
Ashwaveega News 24×7 ಅ. 27:ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯಲ್ಲಿ ಧರ್ಮ ದಂಗಲ್ ಶುರುವಾಗಿದೆ. ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡಕಾರ್ತಿವೆ. ಇನ್ನೂ ಸರ್ಮರ್ಥನೆ ಮಾಡಿಕೊಳ್ಳೋ ಬರದಲ್ಲಿ ಡಿಸಿಎಂ ಡಿಕೆಶಿ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದು, ಉರಿಯೋ ಬೆಂಕಿಗೆ ತುಪ್ಪು ಸುರಿಯುವಂತೆ ಆಗಿದೆ.
ಹೌದು. . ಡಿಸಿಎಂ ಡಿಕೆಶಿ ಮಾತುಗಳನ್ನ” ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ” ಚಾಂಮುಡಿ ಬೆಟ್ಟ ಕೇವಲ ಹಿಂದೂ ಧರ್ಮಕ್ಕೆ ಸೇರಿಲ್ಲ ಅಂತಾ ಡ್ಯಾಮೆಜಿಂಗ್ ಸ್ಪೇಟ್ಮೆಂಟ್ ಕೊಟ್ಟಿದ್ದಾರೆ. ಈಗ ದಸರಾ ಉದ್ಘಾಟನೆ ಜಟಾಪಟಿ ಮಧ್ಯೆ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಬಾನು ಮುಷ್ತಾಕ್ ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಇನ್ನೂ ಕನಕಪುರ ಬಂಡೆ ಮಾತುಗಳಿಗೆ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ.
ಚಾಮುಂಡಿ ಬೆಟ್ಟದ ಬಗ್ಗೆ ಡಿಕೆಶಿ ಆಡಿದ ಮಾತುಗಳಿಗೆ ಬಿಜೆಪಿ ನಾಯಕರು ನಿಗಿನಿಗಿ ಅಂತೀದ್ದಾರೆ .ಉಪಮುಖ್ಯಮಂತ್ರಿ ಹೇಳಿಕೆಗೆ ಯದುವೀರ್ ಒಡೆಯರ್ ಕೂಡ ತಿರುಗೇಟು ಕೊಟ್ಟಿದ್ದಾರೆ. “ಚಾಮುಂಡಿ ಬೆಟ್ಟ ಕೋಟ್ಯಂತರ ಹಿಂದೂಗಳ ಆಸ್ತಿ” ಇದರಲ್ಲಿ ಎರಡು ಮಾತಿಲ್ಲ. ಡಿಕೆಶಿ ಹೇಳಿಕೆಯಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಅಂತಾ ಚಾಟಿ ಬೀಸಿದ್ದಾರೆ. ನಾನು ಒಬ್ಬ ಹಿಂದೂ ಚಾಮುಂಡೇಶ್ವರಿ ಬಗ್ಗೆ ಗೌರವವಿದೆ ಅಂತಾ ಯದುವೀರ್ ಹೇಳಿಕೆಗೆ ಡಿಕೆಶಿ ಕೂಡ ಟಾಂಗ್ ಕೊಟ್ಟಿದ್ದಾರೆ
ಕನಕಪುರದಲ್ಲಿ ಕಪಾಲಿ ಬೆಟ್ಟವನ್ನ ಯೇಸು ಬೆಟ್ಟ ಮಾಡಲು ಹೊರಟಿದ್ರು. ಓಲೈಕೆಗಾಗಿ ಅನ್ಯ ಧರ್ಮದವರನ್ನ ಬ್ರದರ್ಸ್ ಎಂದು ಕರೆಯುತ್ತಾರೆ ಅಂತಾ ಡಿಕೆಶಿ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ಧಾರೆ. ಸಿದ್ದರಾಮಯ್ಯ ತಂತ್ರ ಕಾಂಗ್ರೆಸ್ನ ಮೂರ್ಖರಿಗೆ ಅರ್ಥವಾಗುತ್ತಿಲ್ಲ ಮುಸ್ಲಿಂರನ್ನು ತಮ್ಮ ಬೆನ್ನ ಹಿಂದೆ ಇಟ್ಟುಕೊಳ್ಳಲು ಬಾನು ಮುಷ್ತಾಕ್ ಆಯ್ಕೆ ಅಂತಾ ಕೌಂಟರ್ ಕೊಟ್ಟಿದ್ಧಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ನಿಮ್ಮ ಪಕ್ಷದಲ್ಲಿ ನಿಮಗೆ ಎದುರಾಗಿರುವ ಕಂಟಕದಿಂದ ಪಾರಾಗಲು ಚಾಮುಂಡಿ ಬೆಟ್ಟ, ದಸರಾವನ್ನ ಬಳಸಿಕೊಳ್ಳಬೇಡಿ. ನಾಡದೇವತೆಯನ್ನ ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗಿ ಹೋಗುವಿರಿ ಅಂತಾ ಆಕ್ರೋಶ ಹೊರಹಾಕಿದ್ದಾರೆ.
ಆಪ್ತಮಿತ್ರದಲ್ಲಿ ಗಂಗಾ ನಾಗವಲ್ಲಿಯಾಗಿ ಹಂತ-ಹಂತವಾಗಿ ಬದಲಾಗುತ್ತಾಳೆ, ಆದ್ರೆ ನಮ್ಮ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಗವಲ್ಲಿಗಿಂತಲೂ ಬಹುಬೇಗ ಬದಲಾಗ್ತಿದ್ದಾರೆ ಅದ್ಯಾವಾಗ ಬಣ್ಣ ಬದಲಿಸ್ತಾರೆ ಅನ್ನೋದು ಗೊತ್ತಾಗಲ್ಲ ಅಂತಾ ಪೋಸ್ಟ್ ಮಾಡಿ ಲೇವಡಿ ಮಾಡಿದ್ದಾರೆ.
ಇನ್ನೂ ತೀವ್ರ ವಿರೋಧ ವ್ಯಕ್ತವಾಗ್ತಿದ್ದಂತೆ ಡಿಸಿಎಂ ಡಿಕೆಶಿ ಯೂಟರ್ನ್ ಹೊಡೆದಿದ್ದಾರೆ. ಇದು ಸರ್ಕಾರದ ಆಸ್ತಿ, ಬರೀ ಹಿಂದೂಗಳು ಮಾತ್ರ ದೇವಸ್ಥಾನಕ್ಕೆ ಬರಬೇಕು ಅಂತ ಹೇಳಿಲ್ಲ. ಚಾಮುಂಡೇಶ್ವರಿ ಎಲ್ಲ ಧರ್ಮದವರಿಗೂ ಆಶೀರ್ವಾದ ಮಾಡುತ್ತಾಳೆ ಅಂತಾ ತಿರುಗೇಟು ಕೊಟ್ಟಿದ್ದಾರೆ. ಜೊತೆಗೆ ಜೆಡಿಎಸ್ ಟ್ವೀಟ್ ಟಾಂಗ್ ಕೊಟ್ಟಿದ್ದಾರೆ.
ಒಟ್ನಲ್ಲಿ ಉದ್ಘಾಟನೆ ಜಟಾಪಟಿ ಒಂದ್ಕಡೆಯಾದ್ರೆ ಇನ್ನೊಂದು ಕಡೆ ಚಾಂಮುಡಿ ಬೆಟ್ಟ ವಾಕ್ಸಮರ ನಡೆಯುತ್ತಿದೆ. ಆದ್ರೆ ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಬಾನು ಮುಷ್ತಾಕ್ ದಸರಾ ಉದ್ಘಾಟಿಸ್ತಾರೆಂದು ಸಿಎಂ ಹೇಳಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಹ್ವಾನ ನೀಡ್ತೇವೆಂದು ಸ್ಪಷ್ಟನೆ ಕೊಟ್ಟಿದ್ದಾರೆ.