
ಚಾಂಪಿಯನ್ಸ್ ಟ್ರೋಫಿಒಯಲ್ಲಿ ಪಾಕಿಸ್ತಾನ ಆರಂಭಿಕ ಎರಡು ಪಂದ್ಯದಲ್ಲಿ ಸೋತು ತವರಿನಲ್ಲಿ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ವಿರುದ್ದ ಸೋತರೆ,ಎರಡನೇ ಪಂದ್ಯದಲ್ಲಿ ಭಾರತ ವಿರುದ್ದ ಸೋತಿದೆ. ಹೀಗಾಗಿ ಬಹುತೇಕ ಸೆಮಿಫೈನಲ್ ಆಸೆಯನ್ನು ಕೈ ಬಿಟ್ಟಿರುವ ಪಾಕ್ ತಂಡಕ್ಕೆ ಉಳಿದಿರುವುದು ಇನ್ನೊಂದೇ ಆಸೆ. ಅದು ಕೂಡ ಇತರೆ ತಂಡಗಳ ಫಲಿತಾಂಶಗಳ ಆಧಾರದ ಮೇಲೆ ಪಾಕ್ಗೆ ಅನುಕೂಲಕರ ರೀತಿಯಲ್ಲಿ ಫಲಿತಾಂಶ ಬಂದರೆ ಮಾತ್ರ ಪಾಕಿಸ್ತಾನ ಸೆಮಿಫೈನಲ್ ಹಂತ ತಲುಪಲಿದೆ.
ಬಾಂಗ್ಲಾದೇಶ ವಿರುದ್ದ ನ್ಯೂಜಿಲ್ಯಾಂಡ್ಸೋಲಬೇಕು
ಭಾರತ ವಿರುದ್ದ ನ್ಯೂಜಿಲ್ಯಾಂಡ್ ಸೋಲಬೇಕು
ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನ ಗೆಲ್ಲಬೇಕು

ಹೀಗೆ ಟೂರ್ನಿಯಲ್ಲಿ ಫಲಿತಾಂಶ ಬಂದರೆ ಪಾಕಿಸ್ತಾನ ಉತ್ತಮ ರನ್ರೇಟ್ನಲ್ಲಿ ಸೆಮಿಫೈನಲ್ ತಲುಪಲಿದೆ. ಆದರೆ ಉತ್ತಮ ಲಯದಲ್ಲಿರುವ ನ್ಯೂಜಿಲ್ಯಾಂಡ್ ತಂಡ ತನ್ನ ಕೊನೆಯ ಎರಡು ಪಂದ್ಯಗಳನ್ನು ಸೋಲುವುದು ಕಷ್ಟದ ಮಾತು. ಹೀಗಾಗಿ ಪಾಕಿಸ್ತಾನ ಮುಕ್ಕೋಟಿ ದೇವರುಗಳ ಬಳಿ ಹರಕೆ ಹೊತ್ತುಕೊಳ್ಳಬೇಕಾಗಿದ್ದು, ಬಹುತೇಕ ಅದರ ಮುಂದಿನ ಹಾದಿ ಇಂದಿನ ಪಂದ್ಯದಲ್ಲಿಯೇ ಹೊರಬೀಳಲಿದೆ. ಬಾಂಗ್ಲಾದೇಶ ಗೆದ್ದರೆ ಪಾಕ್ ಸೆಮಿಫೈನಲ್ ಆಸೆ ಜೀವಂತವಾಗಿರಲಿದೆ. ನ್ಯೂಜಿಲ್ಯಾಂಡ್ ಗೆದ್ದರೆ ಪಾಕಿಸ್ತಾನ ಆಸೆ ನುಚ್ಚು ನೂರಾಗಲಿದೆ. ಹೀಗಾಗಿ ಇಂದಿನ ಪಂದ್ಯ ಸೆಮಿಫೈನಲ್ಗೆ ಯಾರು ಎಂಟ್ರಿ ಕೊಡಲಿದ್ದಾರೆ ಎಂಬ ಸ್ಪಷ್ಟತೆ ಸಿಗಲಿದೆ.
ಅಭಿಷೇಕ್ ಎಸ್