Ashwaveega News 24×7 ಮಾರ್ಚ್ 02– 2026 : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಅತಿ ಉಚ್ಚ ಮಟ್ಟ ತಲುಪಿದೆ. Iran ಪ್ರತೀಕಾರದ ಪ್ರತಿಜ್ಞೆ ಮಾಡಿದ ಬೆನ್ನಲ್ಲೇ, Israel ನ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದಂತೆಯೆಂಬ ವರದಿಗಳು ಹರಿದಾಡುತ್ತಿವೆ.
Tel Aviv ಹಾಗೂ Jerusalem ನಲ್ಲಿ ಬಾಂಬ್ ದಾಳಿಯ ಸೈರನ್ಗಳು ಮೊಳಗಿದವು. ಆಕಾಶದಲ್ಲಿ ಮಿಸೈಲ್ಗಳ ಹೊಳಪು, ನೆಲದ ಮೇಲೆ ಭಾರೀ ಸ್ಫೋಟ—ಕಟ್ಟಡಗಳು, ಕಾರುಗಳು ಹಾನಿಗೊಳಗಾದ ದೃಶ್ಯಗಳು ಭೀತಿ ಮೂಡಿಸಿವೆ. ಮಧ್ಯರಾತ್ರಿ ಜನರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಘಟನೆಗಳು ವರದಿಯಾಗಿವೆ.
ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿರುವುದಾಗಿ ಹೇಳಲಾಗುತ್ತಿದ್ದು, ಇಸ್ರೇಲಿ ಸೈನಿಕ ನೆಲೆಗಳು ಹಾಗೂ ಅಮೆರಿಕದ ವಾಯುನೆಲೆಗಳನ್ನೂ ಗುರಿಯಾಗಿಸಿದ್ದಾಗಿ ದಾವೆ ಮಾಡಿದೆ.
ಇರಾನ್ನ ಪರಮೋಚ್ಚ ನಾಯಕ Ali Khamenei ವಿರುದ್ಧ ನಡೆದ ದಾಳಿಗೆ ಪ್ರತೀಕಾರವೆಂದು ಇರಾನ್ ಹೇಳಿಕೊಂಡಿದೆ ಎಂಬ ವರದಿಗಳು ಕೇಳಿಬರುತ್ತಿವೆ. “ವಿಶ್ವದ ದೊಡ್ಡಣ್ಣ” ಎಂದು ಕರೆಯಲ್ಪಡುವ United States ಮೇಲೆಯೂ ದಾಳಿ ಮುಂದುವರಿಸಿರುವ ಸೂಚನೆಗಳಿವೆ.
ಬಹ್ರೇನ್ ಸಮೀಪದ ಸಲ್ಮಾನ್ ಬಂದರಿನಲ್ಲಿ ಇದ್ದ ಅಮೆರಿಕದ ಯುದ್ಧನೌಕೆ USS Abraham Lincoln ಮೇಲೆ ದಾಳಿ ನಡೆಸಿದಂತೆಯೂ ಇರಾನ್ ದಾವೆ ಮಾಡಿದೆ. ಕ್ಷಿಪಣಿ ದಾಳಿಯಿಂದ ಅಮೆರಿಕದ ವಾಯುನೆಲೆಗಳು ಹಾನಿಗೊಳಗಾಗಿವೆ ಎಂಬ ಹೇಳಿಕೆಗಳು ಹೊರಬಿದ್ದಿವೆ .
Persian Gulf ಹಾಗೂ Strait of Hormuz ಪ್ರದೇಶದಲ್ಲಿ ಡ್ರೋನ್ ದಾಳಿಗಳಿಂದ ತೈಲ ಟ್ಯಾಂಕರ್ಗಳು ಬೆಂಕಿಗಾಹುತಿಯಾದ ವರದಿಗಳು ಸಿಕ್ಕಿವೆ. ಕುವೈತ್ನ Ali Al Salem Air Base ಸೇರಿ ಹಲವು ಸೈನಿಕ ನೆಲೆಗಳು ಗುರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಅಮೆರಿಕ ಸೈನಿಕರು ಮೃತಪಟ್ಟಿರುವ ಬಗ್ಗೆ ಅಧಿಕೃತ ದೃಢೀಕರಣ ಇನ್ನಷ್ಟೇ ನಿರೀಕ್ಷೆಯಲ್ಲಿದೆ. ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಿಂದ ಅಪಾರ ಸಾವು-ನೋವು ಸಂಭವಿಸಿರುವ ಭೀತಿ ವ್ಯಕ್ತವಾಗಿದೆ.
