
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ಅತ್ಯಂತ ಹೀನಾಯ ಪ್ರದರ್ಶನ ನೀಡಿ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ. ಟೂರ್ನಿ ಅತಿಥ್ಯ ಹಕ್ಕನ್ನು ಈ ಬಾರಿ ಪಾಕಿಸ್ತಾನದಲ್ಲಿ ನಡೆಸಲು ಪಾಕ್ ಸಾಕಷ್ಟು ಕಸರತ್ತು ನಡೆಸಿತ್ತು. ಆದರೆ ಟೂರ್ನಿ ಮೊದಲಾದ ಎರಡೇ ಪಂದ್ಯಕ್ಕೆ ಸೆಮಿಫೈನಲ್ ರೇಸ್ನಿಂದ ಹೊರ ಬಂದಿದೆ. ಹೀಗಾಗಿ ಪಾಕಿಸ್ತಾನ ತಂಡಕ್ಕೆ ಭಾರೀ ಟೀಕೆಗಳೇ ಕೇಳಿ ಬರುತ್ತಿದೆ. ಹಲವು ಮಾಜಿ ಕ್ರಿಕೆಟಿಗರು ಸೇರಿ ಕೆಂಡಮಂಡಲರಾಗಿದ್ದಾರೆ. ಇದೊಂದು ಬುದ್ದಿ ವಿವೇಚನೆ ಇಲ್ಲದ ತಂಡವೆಂದು ಪಾಕ್ ಮಾಜಿ ವೇಗಿ ಶೋಯೆಬ್ ಅಕ್ತರ್ ಕಿಡಿಕಾರಿದ್ದಾರೆ. ಇದಲ್ಲದೇ ವಾಸಿಂ ಅಕ್ರಂ, ಮಾಜಿ ಕೋಚ್ ಹಫೀಜ್, ಜಾವೆದ್, ಮೊಯಿನ್ ಖಾನ್ ಕೂಡ ತಂಡದ ಆಟದ ಶೈಲಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ 60 ರನ್ಗಳ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಭಾರತ ವಿರುದ್ದ 6 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿತ್ತು. ಆ ಮೂಲಕ ಪಾಕಿಸ್ತಾನ ಇನ್ನೂ ಒಂದು ಪಂದ್ಯ ಇರುವಾಗಲೇ ಸೆಮಿಫೈನಲ್ ರೇಸ್ನಿಂದ ಹೊರಬಿದಿದ್ದೆ.

ಅಭಿಷೇಕ್. ಎಸ್