
Ashwaveega News 24×7 ಅಕ್ಟೋಬರ್. 03: ವಿಜಯದಶಮಿಯಂದು ರಾವಣ ದಹನ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಆದರೆ ತಮಿಳುನಾಡಿನಲ್ಲಿ ರಾವಣನ ಬದಲು ರಾಮನ ಪ್ರತಿಮೆಗೆ ಬೆಂಕಿ ಇಟ್ಟು ಕೆಲ ಕಿಡಿಗೇಡಿಗಳು ದುಷ್ಕೃತಿ ಮೆರೆದಿದ್ದಾರೆ.
ತಮಿಳುನಾಡಿನ ತಿರುಚಿಯಲ್ಲಿಯೇ ಸೌಹಾರ್ದತೆಯನ್ನು ಕೆಡಿಸುವಂತಹ ಘಟನೆ ನಡೆದಿದ್ದು, ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.
ಈ ದುಷ್ಕರ್ಮಿಗಳು ರಾವಣನನ್ನು ಹೊಗಳುತ್ತಾ ರಾಮನನ್ನು ತೆಗಳುತ್ತಾ ಹಿಂದೂಗಳ ಆರಾಧ್ಯ ದೈವ ಆಗಿರುವ ಶ್ರೀರಾಮನ ಪ್ರತಿಕೃತಿಗೆ ಬೆಂಕಿ ಇಡುವ ಮೂಲಕ ಕೋಟ್ಯಾಂತರ ಹಿಂದೂ ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ.
ಫಿಫ್ತ್ ತಮಿಳ್ ಸಂಗಮ್ ಎಂಬ ಇನ್ಸ್ಟಾಗ್ರಾಮ್ ಪೇಜ್ನಿಂದ ಈ ಘಟನೆಯ ವೀಡಿಯೋ ಪೋಸ್ಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೋದಲ್ಲಿ ಕಾಣುವಂತೆ ವ್ಯಕ್ತಿಯೊಬ್ಬ ರಾಮನ ಪ್ರತಿಕೃತಿಗೆ ಬೆಂಕಿ ಇಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುವ ವೇಳೆ ಆತ ರಾವಣನನ್ನು ಹೊಗಳಿ ಕೊಂಡಾಡುವಂತೆ ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ರಾವಣನ ಪ್ರತಿಕೃತಿ ದಹನವಾದ ನಂತರ ಈ ಕಿಡಿಗೇಡಿಗಳು ಅಲ್ಲಿ ಕೈಯಲ್ಲಿ ವೀಣೆ ಹಿಡಿದಿರುವ ಹತ್ತು ತಲೆಯ ರಾವಣನನ್ನು ಪ್ರತಿಷ್ಠಾಪಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.