
ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ತಂಡದ ಸೋಲಿನ ಹೊಣೆಗಾರಿಕೆಯನ್ನು ತಾವೇ ಹೊರುವುದ್ದಾಗಿ ಹೇಳಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತಂಡಗಳಲ್ಲಿ ಪ್ರಮುಖ ತಂಡವಾಗಿದ್ದ ಇಂಗ್ಲೆಂಡ್ ಈ ಬಾರಿ ನೀರಸ ಪ್ರದರ್ಶನ ನೀಡಿತ್ತು. ಅದರಲ್ಲೂ ಆಫ್ಗಾನಿಸ್ತಾನ ವಿರುದ್ದ ಹೀನಾಯ ಸೋಲಿನ ಬಳಿಕ ಸೆಮಿಫೈನಲ್ ಹಂತದಿಂದ ಹೊರಬಿದ್ದಿತ್ತು. ಹೀಗಾಗಿ ಜೋಸ್ ಬಟ್ಲರ್ ತಮ್ಮ ನಾಯಕ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ ಕೊನೆ ಪಂದ್ಯಕ್ಕೆ ಅವರು ನಾಯಕರಾಗಿ ತಂಡವನ್ನು ಮುನ್ನೆಡಸಲಿದ್ದಾರೆ. ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ 43 ಏಕದಿನ ಪಂದ್ಯಗಳನ್ನು ಆಡಿದೆ ಅದರಲ್ಲಿ 18ಜಯ ಹಾಗೂ 23ರಲ್ಲಿ ಸೋಲು ಕಂಡಿದೆ. ಪ್ರಸ್ತುತ ಇಂಗ್ಲೆಂಡ್ ತಂಡ ಆಡಿದ 2 ಪಂದ್ಯಗಳಲ್ಲಿ 2 ರಲ್ಲೂ ಸೋಲು ಕಂಡಿದೆ..

ಅಭಿಷೇಕ್. .ಎಸ್