ಬೆಂಗಳೂರು : ಹಾಸನ ಸಮಾವೇಶ ಬಗ್ಗೆ ಹೆಚ್ ಡಿಕೆ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಜೆಡಿಎಸ್ ಪಕ್ಷ ಬಿಡಲಿಲ್ಲ, ನನ್ನನ್ನ ಮಿಸ್ಟರ್ ದೇವೇಗೌಡರು ಉಚ್ಚಾಟನೆ ಮಾಡಿದ್ರು. ಆಗ ನನಗೆ ಬೇರೆ ದಾರಿ ಇಲ್ಲದೇ ಅಹಿಂದ ಸಂಘಟನೆ ಮಾಡಿದೆ. ಈ ಹಿಂದೆ ಹಾಸನದಲ್ಲಿ ಅಹಿಂಸಾ ಸಮಾವೇಶ ಮಾಡಿದ್ವಿ.. ಈಗ ಹಾಸನದಲ್ಲಿ ಕೃತಜ್ಞತ ಸಮಾವೇಶ ಮಾಡ್ತಿದ್ದೇವೆ ಎಂದು ಹೆಚ್ಡಿಕೆಗೆ ಸಿಎಂ ಸಿದ್ದರಾಮಯ್ಯ ತೀರುಗೇಟು ನೀಡಿದ್ರು.