೇರ್ ಎಂದಿದೆ.. ದೊಡ್ಡಣ್ಣನ ಸುಂಕಾಸ್ತ್ರಕ್ಕೆ ಬೆದರದ ಭಾರತ, ಇದೀಗ ಟ್ರಂಪ್ ನಿದ್ದೆಗೆಡಿಸುವಂತ ಶಾಕ್ ಕೊಟ್ಟಿದೆ.. ಚೀನಾದಲ್ಲಿ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಒಡನಾಟ ಕಂಡು ಟ್ರಂಪ್ ಕೊತ ಕೊತ ಕುದಿಯುತ್ತಿದ್ದಾರೆ.
ಚೀನಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಎರಡು ದಿನಗಳ ಕಾಲ ನಡೆದಿದ್ದ ಎಸ್ಜಿಓ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿಂಗ್ಪಿಂಗ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಮೋದಿ ಹಾಗೂ ಪುಟಿನ್ ಒಂದೇ ಕಾರ್ನಲ್ಲಿ ಕುಳಿತು ಚರ್ಚೆ ನಡೆಸಿದ್ರು.. ಇಬ್ಬರು ನಾಯಕರು ಕಾರಿನಲ್ಲಿ ಚರ್ಚೆ ನಡೆಸ್ತಿದ್ದು ಫೋಟೋ ಭಾರೀ ವೈರಲ್ ಆಗಿದ್ದು, ಟ್ರಂಪ್ ಕಣ್ಣು ಕೆಂಪಾಗುವಂತೆ ಮಾಡಿದೆ.. ಇನ್ನೂ ಕುತೂಹಲ ಸಂಗತಿ ಎಂದ್ರೆ, ಭಾರತದ ವಿರೋಧಿ ರಾಷ್ಟ್ರ ಚೀನಾ ಕೂಡ, ಮೋದಿ ಜೊತೆ ಉತ್ತಮ ಸಂಬಂಧ ಹೊಂದಿದೆ.. ಇದು ಟ್ರಂಪ್ ನಿದ್ದೆಗೆಡುವಂತೆ ಮಾಡಿದೆ.
ರಷ್ಯಾ ತೈಲವನ್ನು ಖರೀದಿಸುತ್ತಿರುವ ಭಾರತಕ್ಕೆ ಟ್ರಂಪ್ ಬೇಕಾಬಿಟ್ಟಿ ಸುಂಕ ಹೆಚ್ಚಿಸ್ತಲೇ ಇದ್ದಾರೆ. ಇನ್ನೂ ಭಾರತದ ಮೇಲೆ ಬೇಕಾಬಿಟ್ಟಿ ಸುಂಕ ವಿಧಿಸಿದ್ದ ಡೊನಾಲ್ಡ್ ಟ್ರಂಪ್ ನಿರ್ಧಾರಕ್ಕೆ ಅಮೆರಿಕದ ಜನರೇ ಆಕ್ರೋಶ ಹೊರಹಾಕಿದ್ರು. ಆದ್ರೆ ಇದ್ಯಾವುದಕ್ಕೂ ಭಾರತ್ ಕ್ಯಾರೇ ಅಂತಿಲ್ಲ. ಇದೀಗ ಚೀನಾದಲ್ಲಿ ಪುಟಿನ್ ಜೊತೆಗೆ ದ್ವಿಪಕ್ಷೀಯ ಸಭೆ ಮೂಲಕ ದೊಡ್ಡಣ್ಣನಿಗೆ ಮೋದಿ ಕೌಂಟರ್ ಕೊಟ್ಟಿದ್ದಾರೆ. ಮೋದಿ-ಪುಟಿನ್ ದ್ವಪಕ್ಷೀಯ ಸಭೆ ನಂತ್ರವೇ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಭಾರತ ಸುಂಕಕ್ಕೆ ಹೆದರಿದೆ.. ಸುಂಕ ಕಡಿತಗೊಳಿಸುವಂತೆ ಮನವಿ ಮಾಡ್ತಿದೆ. ಆದ್ರೆ, ಭಾರತದ ಮನವಿ ಸಮಯ ಮುಗಿಗಿದೆ. ಇದೊಂದು ಏಕಪಕ್ಷೀಯ ವಿಪತ್ತು ಎಂದು ಟ್ರಂಪ್ ಕಿಡಿಕಾರಿದ್ದಾರೆ..
ಇನ್ನೊಂದೆಡೆ ಇವತ್ತು ಚೀನಾದಲ್ಲಿ ವಿಕ್ಟರಿ ಪರೇಡ್ ನಡೆದಿದ್ದು, ಕ್ಸಿಂಗ್ ಪಿಂಗ್ ನಿವಾಸದಲ್ಲಿ ಬಹುದೊಡ್ಡ ಸಭೆ ನಡೆದಿದೆ. ಇದರಲ್ಲಿ ಅಮೇರಿಕಾದ ಶತ್ರುಗಳಾದ ರಷ್ಯಾ, ಉತ್ತರ ಕೊರಿಯಾ, ಇರಾನ್ ರಾಷ್ಟ್ರಗಳ ಪ್ರಮುಖರು ಭಾಗಿಯಾಗಿದ್ದಾರೆ. ಹೀಗಾಗಿ, ಟ್ರಂಪ್ ದಿಕ್ಕುತೋಚದೇ ಸೈಲೆಂಟ್ ಆಗಿದ್ದಾರೆ..
ಸದ್ಯ ಟ್ರಂಪ್ ಸುಂಕ ಹೆಚ್ಚಿಸುತ್ತಿದ್ದಂತೆ ಭಾರತಕ್ಕೆ ರಷ್ಯಾ ಬೆಂಬಲವಾಗಿ ನಿಂತಿದೆ. ಭಾರತಕ್ಕೋಸ್ಕರ ತೈಲದ ದರ ಇಳಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ರಷ್ಯಾ ಏನಾದ್ರೂ ಕಚ್ಚಾತೈಲದರವನ್ನು ಇಳಿಕೆ ಮಾಡಿದ್ದೇ ಆದ್ರೆ, ಟ್ರಂಪ್ ಕಂಗಾಲಾಗೋದು ಗ್ಯಾರಂಟಿ..
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಅಮೇರಿಕಾದ ಸುಂಕ ಹೆಚ್ಚಳದಿಂದಾಗಿ ಭಾರತ ಪರ್ಯಾಯ ಮಾರ್ಗ ನಿರೀಕ್ಷಿಸುತ್ತಿದೆ ಎಂದಿದ್ದಾರೆ. ಬಡಾಯಿ ಕೊಚ್ಚಿ ಕೊಳ್ಳೋ ಟ್ರಂಪ್ಗೆ ಭಾರತ – ರಷ್ಯಾ ಸರಿಯಾಗೇ ಟಕ್ಕರ್ ಕೊಡ್ತಿದೆ. ಇನ್ನೂ ಚೀನಾ- ಭಾರತ ಭಾಯಿ ಭಾಯಿ ಆಗಿರೋದು ಟ್ರಂಪ್ ಬೆವರಿಳಿಯುವಂತೆ ಮಾಡಿದೆ..