
Ashwaveega News 24×7 ಅಕ್ಟೋಬರ್. 03: ಮಕ್ಕಳಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಬೆದರಿಕೆಯನ್ನು ಎತ್ತಿ ತೋರಿಸುವ ಸಲುವಾಗಿ ಅಕ್ಷಯ್ ಕುಮಾರ್ ತಮ್ಮ ಜೀವನದ ಘಟನೆಯನ್ನು ಹಂಚಿಕೊಂಡಿದ್ದಾರೆ. ತಮ್ಮ 13 ರ್ಷದ ಪುತ್ರಿ ಆನ್ಲೈನ್ ವಿಡಿಯೋ ಗೇಮ್ ಆಡುತ್ತಿದ್ದಾಗ ಆಗಿರುವ ಅನುಭವವನ್ನು ಅಕ್ಷಯ್ ಕುಮಾರ್ ಶುಕ್ರವಾರ ಹಂಚಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ಅವರ ಪುತ್ರಿ ಆನ್ಲೈನ್ ವಿಡಿಯೋ ಗೇಮ್ ಆಡುತ್ತಿದ್ದಾಗ, ಅನಾಮಿಕ ವ್ಯಕ್ತಿಯೊಬ್ಬ ಆನ್ಲೈನ್ಗೆ ಬಂದು ಆಕೆಯ ಚಿತ್ರವನ್ನು ಕಳಿಸುವಂತೆ ಹೇಳಿದ್ದ ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಇಂದು ಮುಂಬೈನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸೈಬರ್ ಜಾಗೃತಿ ತಿಂಗಳು 2025 ರ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟ ತಮ್ಮ ಅನುಭವವನ್ನು ಮೆಲುಕು ಹಾಕಿದರು.
“ಕೆಲವು ತಿಂಗಳ ಹಿಂದೆ ನನ್ನ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ನಾನು ನಿಮಗೆಲ್ಲರಿಗೂ ಹೇಳಲು ಬಯಸುತ್ತೇನೆ. ನನ್ನ ಮಗಳು ವಿಡಿಯೋ ಗೇಮ್ ಆಡುತ್ತಿದ್ದಳು. ಆನ್ಲೈನ್ನಲ್ಲಿ ನೀವು ಯಾರ ಜೊತೆಗೆ ಬೇಕಾದರೂ ಆಡಬಹುದಾದಂಥ ವಿಡಿಯೋ ಗೇಮ್ಗಳು ಇವೆ. ಇಲ್ಲಿ ನೀವು ಅಪರಿಚಿತ ವ್ಯಕ್ತಿಯ ಜೊತೆ ಆಡುತ್ತಿರುತ್ತೀರಿ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.