
ಇಂಗ್ಲೆಂಡ್ ನಡುವಿನ 5ನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾಗೆ 150 ರನ್ಗಳ ಭರ್ಜರಿ ಜಯ ಗಳಿಸಿದೆ. ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಲೇ ಸಂಜು ಸಾಮ್ಸನ್ ವಿಕೆಟ್ ಕಳೆದು ಕೊಂಡ ಭಾರತಕ್ಕೆ ಎಡಗೈ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಭರ್ಜರಿ ಶತಕ ಸಿಡಿಸಿದರು. 250 ಸ್ಟ್ರೇಕ್ರೇಟ್ನೊಂದಿಗೆ ಬಿರುಸಿನ ಆಟವಾಡಿದ ಅಭಿಷೇಕ್ 54 ಎಸೆತಗಳಲ್ಲಿ (135) ರನ್ ಗಳಿಸಿದರು, ಅವರ ಇನ್ನಿಂಗ್ಸ್ನಲ್ಲಿ 7 ಪೋರ್,13 ಸಿಕ್ಸ್ರ್ಗಳಿದ್ದವು. ಒಂದು ಕಡೆ ಅಭಿಷೇಕ್ ಶರ್ಮಾ ಅಬ್ಬರದ ಆಟವಾಡುತ್ತಿದ್ದರೆ,ಇನ್ನೊಂದು ಕಡೆ ಇತರ ಬ್ಯಾಟರ್ಗಳು ಹೆಚ್ಚು ಶಬ್ದ ಮಾಡಲಿಲ್ಲ. ಶಿವಂ ದುಬೆ (30), ಅಕ್ಷರ್ ಪಟೇಲ್ (15) ರನ್ ಗಳಿಸಿ ಭಾರತ 20 ಓವರ್ಗಳಲ್ಲಿ 247 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು.

248 ರನ್ಗಳ ಬೃಹತ್ ರನ್ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ತಂಡಕ್ಕೆ ಮತ್ತೊಮ್ಮೆ ಆರಂಭಿಕ ಜೋಡಿ ಕೈ ಕೊಟ್ಟಿತ್ತು. ಬೆನ್ ಡಕೆಟ್ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಸೇರಿದರು. ಕಳೆದ 4 ಪಂದ್ಯದಲ್ಲಿ ರನ್ ಗಳಿಸಲು ತಿಣುಕಾಡಿದ ಫಿಲ್ ಸಾಲ್ಟ್ ಈ ಪಂದ್ಯದಲ್ಲಿ 55 ರನ್ ಗಳಿಸಿ ತೃಪ್ತಿಪಟ್ಟರು. ಸಾಲ್ಟ್ ಔಟ್ ಆಗುತ್ತಿದ್ದಂತೆ ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪರೇಡ್ ನಡೆಯಿತ್ತು. ಯಾವೊಬ್ಬ ಬ್ಯಾಟರ್ಗಳು ಕ್ರೀಸಿನಲ್ಲಿ ಇರಲು ಸಾಧ್ಯವಾಗಲಿಲ್ಲ. ಭಾರತದ ಬೌಲಿಂಗ್ ಪಡೆಯನ್ನ ಎದುರಿಸಲು ಆಂಗ್ಲ ಬ್ಯಾಟರ್ಗಳು ಪರದಾಡಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ 10.3 ಓವರ್ಗಳಲ್ಲಿ ಗಂಟುಮೂಟ್ಟೆ ಕಟ್ಟಿತ್ತು. ಭಾರತ ಪರ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಅಭಿಷೇಕ್ ಶರ್ಮಾ ಬೌಲಿಂಗ್ನಲ್ಲೂ ಕಮಾಲ್ ಮಾಡಿದರು. ಎದುರಾಳಿ ತಂಡದ 2 ವಿಕೆಟ್ ಕಬಳಿಸಿ ಪಂದ್ಯ ಬೇಗನೇ ಮುಗಿಯುವಂತೆ ನೋಡಿಕೊಂಡರು. ಅಭಿಷೇಕ್ ಜೊತೆ ವೇಗಿ ಶಮಿ 3 ವಿಕೆಟ್ ಪಡೆದರೆ ವರುಣ್ ಚಕ್ರವರ್ತಿ, ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದುಕೊಂಡರು.
