Ashwaveega News 24×7 ಡಿಸೆಂಬರ್. 31: ಬೆಂಗಳೂರಿನಲ್ಲಿ ಈ ವರ್ಷವೂ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಭರ್ಜರಿ ತಯಾರಿ ನಡೆದಿದೆ. ಮಧ್ಯರಾತ್ರಿವರೆಗೂ ಸಂಭ್ರಮಿಸುವ ಬೆಂಗಳೂರಿಗರ ಸುರಕ್ಷತೆ ಸಂಚಾರಕ್ಕಾಗಿ ಮೆಟ್ರೋ ಬಿಎಂಟಿಸಿ ತನ್ನ ಸೇವೆ ಸಮಯ ಮತ್ತು ಮಾರ್ಗಗಳನ್ನ ವಿಸ್ತರಿಸಿದ್ದು, ತಡರಾತ್ರಿವರೆಗೂ ಜನರ ಅನೂಕೂಲಕ್ಕಾಗಿ ಸಂಚಾರ ನಾಡಿಗಳು ಸೇವೆ ನೀಡಲಿವೆ.
ಹೊಸ ವರ್ಷದ ಹಿನ್ನೆಲೆ ಇಂದು ರಾತ್ರಿ ಹಾಗೂ ಜನವರಿ 1ರಂದು ಮೆಟ್ರೋ ವಿಶೇಷ ವೇಳಾಪಟ್ಟಿ ಜಾರಿಯಲ್ಲಿರಲಿದೆ. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸೇವಾ ಸಮಯವನ್ನ ತಡರಾತ್ರಿವರೆಗೆ ವಿಸ್ತರಣೆ ಮಾಡಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಜನಸಂದಣಿ ಹೆಚ್ಚಾಗುವ ಹಿನ್ನೆಲೆ, ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಕೊನೆಯ ರೈಲು ಸಮಯವನ್ನು ವಿಸ್ತರಿಸಲಾಗಿದೆ.
ನೇರಳೆ ಮಾರ್ಗ:
ಬೈಯಪ್ಪನಹಳ್ಳಿ-ಕೆಂಗೇರಿ ಮಾರ್ಗ: 1:45ರವರೆಗೆ
ಕೆಂಗೇರಿ- ಬೈಯಪ್ಪನಹಳ್ಳಿ ಮಾರ್ಗ: ರಾತ್ರಿ 2ರವರೆಗೆ
ಹಸಿರು ಮಾರ್ಗ:
ಮೆಜೆಸ್ಟಿಕ್ – ಮಾದಾವರ: ರಾತ್ರಿ 2ರವರೆಗೆ
ಮಾದಾವರ – ಮೆಜೆಸ್ಟಿಕ್: ರಾತ್ರಿ 2ರವರೆಗೆ
ಹಳದಿ ಮಾರ್ಗ:
ಆರ್ವಿ ರಸ್ತೆ – ಬೊಮ್ಮಸಂದ್ರ ಮಾರ್ಗ: ರಾತ್ರಿ 3:10ರವರೆಗೆ
ಬೊಮ್ಮಸಂದ್ರ – ಆರ್ವಿ ರಸ್ತೆ: 1:30ರವರೆಗೆ
ಮೆಜೆಸ್ಟಿಕ್ ಕೇಂದ್ರದಲ್ಲಿ ಎಲ್ಲಾ ಮಾರ್ಗಗಳ ಕೊನೆಯ ರೈಲು ರಾತ್ರಿ 2:45ಕ್ಕೆ ಇರಲಿದೆ.
ಬಿಎಂಟಿಸಿ ಕೂಡ ಪ್ರಯಾಣಿಕರ ಅನೂಕೂಲಕ್ಕಾಗಿ, ಇಂದು ತಡರಾತ್ರಿವರೆಗೂ ಬಿಎಂಟಿಸಿ ಬಸ್ಗಳ ಕಾರ್ಯಾಚರಣೆಗೆ ಮುಂದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆ/ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ರಾತ್ರಿ 11 ಗಂಟೆಯ ನಂತರ ತಡರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಓಡಾಟ ಮಾಡಲಿದೆ.
ಇನ್ನೂ ಇದರ ಮಧ್ಯೆ ಪಾರ್ಟಿ ಹಾಲ್ಗಳಲ್ಲೂ ಭರ್ಜರಿ ತಯಾರಿ ನಡೆದಿದೆ. ಈಗಾಗಲೇ ಪೊಲೀಸ್ ಇಲಾಖೆ ನೀಡಿರುವ ಗೈಡ್ ಲೈನ್ಸ್ ಜೊತೆಗೆ ಗ್ರಾಹಕರ ಸುರಕ್ಷತೆಗಾಗಿ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಜನ ನಗರದ ಹಲವೆಡೆ ಸೇರುವ ಸಾಧ್ಯತೆ ಇದೆ.
