
ಇಂದು ಚಾಂಪಿಯನ್ಸ್ ಟ್ರೋಫಿ ಗ್ರೂಪ್ ಬಿನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆಸೀಸ್ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿದರೆ, ದಕ್ಷಿಣ ಆಫ್ರಿಕಾ ಆಫ್ಗಾನಿಸ್ತಾನ ವಿರುದ್ದ ಜಯ ಗಳಿಸಿತ್ತು. ಈಗ ಉಭಯ ತಂಡಗಳ ಹಣಾಹಣಿಗೆ ರಾವಲ್ಪಿಂಡಿ ಸ್ಡೇಡಿಯಂ ವೇದಿಕೆಯಾಗಲಿದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ರ್ಯಾನ್ ರಿಕೆಲ್ಟನ್, ನಾಯಕ ತೆಂಬಾ ಬವೂಮಾ, ಡಎನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಮಾರ್ಕೋ ಜಾನ್ಸೆನ್, ಕಗಿಸೊ ರಬಾಡ, ಹೆನ್ರಿಕ್ ಕ್ಲಾಸೆನ್ರಂತಹ ಆಟಗಾರರಿದ್ದಾರೆ. ಆಸೀಸ್ ತಂಡದಲ್ಲಿ ಸ್ಟಾರ್ ಸ್ವೀವನ್ ಸ್ಮಿತ್, ಜೋಶ್ ಇಂಗ್ಲೀಶ್, ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸವೆಲ್, ನೆಥಾನ್ ಎಲಿಸ್, ಸ್ಪೆನ್ಸರ್ ಜಾನ್ಸನ್, ಆಡಮ್ ಝಂಪಾರಂತಹ ಮ್ಯಾಚ್ ಪ್ಲೇಯರ್ಸ್ ಇದ್ದು ಇಂದಿನ ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ..

ಅಭಿಷೇಕ್.ಎಸ್