
2025ರ ಐಪಿಎಲ್ ಟೂರ್ನಿಗೂ ಮುನ್ನ ಬಿಸಿಸಿಐ 10 ತಂಡದ ನಾಯಕರ ಜೊತೆ ಸಭೆ ಕರೆದಿದೆ. ಈ ಸಭೆ ಮಾರ್ಚ್ 20 ರಂದು ಮುಂಬೈನಲ್ಲಿ ನಡೆಯಲಿದೆ. ಪ್ರಮುಖವಾಗಿ ಹೊಸ ನಿಯಮಗಳು ಹಾಗೂ ಇತರೆ ವಿಷಯಗಳ ಮೇಲೆ ಚರ್ಚೆಯಾಗಲಿದೆ. ಹೀಗಾಗಿ ಎಲ್ಲ ತಂಡದ ನಾಯಕರು ತಮ್ಮ ತಂಡವನ್ನು ತೊರೆದು ಮುಂಬೈಗೆ ತೆರಳ ಬೇಕಾಗಿದೆ. ಬಿಸಿಸಿಐ ಕರೆ ಕೊಟ್ಟಿರುವ ಈ ಸಭೆಯಲ್ಲಿ 10 ತಂಡದ ನಾಯಕರ ಪೋಟೋ ಶೂಟ್ ಕೂಡ ನಡೆಯಲಿದೆ. ವರದಿಗಳ ಪ್ರಕಾರ ಬಿಸಿಸಿಐನ ಸಭೆಯಲ್ಲಿ ತಗಂಡದ ನಾಯಕರು ಅಲ್ಲದೇ ಫ್ರಾಂಚೈಸಿಗಳ ವ್ಯವಸ್ಥಾಪಕರು ಸಹ ಹಾಜರಾಗುವಂತೆ ಸೂಚಿಸಲಾಗಿದೆ. ಸುಮಾರು 1 ಗಂಟೆಗಳ ನಡೆಯಲಿರುವ ಈ ಸಭೆಯಲ್ಲಿ ಹೊಸ ನಿಯಮಗಳ ಬಗ್ಗೆ ನಾಯಕರಿಗೆ ಮಾಹಿತಿ ಕೊಡಲಾಗುತ್ತದೆ. ಸಭೆ ನಂತರ ತಾಜ್ ಹೋಟೆಲ್ನಲ್ಲಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಆ ಕಾರ್ಯಕ್ರಮ 4 ಗಂಟೆಗಳ ಕಾಲ ನಡೆಯಲಿದೆ. ನಂತರ ಎಲ್ಲಾ 10 ತಂಡದ ನಾಯಕರ ಜೊತೆ ಪೋಟೋ ಶೂಟ್ ಮೂಲಕ ಕಾರ್ಯಕ್ರಮ ಕೊನೆಗೊಳ್ಳಲಿದೆ.
