ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಬಳ್ಳಾರಿ ಜೈಲಿನಲ್ಲಿದ್ದಂತಹ ನಟ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದು ರಿಲೀಸ್ ಆಗಿದ್ದಾರೆ. ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದರ್ಶನ್ ಗೆ ಕಾದಿದ್ಯಾ ಕಂಟಕ ? ಕೆಂಗೇರಿಯ ಬಿಜಿಎಸ್ ವೈದ್ಯರು ಸರ್ಜರಿ ಮೊರೆ ಹೋಗದೆ ಇದ್ದರೆ ದರ್ಶನ್ ಗೆ ಸಂಕಷ್ಟ ಕಾದಿದೆ ಎಂದು ಹೇಳಲಾಗುತ್ತಿದೆ. ನಟ ದರ್ಶನ್ ಅವರು ಬೇಲ್ ಭವಿಷ್ಯವೇ ತಜ್ಞ ವೈದ್ಯರ ಕೈಯಲ್ಲಿದೆ ಎಂದು ಹೇಳಲಾಗುತ್ತಿದೆ.
ನವೆಂಬರ್ 4ರಂದು ದರ್ಶನ್ ಅವರ ಮೆಡಿಕಲ್ ಕಂಡೀಷನ್ ಬಗ್ಗೆ ಬಿಜಿಎಸ್ ವೈದ್ಯರ ತಂಡ ಆಸ್ಪತ್ರೆಯಲ್ಲಿ ಸಭೆ ನಡೆಸಿತ್ತು. ಎಕ್ಸ್ ರೇ, ಎಂಆರ್ ಐ ಸ್ಕ್ಯಾನಿಂಗ್ ರಿಪೋರ್ಟ್ ಬಂದ್ಮೇಲೆ ಮೀಟಿಂಗ್ ಮಾಡಿದ್ದು ಈ ಎಲ್ಲ ಟೆಸ್ಟ್ ರಿಪೋರ್ಟ್ಗಳು ಕೂಡಾ ಬುಧವಾರದಂದು ಕೋರ್ಟ್ಗೆ ಸಲ್ಲಿಕೆಯಾಗಲಿದೆ. ನ್ಯೂರೋಲಾಜಿಸ್ಟ್ ಡಾ. ನವೀನ್ ಹಾಗೂ ತಂಡದ ವೈದ್ಯರ ಜೊತೆ ಚರ್ಚೆ ನಡೆಸಲಾಗಿತ್ತು ಎಂದು ಹೇಳಲಾಗಿದೆ. ನಟ ದರ್ಶನ್ ಗೆ ಥೆರಪಿ ಮಾಡ್ಬೇಕಾ? ಸರ್ಜರಿ ಮಾಡಬೇಕಾ ಅಂತಾ ಈ ಬಗ್ಗೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ವೈದ್ಯರ ಟೀಂ ಕೂಲಂಕುಷವಾಗಿ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗಿದೆ.
2 ದಿನದಲ್ಲಿ ಕೋರ್ಟ್ ಗೆ ವೈದ್ಯಕೀಯ ರಿಪೋರ್ಟ್ ನೀಡಬೇಕು. ಆ ರಿಪೋರ್ಟ್ ಮೇಲೆ ದರ್ಶನ್ ಮುಂದಿನ ಹಾದಿ ನಿಂತಿದೆ ಎಂದು ಹೇಳಲಾಗ್ತಿದೆ. ಇನ್ನು ನೋವಿನ ಸಂಬಂಧ ಫಿಜಿಯೋಥೆರಪಿಯಿಂದ ಚಿಕಿತ್ಸೆ ಕೊಡೋದಾದ್ರೆ ದರ್ಶನ್ ಬೇಲ್ ಗೆ ಕುತ್ತು ಬರುತ್ತೆ ಎನ್ನಲಾಗುತ್ತಿದೆ. ಫಿಜಿಯೋ ಥೆರಪಿಯಿಂದಲೇ ಚಿಕಿತ್ಸೆ ಮುಂದುವರಿಕೆ ಅಂದರೆ ಪಕ್ಕಾ ನಟನಿಗೆ ಕಷ್ಟ ತಪ್ಪಿದ್ದಲ್ಲ ಎಂದು ಹೇಳಲಾಗುತ್ತೆ . ಸದ್ಯ ನಟ ದರ್ಶನ್ ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದು ಸರ್ಜರಿ ಮಾಡುವ ಸಲುವಾಗಿ, ನಟನಿಗೆ ತೀವ್ರ ಬೆನ್ನು ನೋವಿದೆ, ಹಾಗಾಗಿ ಸರ್ಜರಿ ಮಾಡಬೇಕು ಎಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ಮನವಿ ಮಾಡಿದ್ದರು. ಇದಕ್ಕಾಗಿ 6 ವಾರಗಳ ಜಾಮೀನು ನೀಡಲಾಗಿತ್ತು. ಸರ್ಜರಿ ಹಿನ್ನೆಲೆ ಆರು ವಾರಗಳ ಮದ್ಯಂತರ ಜಾಮೀನು ನೀಡಲಾಗಿತ್ತು.
ಆದರೆ ಫಿಜಿಯೋಥೆರಪಿಗೆ ಅಷ್ಟು ದಿನ ಬೇಕಾಗಿಲ್ಲ. ಅದನ್ನು ಜೈಲಿನಲ್ಲಿದ್ದರೂ ಮಾಡಬಹುದು ಎಂಬ ಮಾತುಗಳೂ ಕೇಳಿ ಬರುತ್ತಿದೆ. ದರ್ಶನ್ ಮುಂದಿನ ಭವಿಷ್ಯ ಸದ್ಯ ಬಿಜಿಎಸ್ ವೈದ್ಯರ ಕೈಯಲ್ಲಿದೆ ಎಂದು ಹೇಳಲಾಗುತ್ತಿದೆ. ಬುಧವಾರ ನಟ ದರ್ಶನ್ ಅವರು ಮೆಡಿಕಲ್ ಟೆಸ್ಟ್ ರಿಪೋರ್ಟ್ಗಳು ಕೋರ್ಟ್ಗೆ ಸಲ್ಲಿಕೆಯಾಗಲಿದೆ.
ದರ್ಶನ್ BGS ಆಸ್ಪತ್ರೆಯ ಸ್ಪೇಷಲ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ದರ್ಶನ್ ಭೇಟಿಗೆ ಯಾರೆಲ್ಲಾ ಬರ್ತಿದ್ದಾರೆ ? ಯಾರೆಲ್ಲ ಭೇಟಿ ಆಗ್ತಾರೆ ? ಭೇಟಿಗೆ ಯಾರಾದರೂ ಪ್ರಯತ್ನ ಮಾಡ್ತಿದ್ದಾರಾ ? ಅನ್ನೋ ಬಗ್ಗೆ ನಿಗಾ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ 3 ತಿಂಗಳು ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡದಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ಸೂಚನೆ ಕೊಡಲಾಗಿದೆ. ಕೋರ್ಟ್ ಗೆ ಮೆಡಿಕಲ್ ರಿಪೋರ್ಟ್ ಸಬ್ಮಿಟ್ ಗೆ ನಾಳೆ ಕೊನೆ ದಿನವಾಗಿದ್ದು ಇಂದು ಅಥವಾ ನಾಳೆ ವರದಿ ಸಲ್ಲಿಕೆಯಾಗಲಿದೆ. ಬಹುತೇಕ ನಾಳೆಯೇ ಕೋರ್ಟ್ ಗೆ ಮೆಡಿಕಲ್ ರಿಪೋರ್ಟ್ ಸಬ್ಮಿಟ್ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಔಷಧಿ ಮತ್ತು ಪಿಸಿಯೋಥೆರಫಿ ಮೂಲಕವೇ ಚಿಕಿತ್ಸೆ ಕೊಡಲು ದರ್ಶನ್ ತಿಳಿಸಿದ್ದಾರಂತೆ..