ರಾಜ್ಯದಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪೋದ್ಯಮವಿದ್ದು, ಮಾರಾಟ ಮತ್ತು ರಪ್ತು ಉತ್ತೇಜಿಸಲು ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು ಶಾಸಕ ಸಿ.ಎನ್ ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಸಾರ್ವಜನಿಕ ಸಹಭಾಗಿತ್ವದ ಬದಲಿಗೆ ಸರ್ಕಾರ ಅಥವಾ ಎಪಿಎಂಸಿಯ ಸ್ವಂತ ನಿಧಿಯಿಂದ ಮಾರುಕಟ್ಟೆ ಅನುಷ್ಠಾನಗೊಳಿಸಲು ನಿರ್ಧರಿಸಿ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಲಾಗಿದೆ ಎಂದು ಹೇಳಿದರು. ಬೆಂಗಳೂರಿನ ದಾಸನಪುರ, ಮೈಸೂರು, ಕೋಲಾರ ಎಪಿಎಂಸಿಗಳಲ್ಲಿ ಪಿಪಿಪಿ ಮಾದರಿಯಲ್ಲಿ ಬಯೋ ಸಿಎನ್ಜಿ ಪ್ಲಾಂಟ್ಗಳ ಸ್ಥಾಪನೆಗೆ ಮೂಲಸೌಲಭ್ಯ ಪಡೆಯಲು ಡಿಪಿಆರ್ ಹಾಗೂ ಆರ್ಎಫ್ಟಿಗಳನ್ನು ಸಲ್ಲಿಸಲಾಗಿದೆ. ರಾಯಚೂರಿನಲ್ಲಿ 25 ಕೋಟಿರೂ. ವೆಚ್ಚದಲ್ಲಿ ಸುಸಜ್ಜಿತವಾದ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಲು ಅನುಮೋದನೆಯಾಗಿದ್ದು ಟೆಂಡರ್ ಕರೆಯಲಾಗಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃಷ ಸಂಕೀರ್ಣ ನಿರ್ಮಿಸಲು ವಿಸ್ಕೃತ ಯೋಜನಾ ವರದಿ ಪಡೆಯಲಾಗಿದ್ದು ಪರಿಶೀಲನೆ ಹಂತದಲ್ಲಿದೆ. ರಾಜ್ಯದ ಎಲ್ಲ ಎಪಿಎಂಸಿಗಳ ಕಾರ್ಯ ಚಟುವಟಿಕೆಗಳನ್ನು 10 ಕೋಟಿ ರೂ ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ. ಸೆಂಟರ್ ಫಾರ್ ಸ್ಮಾರ್ಟ್ ಗವರ್ನಸ್ ಸಹಾಯದೊಂದಿಗೆ ಇಆರ್ಪಿ ಅಭಿವೃದ್ದಿಪಡಿಸಲಾಗಿದೆ. 8 ಮಾಡ್ಯೂಲ್ಗಳಲ್ಲಿ 4 ಮ್ಯಾಡೂಲ್ಗಳು ಪೂರ್ಣಗೊಂಡಿದ್ದು ಇತರ 4 ಪ್ರಗತಿಯಲ್ಲವೆ ಎಂದು ಸಚಿವ ಶಿವಾನಂದ ಪಾಟೇಲ್ ಹೇಳಿದ್ದಾರೆ.

ಅಭಿಷೇಕ್ ಎಸ್