ಬೆಂಗಳೂರು : ಸ್ಯಾಂಡಲ್ ವುಡ್ ನಟ ದರ್ಶನ್ ಅಭಿನಯದ ನವಗ್ರಹ ಸಿನಿಮಾ ರೀ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳ ಉತ್ಸುಹಕ್ಕೆ ನೆಲೆಯೇ ಇಲ್ಲದ್ದಂತಾಗಿದೆ.
ಇನ್ನೂ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ವರ್ತನೆ ಮಿತಿಮೀರದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಅಭಿಮಾನಿಗಳ ಅತೀರೇಕದ ವರ್ತನೆಗೆ ಬ್ರೇಕ್ ಹಾಕಲು ವಿಡಿಯೋ ರೆಕಾರ್ಡಿಂಗ್ ಕೂಡಾ ಮಾಡಿಕೊಳ್ಳಲಾಗಿತ್ತು. ಜೊತೆಗೆ 16 ವರ್ಷಗಳ ನಂತರ ಮತ್ತೆ ತೆರೆಮೇಲೆ ಈ ಸಿನಿಮಾ ಮೇಲೆದಿದ್ದು ಅಬ್ಬರ ಮತ್ತಷ್ಟು ಜೋರಾಗಿದೆ. ಬೆಳಗ್ಗೆ 7.30 ರಿಂದ ಪ್ರಸನ್ನ ಚಿತ್ರಮಂದಿರದಲ್ಲಿ ಪ್ರಸಾರ ಆರಂಭವಾಗಿದ್ದು, ಅಭಿಮಾನಿಗಳ ಆರ್ಭಟವು ಜೋರಾಗಿತ್ತು.
ಇನ್ನೂ ನವಗ್ರಹ ಸಿನಿಮಾದಲ್ಲಿ ದರ್ಶನ್ ಜೊತೆಗೂಡಿ ಖ್ಯಾತ ಖಳನಾಯಕರ ಮಕ್ಕಳು ಅಭಿನಯಿಸಿದ್ದಾರೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ದಿನಕರ್ ತೂಗುದೀಪ್ ಡೈರೆಕ್ಷನ್ ಮಾಡಿದ ಸಿನಿಮಾ ಇದಾಗಿದೆ. ಈ ರೀತಿಯಾಗಿ ದರ್ಶನ್ ಅಭಿನಯದ ನವಗ್ರಹ ರೀ ರಿಲೀಸ್ ಆಗಿದ್ದು ಮತ್ತೊಮ್ಮೆ ಸಖತ್ ಸೌಂಡ್ ಮಾಡಿದೆ.