
deepshikha nagpal heroine for kiccha sudeeps 47th movie
(ಅಶ್ವವೇಗ) Ashwaveega News 24×7 ಜು.07: ಕಿಚ್ಚ ಸುದೀಪ್ ಅಭಿನಯಿಸುತ್ತಿರುವ 47ನೇ ಚಿತ್ರದ ಚಿತ್ರೀಕರಣ ಇಂದಿನಿಂದ ಶುರುವಾಗಿದೆ. ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ, ನಾಯಕಿ ಹೆಸರೂ ರಿವೀಲ್ ಆಗಿಲ್ಲ. ಆದರೆ ನಾಯಕಿ ಕುರಿತಾಗಿ ಸಣ್ಣದೊಂದು ಸುದ್ದಿ ಹಬ್ಬಿದ್ದು ಕಿಚ್ಚನ ಜೊತೆ ನಟಿಸುವ ಆ ಬೆಡಗಿ ಹೆಸರು ದೀಪ್ಷಿಕಾ ಎನ್ನಲಾಗುತ್ತಿದೆ.
ತಮಿಳು ನಟಿ ದೀಪ್ಷಿಕಾ ಅಷ್ಟೊಂದು ಹೆಸರು ಮಾಡಿರುವ ನಟಿ ಅಲ್ಲ. ಆದರೆ ಅಭಿನಯ ಹಾಗೂ ಸೌಂದರ್ಯದಿಂದ ಅಭಿನಯಿಸಿದ್ದ ಕೆಲವೇ ಕೆಲವು ಚಿತ್ರಗಳಲ್ಲಿ ನ್ಯಾಯ ಸಲ್ಲಿಸಿರುವ ಬ್ಯೂಟಿ. ಮೈಖಲ್, ರವಿಕುಲ ರಘುರಾಮ, ಮಾರ್ಗನ್ ಚಿತ್ರಗಳಲ್ಲಿ ದೀಪ್ಷಿಕಾ ಅಭಿನಯಿಸಿದ್ದಾರೆ. ಇದೀಗ ಬಹುಭಾಷೆಯಲ್ಲಿ ತಯಾರಾಗುತ್ತಿರುವ ಕಿಚ್ಚನ ಮ್ಯಾಕ್ಸ್ ಸೀಕ್ವೆಲ್ ಚಿತ್ರಕ್ಕೆ ಇವರೇ ಪ್ರಮುಖ ಲೀಡ್ ಆ್ಯಕ್ಟ್ರೆಸ್ ಎನ್ನಲಾಗುತ್ತಿದೆ. ಕಿಚ್ಚನ ಜೊತೆ ಡ್ಯುಯೆಟ್ ಹಾಡ್ತಾರಾ ಅಥವಾ ಕಥೆಯೇ ಪ್ರಮುಖವಾದ ಚಿತ್ರ ಇದಾಗಿರೋದ್ರಿಂದ ಸಪೋರ್ಟಿಂಗ್ ಕ್ಯಾರೆಕ್ಟರ್ನಲ್ಲಿ ಬರ್ತಾರಾ ನೋಡ್ಬೇಕು.
ಮ್ಯಾಕ್ಸ್ ನಿರ್ದೇಶಕರ ಜೊತೆ ಸುದೀಪ್ ಕೈಜೋಡಿಸಿದ್ದು, ಅದೇ ಟೆಕ್ನಿಕಲ್ ತಂಡವೇ ಮುಂದುವರೆದಿದೆ. ಶನಿವಾರ ಬೆಂಗಳೂರಿನಲ್ಲಿ ಮುಹೂರ್ತ ನಡೆದಿದ್ರೆ ಸೋಮವಾರ ಚೆನೈನಲ್ಲಿ ಮುಹೂರ್ತ ನಡೆದು ಚಿತ್ರೀಕರಣವೂ ಪ್ರಾರಂಭವಾಗಿದೆ. ದೀಪ್ಷಿಕಾ ಕೂಡಾ ಇಂದು ಚಿತ್ರದ ಮುಹೂರ್ತದ ವೇಳೆ ಜೊತೆಗಿದ್ದರು ಹಾಗಾಗಿ ಸಣ್ಣ ಅನುಮಾನವೊಂದು ಮೂಡಿದೆ.