Ashwaveega News 24×7 ಮೈಸೂರು (ಜ.06): ಇತ್ತೀಚಿಗೆ ರಾಜ್ಯದಲ್ಲಿ ಬಾಂಬ್ ಬೆದರಿಕೆ (Bomb Threat) ಕೇಸ್ಗಳು ಹೆಚ್ಚುತ್ತಿದೆ. ಇಂದು (ಜ.06) ಮೈಸೂರು ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣ ಎಚ್ಚೆತ್ತ ಸಿಬ್ಬಂದಿಗಳು ಮುಂಜಾಗೃತ ಕ್ರಮವಾಗಿ ಜನರನ್ನ ಹೊರಗೆ ಕಳುಹಿಸಿದ್ದಾರೆ. ವಕೀಲರು ಕೂಡ ನ್ಯಾಯಾಲಯದ ಕಲಾಪ ಬಿಟ್ಟು ಹೊರಗೆ ಬಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಾಂಬ್ ಸ್ಕ್ವಾಡ್ ತಂಡ ಪರಿಶೀಲನೆ ನಡೆಸಿದೆ. ಮೈಸೂರಿನ ಜಿಲ್ಲಾ ಪಂಚಾಯಿತಿ ಬಳಿಯಿರುವ ಹಳೇ ಕೋರ್ಟ್ಗೆ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆ ನ್ಯಾಯಾಲಯದ ಕಲಾಪ ಬಿಟ್ಟು ವಕೀಲರು ಹಾಗೂ ಕಕ್ಷಿದಾರರು ಹೊರ ನಡೆದ್ರು. ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳ ಸಂಪೂರ್ಣ ಕೋರ್ಟ್ ನನ್ನೇ ಜಾಲಾಡಿದೆ.
ಕೋರ್ಟ್ ಇಂಚಿಂಚು ಜಾಲಾಡಿದ ಬಾಂಬ್ ಸ್ಕ್ವಾಡ್ ದಳಕ್ಕೆ ಯಾವುದೇ ಸ್ಪೋಟಕಗಳು ಸಿಕ್ಕಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಮೇಲ್ ಎಂದು ದೃಢವಾಗಿದೆ. ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಲಕ್ಷ್ಮೀಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ …
