
Ashwaveega News 24×7 ಸೆ. 28: ಟಿವಿಕೆ ಸಂಸ್ಥಾಪಕ ಕಮ್ ನಟ ವಿಜಯ್ ಱಲಿ ವೇಳೆ ಭಾರೀ ದುರಂತ ಸಂಭವಿಸಿದೆ. 39 ಮಂದಿ ಪ್ರಾಣ ಕಳೆದುಕೊಂಡು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದೀಗ ಕಾಲ್ತುಳಿತದ ಬಗ್ಗೆ ನಟ, ರಾಜಕಾರಣಿ ವಿಜಯ್ ಮೌನ ಮುರಿದಿದ್ದಾರೆ.
ಕಾಲ್ತುಳಿತದ ಬೆನ್ನಲ್ಲೇ ಸೈಲೆಂಟ್ ಆಗಿ ರಸ್ತೆ ಮಾರ್ಗವಾಗಿ ತ್ರಿಚಿಗೆ ತೆರಳಿದ್ದ, ವಿಜಯ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ್, ಈ ದುರಂತದಿಂದ ಹೃದಯ ಚೂರಾಗಿದೆ. ಅಸಹನೀಯ, ವಿವರಿಸಲಾಗದ ನೋವು ಮತ್ತು ದುಃಖದಲ್ಲಿರುವುದಾಗಿ ಎಕ್ಸ್ ಖಾತೆಯಲ್ಲಿ ನೋವು ಹಂಚಿಕೊಂಡಿದ್ದಾರೆ.
ನನಗೆ ಈ ಘಟನೆಯಿಂದ ಹೃದಯ ಒಡೆದು ಹೋಗಿದೆ. ನಾನು ಅಸಹನೀಯ, ಅತೀವ ನೋವು ಮತ್ತು ದುಃಖದಲ್ಲಿದ್ದೇನೆ. ಕರೂರಿನಲ್ಲಿ ಜೀವ ಕಳೆದುಕೊಂಡ ನಮ್ಮ ಪ್ರೀತಿಯ ಸಹೋದರ ಸಹೋದರಿಯರ ಕುಟುಂಬಗಳಿಗೆ ನನ್ನ ಸಂತಾಪವನ್ನ ವ್ಯಕ್ತಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು, ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪಗಳೇ ಹರಿದು ಬರ್ತಿದೆ. ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದು, ತಮಿಳುನಾಡಿನ ಕರೂರಿನಲ್ಲಿ ರಾಜಕೀಯ ಸಮಾವೇಶದ ವೇಳೆ ನಡೆದ ಅಹಿತಕರ ಘಟನೆ ತೀವ್ರ ದುಃಖ ತಂದಿದೆ ಎಂದಿದ್ದಾರೆ.