ಅಥಣಿ ತಾಲೂಕಿನ ಚಮಕೇರಿ ಮಡ್ಡಿಯ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ ಇದರಿಂದ ಶಾಲೆಗೆ ಬರುವ ಮಕ್ಕಳಿಗೂ ತೊಂದರೆ ಕಾಯಿಲೆಗಳು ಮೊದಲು ಇಲ್ಲಿ ಕಸ ಹಾಕಿದವರಿಗೆ ಹೇಳಬೇಕು ಸ್ವಚ್ಛತೆಯನ್ನು ಕಾಪಾಡಿ ಅಂತ ಕಸದ ರಾಶಿ ಸ್ವಚ್ಛ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ
ಕಸದ ರಾಶಿಯಿಂದ ಸೊಳ್ಳೆಗಳು ಹೆಚಾಗಿ ಡೆಂಗ್ಯೂ ಪ್ರಕರಣಗಳು ದಿನ ದಿನಕ್ಕೆ ಹೆಚ್ಚಾತ್ತಾ ಇದೆ.ಇದರಿಂದ ಇಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಂಡು ಗ್ರಾಮಸ್ಥರು ಓಡಾಡುತ್ತಿದ್ದಾರೆ. ಇದರ ವಿಚಾರ ಅಧಿಕಾರಿಗಳಿಗೆ ತಿಳಿಸಿದರೆ ಪಂಚಾಯಿತಿಯವರಿಗೆ ಹೇಳಿದರೆ ಮುನ್ಸಿಪಾಲ್ಗೆ ತಿಳಿಸಿ ಎಂದು ಹೇಳುತ್ತಾರೆ 2-3ತಿಂಗಳಿಂದ ಈ ಕಸದ ರಾಶಿ ಹೀಗೆ ಬಿದ್ದಿದೆ. ಎಂದು ಸಂಗಮೇಶ್ ಪಲ್ಲಕ್ಕಿ ಹೇಳಿದ್ದಾರೆ. ಇದರಿದ ಬೇಸತ್ತ ಸ್ಥಳೀಯರು ಗ್ರಾಂ ಪಂ ಅಧಿಕಾರಿಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ