Ashwaveega News 24×7 ಮಾರ್ಚ್ 30 – 2026 : ಬೆಂಗಳೂರು : ನಗರದಲ್ಲಿ ಸಿಎನ್ಜಿ (CNG) ಬಂಕ್ಗಳು ಒಂದೊಂದಾಗಿ ಬಂದ್ ಆಗುತ್ತಿರುವುದರಿಂದ ಆಟೋ ಚಾಲಕರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನನಿತ್ಯ ಜೀವನ ನಡೆಸಲು ಗ್ಯಾಸ್ ಅವಲಂಬಿತರಾಗಿರುವ ಚಾಲಕರಿಗೆ ಇದು ದೊಡ್ಡ ಹೊಡೆತವಾಗಿದೆ.
ನಗರದ Sheshadripuram ಪ್ರದೇಶದಲ್ಲಿರುವ TRUGAS ಬಂಕ್ ಕೂಡ ಬಂದ್ ಆಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇನ್ನು ಹಲವೆಡೆ ಗ್ಯಾಸ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
“ನಮಗೆ ಗ್ಯಾಸ್ ಸಿಗದಿದ್ದರೆ ಜೀವನವೇ ನಿಂತು ಹೋಗುತ್ತದೆ. ಸಿಗುವ ಕಡೆಗೆ ಹೋದರೂ ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡಬೇಕಾಗಿದೆ” ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.
ಇನ್ನೊಂದೆಡೆ, ಗ್ಯಾಸ್ ದರ ಏರಿಕೆಯಾಗಿದ್ದರೂ ಮೀಟರ್ ದರವನ್ನು ಸರ್ಕಾರ ಹೆಚ್ಚಳ ಮಾಡಿಲ್ಲ ಎಂಬುದು ಚಾಲಕರ ಮತ್ತೊಂದು ಬೇಸರವಾಗಿದೆ. “ಜಾಸ್ತಿ ಹಣ ಕೇಳಿದ್ರೆ ಪ್ರಯಾಣಿಕರು ಜಗಳ ಮಾಡ್ತಾರೆ, ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕ್ತಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ದಿನೇದಿನೇ ಗಂಭೀರವಾಗುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಾಲಕರು ಆರೋಪಿಸಿದ್ದಾರೆ. “ಸರ್ಕಾರ ಕೈಕಟ್ಟಿ ಕುಳಿತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿರುವ ಚಾಲಕರು, ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ಸಿಎನ್ಜಿ ಬಂಕ್ಗಳ ಬಂದ್ ಮತ್ತು ಗ್ಯಾಸ್ ಕೊರತೆ ಬೆಂಗಳೂರಿನ ಆಟೋ ಚಾಲಕರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿದ್ದು, ತ್ವರಿತ ಕ್ರಮದ ಅಗತ್ಯವಿದೆ.
