
Ashwaveega News 24×7 ಅಕ್ಟೋಬರ್. 06: ಇತ್ತಿಚೇಗೆ ನಟಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಕಾರು ಅಪಘಾತಕ್ಕೀಡಾಗಿದೆ. ಗದ್ವಾಲ್ ಜಿಲ್ಲೆ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಕಾರು ಆಕ್ಸಿಡೆಂಟ್ ಆಗಿದೆ.
ವಿಜಯ್ ದೇವರಕೊಂಡ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಹೈದ್ರಾಬಾದ್ಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದೇವರಕೊಂಡ ಕಾರು ಸಂಚರಿಸುವಾಗ ಬೊಲೆರೊ ವಾಹನ ಬಂದು ಡಿಕ್ಕಿ ಹೊಡೆದಿದೆ. ಸದ್ಯ ಸ್ಟಾರ್ ನಟ ವಿಜಯ್ ದೇವರಕೊಂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯ್ ದೇವರಕೊಂಡ ಅವರು ಪುಟ್ಟಪರ್ತಿಗೆ ತೆರಳುತ್ತಿದ್ದಾಗ ವೇಗವಾಗಿ ತೆರಳುತ್ತಿದ್ದರು. ಈ ಸಂಬಂಧ ಟ್ರಾಫಿಕ್ ಪೊಲೀಸರು ದೇವರಕೊಂಡಗೆ ದಂಡ ವಿಧಿಸಿದ್ದರು. ಈಗ ಪುಟ್ಟಪರ್ತಿಯಿಂದ ವಾಪಸ್ ಹೈದರಾಬಾದ್ಗೆ ತೆರಳುವಾಗ ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಕಾರಿನ ಒಂದು ಬದಿ ಹಾನಿಯಾಗಿದೆ. ಇವರು ಇತ್ತೀಚೆಗಷ್ಟೇ ರಶ್ಮಿಕಾ ಜೊತೆ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು.