
Ashwaveega News 24×7 ಅಕ್ಟೋಬರ್. 07: ಕಾಂತಾರ ಚಾಪ್ಟರ್ 1 ಸಿನಿಮಾ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿ ಕರಾವಳಿಯ ದೈವರಾಧನೆಯ ಚಿತ್ರವಾಗಿದೆ… ಕಾಂತಾರ ಚಾಪ್ಟರ್ 1 ಸಿನಿಮಾ ತೆರೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣುತ್ತಿದೆ.
ಈ ಬೆನ್ನಲ್ಲೆ ಕಾಂತಾರ ಸಿನಿಮಾ ನೋಡಿದ ಕೆಲ ಅಭಿಮಾನಿಗಳು ಅಸಭ್ಯ ವರ್ತನೆ ಹಾಗೂ ದೈವದ ವೇಶವನ್ನ ಧರಿಸಿ ಹೇಗೆ ಬೇಕೋಹಾಗೆ ವರ್ತನೆ ತೋರುತ್ತಿರುದರಿಂದ ದೈವದ ಮೇಲೆ ನಂಬಿಕೆ ಇಟ್ಟವರ ಭಾವನೆಗೆ ಧಕ್ಕೆಯಾಗುತ್ತಿದ್ದು ಕರಾವಳಿ ಜನರ ಕೆಂಗಕಣ್ಣಿಗೆಗೆ ಗುರಿಯಾಗಿದ್ದಾರೆ. .
ಹೀಗಾಗಿ ಬೆಂಗಳೂರು ತುಳುಕೂಟ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಪತ್ರದ ಮೂಲಕ ಮನವಿ ಮಾಡಿ, ಹುಚ್ಚಾಟ ಮಾಡುವವರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ. ಇನ್ನೂ ಈ ಹಿಂದೆ ಕೂಡ ಕಮಿಷನರ್ಗೆ ಪತ್ರ ಬರೆದಿದ್ದ ತುಳುಕೂಟ ದೈವಗಳ ಟ್ಯಾಬ್ಲೋ, ನೃತ್ಯಕ್ಕೆ ಅವಕಾಶ ಕೊಡದಂತೆ ಮನವಿ ಮಾಡಿದ್ರು.
ಬಳಿಕ ದೈವದ ವೇಷಹಾಕಿ ಹುಚ್ಚಾಟವಾಡುವುದು ಕಡಿಮೆಯಾಗಿತ್ತು. ಇದೀಗ ಚಾಪ್ಟರ್- 1 ರಿಲೀಸ್ ಬಳಿಕ ಮತ್ತೆ ಕೆಲ ಪ್ರೇಕ್ಷಕರು ತಮ್ಮ ಪ್ರಚಾರದಾರಿಗಳಿಗಾಗಿ ಈ ರೀತಿ ಸಿನಿಮಾ ಥಿಯೇಟರ್, ಆರ್ಕೇಸ್ಟ್ರಾಗಳಲ್ಲಿ ದೈವದಾ ವೇಶವನ್ನ ಹಾಕಿ ಹುಚ್ಚಾಟವಾಡುತ್ತಿದ್ದಾರೆ .