Ashwaveega News 24×7- ಜನವರಿ 06 – ಕೊಪ್ಪಳ – ದಕ್ಷಿಣ ಭಾರತದ ಪ್ರಸಿದ್ಧಿ ಪಡೆದಿರುವ ಕೊಪ್ಪಳ ಜಿಲ್ಲೆಯ ಗವಿಮಠದ ಗವಿ ಸಿದ್ದೇಶ್ವರ ಜಾತ್ರೆ ಇಂದಿನಿಂದ ಆರಂಭಗೊಂಡಿದ್ದು, ಲಕ್ಷಾಂತರ ಭಕ್ತರ ಸ್ವಾಗತಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಭಕ್ತಿ, ಸೇವೆ ಮತ್ತು ಸಂಪ್ರದಾಯಗಳ ಅಪೂರ್ವ ಸಂಗಮವಾಗಿರುವ ಈ ಜಾತ್ರೆ ಪ್ರತಿವರ್ಷವೂ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳ ಭಕ್ತರು ಆಗಮಿಸುತ್ತಾರೆ.
ಗವಿಮಠದ ಜಾತ್ರೆಯೆಂದರೆ ಪ್ರತಿವರ್ಷವೂ ಒಂದಲ್ಲ ಒಂದು ವಿಶೇಷವಿದ್ದೇ ಇರುತ್ತದೆ. ಪ್ರತಿವರ್ಷದಂತೆ ಈ ಬಾರಿ ಸಿಂಧನೂರಿನ ಗವಿಸಿದ್ಧೇಶ್ವರ ಆಗ್ರೋ ಫುಡ್ಸ್ ವಿಜಯಕುಮಾರ್ ಗೆಳೆಯರ ಬಳಗ 10 ಲಕ್ಷ ಭಕ್ತರಿಗೆ ತುಪ್ಪದ ಮೈಸೂರು ಪಾಕ್ನ ಸವಿ ಉಣಬಡಿಸಲು ಸಿದ್ಧತೆ ಮಾಡಿಕೊಂಡಿದೆ.
