Ashwaveega News 24×7 ಡಿಸೆಂಬರ್. 26: ಸ್ಯಾಂಡಲ್ ವುಡ್ ಅಗೋಮ್ಮೆ ಈಗೊಮ್ಮೆ ಬೆಂಬಲ ಬೆಳೆ ತೆಗೆಯುತ್ತಿದೆ. ಥಿಯೇಟರ್ ಗೆ ಜನ ಬರ್ತಿಲ್ಲ ಅನ್ನೋದು ಚಂದನವನಕ್ಕೆ ಸದ್ಯದ ಕೊರಗು. ಈ ನಡುವೆ ಮ್ಯಾಜಿಕಲ್ ಮ್ಯೂಸಿಕ್ ಡೈರೆಕ್ಟರ್ ರ್ಜುನ್ ಜನ್ಯ ಹೊಸ ಸಾಹಸಕ್ಕೆ ಕೈ ಹಾಕಿ ಸೈ ಎನಿಕೊಂಡಿದ್ದಾರೆ. ಚೊಚ್ಚಲ ʼ45ʼ ಸಿನಿಮಾ ನಿರ್ದೇಶನದ ಮೂಲಕ ನಿರ್ದೇಕನಾಗಿ ಭಡ್ತಿ ಪಡೆದುಕೊಂಡಿದ್ಧಾರೆ.
ಚಂದನವನದ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಎಲ್ಲರನ್ನು ತೃಪ್ತಿಪಡಿಸುವಂತಹ ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಅದರಲ್ಲೂ ರಿಯಲ್ ಸ್ಟಾರ್ ಉಪೇಂದ್ರ ಪರ ಭಾಷೆಯಲ್ಲಿ ಮಿಂಚುತ್ತಿದ್ದು ಅವರ ರೇಂಜ್ ಗೆ ಅವರ ಫ್ಯಾನ್ಸ್ ಕ್ರೇಜ್ ಗೆ ಕಥೆ ಸಿಗೋದು ಸುಲಭದ ಮಾತಲ್ಲ. ಇತ್ತ ಹ್ಯಾಟ್ರಿಕ್ ಹೀರೋ ಶಿವಣ್ಣ ಅಂತೂ ಫುಲ್ ಬ್ಯುಸಿ ಪರ್ಸನ್.
ಇನ್ನೂ ರಾಜ್ ಬಿ ಶೆಟ್ಟಿ ತಮ್ಮದೇ ಆದಾ ಟ್ಯಾಲೆಂಟ್ ನಿಂದ ಕಡಿಮೆ ಸಮಯದಲ್ಲಿ ಸ್ಟಾರ್ ನಟ ಎನಿಸಿಕೊಂಡವರು. ಪ್ರಸ್ತುತ ಸಾಕಷ್ಟು ಬೇಡಿಕೆ ಇರೋ ನಟರಲ್ಲಿ ಒಬ್ಬರು ನಮ್ಮ ರಾಜ್ ಬಿ ಶೆಟ್ಟಿ. ಈ ತ್ರಿವಳಿ ಮುತ್ತುಗಳನ್ನು ಒಂದೇ ಚಿತ್ರದಲ್ಲಿ ತೋರಿಸುವ ಪ್ರಯತ್ನದಲ್ಲಿ ಅರ್ಜುನ್ ಜನ್ಯಾ ಗೆದ್ದಿದ್ದಾರೆ.
ಈ ಮೂವರು ತಮ್ಮ ಅದ್ಬುತ ನಟನೆಯಿಂದಲೇ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಯಾರು ಎಷ್ಟು ಹೊತ್ತು ತೆರೆಮೇಲೆ ಇದ್ರು ಎನ್ನುವುದಕ್ಕಿಂತ ಅಂತಿಮವಾಗಿ ಅವರ ಹಾಜರಿ ಎಂಥಹ ಅನುಭವ ನೀಡುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ ’45’ ಸಿನಿಮಾ ತೆರೆಗಪ್ಪಳಿಸಿದೆ. ಈ ವರ್ಷದ ಹಿಟ್ ಸಿನಿಮಾಗಳ ಲಿಸ್ಟ್ ಸೇರಬಹುದು ಅನ್ನುವ ಅಂದಾಜಿದೆ.
ಒಂದು ನಾಯಿಯ ಸಾವಿನಿಂದ ಶುರುವಾಗುವ ಈ ಸಿನಿಮಾ, ಪಾಪ ಕರ್ಮಗಳ ಲೆಕ್ಕಾಚಾರ, ʼ45ʼ ಚಿತ್ರದ ಒಟ್ಟಾರೆ ಕಥಾ ಹಂದರವನ್ನು ಕೂಡಿಟ್ಟಿರುತ್ತದೆ.
ಚಿತ್ರದಲ್ಲಿ ಐಟಿ ಉದ್ಯೋಗಿ ವಿನಯ್ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ವಿನಯ್ ತನ್ನದೇ ಪ್ರಪಂಚದಲ್ಲಿ ಹಾಯಾಗಿ ಇರ್ತಾನೆ. ಅದೊಂದು ಘಟನೆ ಆತನ ‘ಜೀವ’ನಕ್ಕೆ ಕುತ್ತು ತಂದುಬಿಡುತ್ತದೆ. ಇದರಿಂದ ರಾಯಪ್ಪ ಅಂದ್ರೆ ಉಪೇಂದ್ರನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಲ್ಲಿಂದ ಸಾವಿನ ತೂಗುಗತ್ತಿ ಕೆಳಗೆ 45 ದಿನಗಳ ಓಟ ಶುರುವಾಗುತ್ತದೆ. ಮುಂದೆ ಆತನ ಸಹಾಯಕ್ಕೆ ಶಿವಪ್ಪನಾಗಿ ಶಿವರಾಜ್ಕುಮಾರ್ ಬರ್ತಾರೆ.
ಅಂತಿಮವಾಗಿ ಇದು ಶಿವಣ್ಣ ಹಾಗೂ ರಾಯಪ್ಪನ ಸಮರಕ್ಕೆ ವೇದಿಕೆಯಾಗುತ್ತದೆ. ಮುಂದೇನು ಎನ್ನುವುದು ’45’ ಸಿನಿಮಾ ಕಥೆ. ಇಲ್ಲಿ ಶಿವಪ್ಪ -ರಾಯಪ್ಪ ರ ಕಥೆಯೇನು ಅನ್ನೋದು ಕುತೂಹಲ ಹುಟ್ಟಿಸುತ್ತೆ. ಇವರಿಬ್ಬರ ನಡುವೆ ವಿನಯ್ ಜರ್ನಿಯೇನು ಅನ್ನೊದು ಸಿನಿಮಾದ ಹೈಲೈಟ್. ಚಿತ್ರದಲ್ಲಿ ಈಗಿನ ಯೂತ್ಗ್ ಗಳಿಗಾಗಿ ಒಂದಷ್ಟು ಸಾಮಾಜಿಕ ಕಳಕಳಿಯನ್ನು ತೋರಿಸಿದ್ದಾರೆ.
ಈ ಚಿತ್ರದಲ್ಲಿ ಈ ತ್ರಿವಳಿಗಳ ನಡುವೆ ಗರುಡ ಪುರಾಣ ಅನ್ನುವ ಕಾಂಸೆಪ್ಟ್ ಅನ್ನು ಪರಿಣಾಮಕಾರಿಯಾಗಿ ಅರ್ಜುನ್ ಜನ್ಯಾ ತೆರೆಗೆ ತಂದಿದ್ದಾರೆ. ಕಥೆಯ ಎಳೆ ಸಣ್ಣದಿರಬಹುದು. ಆದರೆ ಸಾಕಷ್ಟು ಐಡಿಯಾಗಳನ್ನು, ರೂಪಕಗಳನ್ನು ಸಾಲು ಸಾಲಾಗಿ ತರುತ್ತಾ. ಅದೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇನ್ನು ಉಪ್ಪಿ ನಿರ್ದೇಶನಕ್ಕೆ ದೊಡ್ಡ ಅಭಿಮಾನಿ ಆಗಿರುವ ಜನ್ಯಾ ಅಲ್ಲಲ್ಲಿ ಉಪ್ಪಿ ಸ್ಟೈಲ್ ಅಲ್ಲಿ ನಿರೂಪಣೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಅದರಲ್ಲೂ ಓಂ ಸನ್ನಿವೇಶ ಮರುಕಳಿಸಿದ್ದು ಅದ್ಬುತ. ತಾವೇ ಸಂಗೀತ ನಿರ್ದೇಶನ ಮಾಡಿರುವುದರಿಂದ ಅದ್ಭುತವಾಗಿ ಬಿಜಿಎಂ ಮಾಡಿದ್ದಾರೆ ಜನ್ಯಾ. ಇನ್ನು ಇದರಲ್ಲಿ ಒಂದು ಕಡೆ ಸುಧಾರಾಣಿ – ಶಿವಣ್ಣ ಕಾಂಬಿನೇಷನ್, ವಿನಯ್ ಲವ್ ಸ್ಟೋರಿ, ಮೊದಲಾರ್ಧಲ್ಲಿನ VFX ಅನಗತ್ಯ ಅನಿಸಿದೆ. ಒಟ್ಟಿನಲ್ಲಿ ಅನಿಲ್ ಸಂಭಾಷಣೆ ಅದಕ್ಕೆ ಸಾಥ್ ಕೊಟ್ಟಿದೆ. ಸೂಪರ್ ಮೇಕಿಂಗ್. ಕೊನೆಯದಾಗಿ ಶಿವಣ್ಣನ ಆರ್ಭಟವಂತೂ ಅಭಿಮಾನಿಗಳಿಗೆ ಹಬ್ಬದೂಟ.
