
Ashwaveega News 24×7 ಸೆ. 19: ಬಿಗ್ ಬಾಸ್ ಮಾಜಿ ಸ್ಪರ್ಧಿ ರಂಜಿತ್ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಜಗಳ ನಡೆದಿದೆ. ರಂಜಿತ್ ಪತ್ನಿ ಹಾಗೂ ಸಹೋದರಿ ನಡುವೆ ಮಾತಿನ ಚಕಮಕಿ ನಡೆದಿದ್ದು ಮೊಬೈಲ್ನಲ್ಲಿ ವಿಡಿಯೋ ಸೆರೆಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್ ಆಗಿವೆ. ಮಾನ ಮರ್ಯಾದೆ ಇಲ್ಲದೇ ದ್ರಾಕ್ಷಿ, ಗೋಡಂಬಿ ತಿಂತೀಯಾ ಎಂದು ರಂಜಿತ್ ಪತ್ನಿ ಮತ್ತು ರಂಜಿತ್ ಅಕ್ಕ ಬೈಯ್ದುಕೊಂಡಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದೇ ಚಪ್ಪರ್, ಭಿಕಾರಿ ಎಂದೆಲ್ಲ ಮಾತುಗಳು ಆಡಿದ್ದಾರೆ. ಮಾತಿನ ಮೂಲಕ ಬಗೆಹರಿಸಿಕೊಳ್ಳಬೇಕಾಗಿದ್ದ ವಿಷಯ ಈಗ ಬೀದಿಗೆ ಬಂದಿದೆ. ರಂಜಿತ್ ಕುಟುಂಬದ ಸದಸ್ಯರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಇನ್ನು ಈ ಮನೆ ನಮ್ಮದು ಅಂತ ಅಕ್ಕ-ಬಾವನ ಮನೆಯವರು ನೋಟೀಸ್ ನೀಡಿದ್ದಾರೆ. ಅದಾದ ಬಳಿಕ ನಮ್ಮ ಮನೆ ಫಸ್ಟ್ ಫ್ಲೋರ್ನಲ್ಲಿದೆ, ಮೂರನೇ ಫ್ಲೋರ್ನಲ್ಲಿ ಅಕ್ಕನ ಮನೆಯಿದೆ. ನಮ್ಮ ಮನೆಯೊಳಗಡೆ ಬಂದು ರೇಶನ್ ಎಸೆದಿದ್ದಾರೆ. ಅದಿಕ್ಕೋಸ್ಕರ ಗಲಾಟೆಯಾಗಿದೆ. ಆರಂಭದಲ್ಲಿ ಬಂದು ಗಲಾಟೆ ಮಾಡಿ, ಅದಾದ ಬಳಿಕ ಆ ವಿಡಿಯೋವನ್ನು ವೈರಲ್ ಮಾಡಿದ್ದರು” ಎಂದು ರಂಜಿತ್ ಅವರು ಹೇಳಿದ್ದಾರೆ.
ಈ ಮನೆ ಬಿಟ್ಟು ಕೊಡಿ ಎಂದು ಲೀಗಲ್ ನೋಟೀಸ್ ಕಳಿಸಿದ್ದರು. ಹೀಗಾಗಿ ನಾನು ಅದಕ್ಕೆ ಉತ್ತರ ಕೊಟ್ಟಿದ್ದೆ. ನನಗೆ ಸಾಲ ಸಿಗೋದಿಲ್ಲ ಎಂದು ಹೇಳಿ, ಅಕ್ಕನ ಹೆಸರಿಗೆ ಮನೆ ಮಾಡಿದ್ದೆ. 2017-2018ರಲ್ಲಿ ಶನಿ ಧಾರಾವಾಹಿಯಲ್ಲಿ ನಟಿಸುವಾಗಲೇ ನಾನು ಮನೆ ಖರೀದಿ ಮಾಡಿದ್ದೆ. ಮದುವೆಯಾದಕೂಡಲೇ ಈ ಸಮಸ್ಯೆ ಶುರುವಾಗಿದೆ ಎಂದು ರಂಜಿತ್ ಹೇಳಿದ್ದಾರೆ.
ಈಗ ನಿನಗೆ ಮದುವೆಯಾಗಿದೆ, ಇಎಂಐ ಕೊಡೋದಿಲ್ಲ ಎಂದು ಅಕ್ಕ-ಬಾವ ಹೇಳಿದರು. ನಾನು ಇಎಂಐ ಕೊಡ್ತೀನಿ ಅಂದರೂ ಕೇಳಲಿಲ್ಲ. ನಾನು ಲೀಗಲ್ ಆಗಿ ಉತ್ತರ ಕೊಟ್ಟಿದ್ದೆ. ಹೀಗಾಗಿ ಅಕ್ಕ-ಭಾವ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಕೊಟ್ಟಿದ್ದಾರೆ. ನನ್ನ ಅಕ್ಕನ ಗಂಡ ಆರ್ಮಿಯಲ್ಲಿದ್ದವರು, ನನ್ನ ಪತ್ನಿ ಓಡಾಡುವಾಗ ಗಲೀಜಾಗಿ ವಿಡಿಯೋ ಮಾಡುತ್ತಾರೆ, ಇದೆಲ್ಲ ತಪ್ಪು” ಎಂದು ರಂಜಿತ್ ಹೇಳಿದ್ದಾರೆ.