
Press ಅಂತ ಬೋಡ್ ಹಾಕಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರು ಕರ್ನಾಟಕ,ಮಹಾರಾಷ್ಟ್ರದಲ್ಲಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿ ತಾವು ಓಡಾಡಲು ಬಳಸುತ್ತಿದ್ದ್ ಕಾರಿಗೆ ಪರೆಸಸ ಎಂಬ ಬೋರ್ಡ್ ಹಾಕಿಕೊಂಡು ಪೊಲೀಸರಿಗೆ ಅಲ್ಲದೇ ಟೋಲ್ ಸಿಬ್ಬಂದಿಗಳಿಗೂ ಯಾಮಾರಿಸಿದ್ದಾರೆ. ಈ ಗ್ಯಾಂಗ್ನ ಆರೋಪಿಗಳ ಹೆಸರು ಹುಸೇನ್, ಸಾಗರ್ ಗಾಯಕಾವಾಡ್,ಅಮೂಲ್,ಕೇತ್ಯಾ ಮತ್ತು ನಾಗರಾಜು ಎಂದು
ಇವರು ಬೆಳಗಾವಿಯ ಮಹಾಂತೇಶ ನಗರ, ಆಂಜನೇಯನಗರ ಶಿವಬಸವ ನಗರದಲ್ಲಿಯೂ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.ಇವರೆಲ್ಲರೂ ಜನರಿಗೆ ನಾವು ಪತ್ರಕರ್ತರು ಎಂದು ಯಾಮಾರಿಸಿ ಜನರನ್ನು ಭಯಪಡಿಸಿ ಕಳ್ಳತನ ಮಾಡುತ್ತಿದ್ದಾರೆ. ಈ ಗ್ಯಾಂಗಿನ ಒಬ್ಬ ಕಳ್ಳ ಪೋಲಿಸರ ಸಾಕಷ್ಟು ಪ್ರಯತ್ನದ ನಂತರ ಸಿಕ್ಕಿಬಿದಿದ್ದಾನೆ

ಅವನೇ ಸೊಲ್ಲಾಪುರದ ನಾಗರಾಜ ಎಂಬ ಆರೋಪಿಯನ್ನು ಬೆಳಗಾವಿ ಮಾಳ ಮಾರುತಿ ಠಾಣೆಯ ಪೊಲೀಸರು ಜುಲೈ13 ರಂದು ಬಂಧಿಸಿದ್ದಾರೆ ಬಂಧಿತ ಆರೋಪಿ ನಾಗರಾಜನಿಂದ xvu ಕಾರು ಹಾಗೂ 10 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ಪೊಲೀಸರು ರಚಿಸಿದ್ದಾರೆ.
