
Ashwaveega News 24×7 ಸೆ. 28: ಬಿಗ್ಬಾಸ್ ಕನ್ನಡ ಸೀಸನ್ 12 ಇಂದು (ಸೆಪ್ಟೆಂಬರ್ 28) ಪ್ರಾರಂಭ ಆಗಲಿದೆ. ಕಿಚ್ಚ ಸುದೀಪ್ ಅವರು ಈ ಬಾರಿಯೂ ಬಿಗ್ಬಾಸ್ ನಿರೂಪಣೆ ಮಾಡಲಿದ್ದಾರೆ. ಇನ್ನೊವೇಟಿವ್ ಫಿಲಂ ಸಿಟಿಯಲ್ಲಿ ಅದ್ಧೂರಿಯಾಗಿ ಬಿಗ್ಬಾಸ್ ಮನೆ ನಿರ್ಮಾಣ ಮಾಡಲಾಗಿದ್ದು, ಬಿಗ್ಬಾಸ್ ಮನೆಯ ಸಣ್ಣ ಝಲಕ್ ಅನ್ನು ಸುದೀಪ್ ಅವರು ಇಂದು ತೋರಿಸಿದ್ದಾರೆ.

ಇನ್ನು ಈ ಬಾರಿ 18 ಮಂದಿ ಬಿಗ್ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ. ಈ ಬಾರಿ ಮನೆ ಪ್ರವೇಶಿಸುವ 18 ಮಂದಿ ಯಾರು? ಇಲ್ಲಿದೆ ಸಂಭಾವ್ಯ ಪಟ್ಟಿ…
ನಟ ಕಾಕ್ರೂಚ್ ಸುಧಿ ಈ ಬಾರಿ ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ. ಪ್ರತಿ ಸೀಸನ್ನಲ್ಲೂ ಕೆಲ ಹಿರಿಯ ನಟ, ನಟಿಯರನ್ನು ಬಿಗ್ಬಾಸ್ ಮನೆಗೆ ಕರೆತರಲಾಗುತ್ತದೆ. ಅಂತೆಯೇ ಈ ಬಾರಿ ಮಂಜು ಭಾಷಿಣಿ ಅವರನ್ನು ಬಿಗ್ಬಾಸ್ ಮನೆಗೆ ಕರೆತರಲಾಗಿದೆ. ಹಲವು ಸಿನಿಮಾಗಳು, ಧಾರಾವಾಹಿಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಮಂಜು ಭಾಷಿಣಿ ಸಂಪಾದಿಸಿದ್ದಾರೆ.
ನಿರೂಪಕಿ ಆಗಿ ಜನಪ್ರಿಯರಾಗಿರುವ ಜಾಹ್ನವಿ, ‘ಗೀತ’ ಧಾರಾವಾಹಿ ನಾಯಕ ಧನುಷ್ ಗೌಡ , ಹಾಸ್ಯ ನಟ ಗಿಲ್ಲಿ, ನಟಿ ರಾಶಿಕ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕ ಅಧ್ಯಕ್ಷೆ ಅಶ್ವಿನಿ ಗೌಡ, ಕೊತ್ತಲವಾಡಿ ಸಿನಿಮಾದ ನಟಿ ಕಾವ್ಯ ಶೈವ, ಚಂದ್ರಪ್ರಭಾ, ಆರ್. ಜೆ ಆಗಿರುವ ಅಮಿತ್, ಡಾಗ್ ಸತೀಶ್ , ನಟಿ ಸ್ಪಂದನ ಸೋಮಣ್ಣ, ‘ಕೋಟಿ’ ಸಿನಿಮಾದ ವಿಲನ್ ‘ಅಭಿ’, ಕರಾವಳಿ ಯೂಟುಬರ್ ರಕ್ಷಿತ ಶೆಟ್ಟಿ, ಕರಿಬಸಪ್ಪ, ಸಿಂಗರ್ ಮಲ್ಲು, ಮುದ್ದುಲಕ್ಷ್ಮೀ ಧಾರಾವಾಹಿಯ ನಟ ಚರಿತ್ ಬಾಳಪ್ಪ, ನಟಿ ಅಶ್ವಿನಿ ಹಾಗು ಮಲ್ಲಮ್ಮ ಈ ಬಾರಿ ಬಿಗ್ಬಾಸ್ ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ.