
ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಕಿವೀಸ್ ತಂಡದಲ್ಲಿ ಪ್ರಮುಖ 8 ಆಟಗಾರರಿಗೆ ವಿಶ್ರಾಂತಿ ನೀಡಿದೆ. ಪಾಕಿಸ್ತಾನ ವಿರುದ್ದ ಟಿ20 ಸರಣಿ ಮಾರ್ಚ್ 16ರಿಂದ ನಡೆಯಲಿದ್ದು ಈ ಒಂದು ಸರಣಿಗೆ 8 ಪ್ರಮುಖ ಆಟಗಾರರನ್ನು ಆಯ್ಕೆಯಿಂದ ಹೊರಗಿಡಲಾಗಿದೆ. ನಾಯಕ ಮಿಚೆಲ್ ಸ್ಯಾಂಟ್ನರ್, ಟಾಮ್ ಲ್ಯಾಥಮ್, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಡೆವೊನ್ ಕಾನ್ವೆ, ವಿಲ್ ಯಂಗ್ , ನಾಥನ್ ಸ್ಮಿತ್ ಹಾಗೂ ಜಾಕೋಬ್ ಡಫಿಗೆ ವಿಶ್ರಾಂತಿ ನೀಡಲಾಗಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ ಕಾರಣ ಇಶ್ ಸೋಧಿ, ಬೆನ್ ಸಿಯರ್ಸ್ ಅವರಂತಹ ಆಟಗಾರರು ತಂಡಕ್ಕೆ ವಾಪಸ್ ಆಗಿದ್ದಾರೆ. ಫಿನ್ ಅಲೆನ್, ಜೆಮ್ಮಿ ನೀಶಮ್, ಟಿಮ್ ಸೀಫರ್ಟ್, ಟಿಮ್ ರಾಬಿನ್ಸನ್ ಜ್ಯಾಕ್ ಫಾಕ್ಸ್ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
ನ್ಯೂಜೆಲೆಂಡ್ ತಂಡ:
ಮೈಕಲ್ ಬ್ರೇಸ್ವೆಲ್ (ನಾಯಕ), ಜಾಕೋಬ್ ಡಫಿ, ಟಿಮ್ ರಾಬಿನ್ಸನ್, ಇಶ್ ಸೋಧಿ, ಬೆನ್ ಸಿಯರ್ಸ್, ಕೈಲ್ ಜೇಮಿಸನ್, ಡೇರಿಲ್ ಮಿಚೆಲ್, ಅಲೆನ್ ಮಾರ್ಕ್, ಫಿನ್ ಅಲೆನ್, ಮಾರ್ಕ್ ಚಾಪ್ಮನ್, ಜ್ಯಾಕ್ ಫೌಲ್ಕ್ಸ್, ವಿಲ್ ಒರೋಕ್, ಟಮ್ ಸೀಫರ್ಟ್, ಮ್ಯಾಟ್ ಹೆನ್ರಿ.

ಅಭಿಷೇಕ್. ಎಸ್