
Ashwaveega News 24×7 ಸೆ. 12: ವಿಷಪೂರಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥವಾಗಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ.ಬೆಳಗ್ಗೆಯ ಉಪಹಾರ ಸೇವಿಸಿದ ಬಳಿಕ ಮೊರಾರ್ಜಿ ವಸತಿ ನಿಲಯ ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್ ಅಗಿದೆ ಎನ್ನಲಾಗಿದೆ.
ಮೊರಾರ್ಜಿ ವಸತಿ ನಿಲಯದಲ್ಲಿ ಸಿಕ್ಕ ಕೊಳೆತ ತರಕಾರಿಗಳು ಕಂಡಿಬಂದಿದ್ದು ಹಾಸ್ಟೆಲ್ನಲ್ಲಿ ಕೊಳೆತ ತರಕಾರಿ ಬಳಸಿ ಆಹಾರ ತಯಾರಿಕೆ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ.ಹಾಗಾಗಿ ಕಳಪೆ ಆಹಾರ ಸೇವಿಸಿ ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್ ಆಗಿದೆ ಎನ್ನಲಾಗಿದೆ.
ಇನ್ನೂ ತಾಲೂಕಾಸ್ಪತ್ರೆಯಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಪಡೆದಿದ್ದಾರೆ.