
Supreme Court cancels Darshan's bail
Ashwaveega News 24×7 ಅ. 14: ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ಗ್ಯಾಂಗ್ ನ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಇಂದು ನೀಡಿದ ತೀರ್ಪಿನಲ್ಲಿ ಹೈಕೋರ್ಟ್ ನೀಡಿದ ಆದೇಶದ ಲೋಪವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಜೈಲು ದರ್ಶನ ಮಾಡಿಸಿದೆ.
ನಟ ದರ್ಶನ್ ಸೇರಿ ಇತರ 7 ಆರೋಪಿಗಳ ಜಾಮೀನು ರದ್ದು ಮಾಡಿದೆ. ಕಳೆದ ಜನವರಿಯಲ್ಲಿ ಸರ್ಕಾರ ಜಾಮೀನು ರದ್ದು ಮಾಡಬೇಕು ಎಂದು ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಅದರ ವಿಚಾರಣೆ ಇಂದು ನಡೆದಿತ್ತು.
ಸುಪ್ರೀಂ ಕೋರ್ಟ್ ಜೈಲಿನಲ್ಲಿ ನಡೆದಿರೋ ಫೈವ್ ಸ್ಟಾರ್ ಟ್ರಿಟ್ಮೆಂಟ್ ಬಗ್ಗೆ ಪ್ರಶ್ನೆ ಮಾಡಿ ಅಂತಹ ವಿಷಯಗಳು ಕಂಡು ಬಂದರೆ ಅಂತಹವರನ್ನ ಸಸ್ಪೆಂಡ್ ಮಾಡಬೇಕು ಎಂದು ಮಹತ್ವದ ಆದೇಶ ಮಾಡಿದೆ.