
foods you should never store in your fridge
Ashwaveega News 24×7 ಜು. 30: ಪ್ರತಿಯೊಬ್ಬರ ಮನೆಯಲ್ಲಿ ಅಮ್ಮಂದಿರು ಮಾಡುವ ಕೆಲಸ ಏನಪ್ಪ ಅಂದರೆ ಮಾರುಕೆಟೀಗೆ ಹೋದಾಗ, ಹಾಲು ಮೊಸರು, ತಾಜಾ ಹಣ್ಣು ತರಕಾರಿಗಳು, ಹೂಲಸೇಲ್ ನಲ್ಲಿ ಸಿಗುವ ಮೊಟ್ಟೆಗಳು, ಎರಡು ದಿನಕ್ಕೆ ಆಗುವಷ್ಟು ಸಮಗ್ರಿಗಳನ್ನು ಖರೀದಿಸಿ, ಬಳಿಕ ಕ್ಲೀನ್ ಮಾಡಿ ಫ್ರಿಡ್ಜ್ ನಲ್ಲಿ ಇಡ್ತಾರೆ…ಇದಷ್ಟೇ ಅಲ್ಲದೆ ರಾತ್ರಿ ಊಟ ಮಾಡಿ ಉಳಿದ ಆಹಾರ ಪದಾರ್ಥ ಗಳನ್ನ ಸಹ, ಈಗಾಗಲೇ ಫ್ರಿಡ್ಜ್ ನಲ್ಲಿ ಇಟ್ಟಿರುವ ಹಣ್ಣು ತರಕಾರಿಗಳ, ಮಧ್ಯದಲ್ಲಿ ಜಾಗ ಮಾಡಿ ಇಡ್ತಾರೆ… ಎಸ್ ಹೀಗೆ ಮಾಡಬಾರದು ಹಾಗಾದ್ರೆ ಯಾವಲ್ಲಾ ಆಹಾರಗಳನ್ನು ಫ್ರಿಡ್ಜ್ ನಲ್ಲಿ ಇಡಬಾರದು ಅಂತ ನಾವು ಹೇಳ್ತಿವಿ….
• ಟೊಮೇಟೊ ಹಣ್ಣುಗಳ ಬೆಲೆ ಒಮ್ಮೆ ಗಗನಕ್ಕೆ ಏರಿದರೆ, ಮತ್ತೊಮ್ಮೆ ಪಾತಾಳಕ್ಕೆ ಇಳಿಯುತ್ತದೆ… ಹೀಗಾಗಿ ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೆಲೆ ಕಡಿಮೆ ಇದ್ದಾಗ ತಗೊಂಡು ನೇರವಾಗಿ ಫ್ರಿಡ್ಜ್ ನಲ್ಲಿ ಇಟ್ಟುಬಿಡುತ್ತೇವೆ. ಕಾರಣ ಇಷ್ಟೇ ಟೊಮೆಟೋ ಬೇಗನ ಹಾಳಾಗಬಾರದು ಎಂದು….ಆದರೆ ಆಹಾರ ತಜ್ಞರ ಪ್ರಕಾರ ಟೊಮೆಟೋ ಹಣ್ಣುಗಳು ಫ್ರಿಡ್ಜ್ ಗಿಂತ ಹೊರಗಡೆ ಇದ್ದರೆ ಅವುಗಳ ತಾಜಾತನ ದೀರ್ಘಕಾಲ ಉಳಿಯುತ್ತದೆ…ಜೊತೆಗೆ ಬೇಗೆ ಹಾಳಾಗುವುದಿಲ್ಲವಂತೆ, ಫ್ರಿಡ್ಜ್ ನಲ್ಲಿ ಅತಿಯಾದ ತಂಪು ವಾತಾವರಣ ಇರುವುದರಿಂದ ಟೊಮೇಟೊ ಹಣ್ಣಿನ ಮೇಲ್ಭಾಗದ ಸಿಪ್ಪೆ ಸುಕ್ಕುಗಟ್ಟುತ್ತದೆ ಹಾಗೂ ಬೇಗನೇ ಹಾಳಾಗುತ್ತದೆ….
ಟೊಮೆಟೊದಂತೆ, ಈರುಳ್ಳಿ ಬೆಲೆಯಲ್ಲೂ ಕೂಡ, ಏರುಪೇರು ಆಗುತ್ತಲೇ ಇರುತ್ತದೆ. ಹೀಗಾಗಿ ಈರುಳ್ಳಿ ಬೇಗನೆ ಹಾಳಾಗ ಬಾರದೆಂದು ಫ್ರಿಡ್ಜ್ ನಲ್ಲಿ ಶೇಖರಿಸಿಡುವಂತಹ ಅಭ್ಯಾಸ ಇಟ್ಟುಕೊಂಡಿರುತ್ತಾರೆ ಆದರೆ ಈ ರೀತಿ ಮಾಡುವುದರಿಂದ, ಈರುಳ್ಳಿಗಳು ತೇವಾಂಶದ ವಾತಾವರಣವನ್ನು ಹೊಂದಿಕೊಂಡು, ಬಹಳ ಕೊಳೆತು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ವರ್ಷ ಪೂರ್ತಿ ಸಿಗುವಂತಹ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಬೇರೆ ಹಣ್ಣುಗಳಿಗೆ ಹೋಲಿಸಿದರೆ ಕೈಕೆಟಕುವ ಬೆಲೆಯಲ್ಲಿ ಸಿಗುವ ಈ ಹಣ್ಣು ಎಲ್ಲರ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ…
• ಆದರೆ ಮನೆಯಲ್ಲಿ ಲಭ್ಯವಿರುವ ಎಲ್ಲಾ ಹಣ್ಣುಗಳನ್ನು ಒಂದೇ ಬಾರಿ ಸೇವಿಸಲು ಸಾಧ್ಯವಾಗುವುದಿಲ್ಲ. ಅವುಗಳನ್ನು ಹಾಗೆಯೇ ಬಿಟ್ಟರೆ ಹಾಳಾಗುವ ಸಾದ್ಯತೆ ಹೆಚ್ಚಿರುತ್ತದೆ…
• ಫ್ರಿಡ್ಜ್ ನಲ್ಲಿ ಅತಿಯಾದ ತಂಪು ವಾತಾವರಣ ಜೊತೆಗೆ ತೇವಾಂಶ ಕೂಡ ಜಾಸ್ತಿ ಆಗಿರುವುದರಿಂದ, ಆಲೂಗಡ್ಡೆಗಳು ಬಹಳ ಬೇಗನೆ ಹಾಳಾಗಿ ಬಿಡುತ್ತದೆ. ಹೀಗಾಗೆ ಮನೆಯ ವಾತಾವರಣಕ್ಕೆ ಹೊಂದಿಕೆಯಾಗುವ ಹಾಗೆ, ತರಕಾರಿಯ ಬುಟ್ಟಿಯಲ್ಲಿ ಹಾಕಿ ಇವುಗಳನ್ನು ಇರಿಸಬಹುದು….
• ಅಷ್ಟೇ ಅಲ್ಲದೆ ಈ ತರಕಾರಿಯನ್ನು ಫ್ರಿಡ್ಜ್ ನಲ್ಲಿ ಇಟ್ಟರೆ, ಇವುಗಳ ಪೋಷಕಾಂಶಗಳು, ತಂಪಿನ ವಾತಾವರಣದಿಂದಾಗಿ ಹಾಳಾಗಿ, ಅವುಗಳ ರುಚಿ ಕೂಡ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.
• ಜೇನು ಎಂದೂ ಕೆಡದ ಆಹಾರ ಪದಾರ್ಥ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ… ಹೀಗಾಗಿ ಜೇನನ್ನು ಎಷ್ಟೋ ವರ್ಷಗಳ ಕಾಲ ಬೇಕಾದರೂ ಜೋಪಾನವಾಗಿಟ್ಟುಕೊಂಡು, ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಆದರೆ ಕೆಲವರು ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಟ್ಟುಬಿಡುತ್ತಾರೆ ಆ ತಪ್ಪು ನೀವು ಮಾಡಬೇಡಿ .
• ಆದರೆ ತಜ್ಞರು ಹೇಳುವ ಪ್ರಕಾರ ಯಾವುದೇ ಕಾರಣಕ್ಕೂ ಕೂಡ ಜೇನನ್ನು ಫ್ರಿಡ್ಜ್ ನಲ್ಲಿ ಇಡಬಾರದಂತೆ. ಯಾಕೆಂದ್ರೆ ಇಂತಹ ತಂಪಾದ ವಾತಾವ ರಣದಲ್ಲಿ ಜೇನನ್ನು ಇಟ್ಟರೆ, ಇದು ಹಾಗೆಯೇ ಗಟ್ಟಿಯಾಗಿ ಬಿಡುತ್ತದೆ . ಜೊತೆಗೆ ಇದರಲ್ಲಿರುವ ಪೋಷ ಕಾಂಶಗಳು ಕೂಡ ಹಾಳಾಗಿ ಬಿಡುತ್ತದೆಯಂತೆ.
ಕಲ್ಲಂಗಡಿ ಹಣ್ಣಿನ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ, ನೀರಿನಾಂಶದ ಪ್ರಮಾಣವನ್ನು ಸಾಕಷ್ಟು ಒಳಗೊಂಡಿರುವ ಈ ಹಣ್ಣನ್ನು ಯಾವುದೇ ಕಾರಣಕ್ಕೂ ಕೂಡ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಾರದು.ಯಾಕೆಂದ್ರೆ ಫ್ರಿಡ್ಜ್ ನ ತಂಪಾದ ವಾತಾವರಣವು, ಈ ಹಣ್ಣಿನಲ್ಲಿ ಸಿಗುವ ಎಲ್ಲಾ ಪೌಷ್ಟಿಕ ಸತ್ವಗಳನ್ನು ಕೂಡ ಕಳೆದುಹೋಗುವಂತೆ ಮಾಡುತ್ತದೆ. ಹೀಗಾಗಿ ಈ ಹಣ್ಣನ್ನು ಆದಷ್ಟು ಮನೆಯ ಕೋಣೆಯ ತಾಪಮಾನದಲ್ಲಿ ಇಟ್ಟರೆ ಒಳ್ಳೆಯದು.