
Ashwaveega News 24×7 ಸೆ. 20: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ತೀವ್ರಗೊಂಡಿದೆ. ಈಗಾಗಲೇ ಚಿನ್ನಯ್ಯ ಜೈಲು ಸೇರಿದ್ದು, ನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾನೆ.. ಆದ್ರೆ, ಬುರುಡೆ ಪ್ರಕರಣಕ್ಕೆ ಇದೀಗ ದಿನಕ್ಕೊಂದು ಟ್ವಿಸ್ಟ್ ಸಿಕ್ತಾ ಇದೆ. ಚಿನ್ನಯ್ಯ ದೂರು ದಾಖಲಿಸೋದಕ್ಕೂ ಮುನ್ನಮಾಡಿದ ಕೆಲವು ವಿಡಿಯೋಗಳನ್ನು ಮಹೇಶ್ ಶೆಟ್ಟಿ ತಿಮರೋಡಿ ರಿಲೀಸ್ ಮಾಡಿದ್ಧಾರೆ. ವಿಡಿಯೋದಲ್ಲಿ ಚಿನ್ನಯ್ಯ ಹಲವು ವಿಚಾರಗಳ ಕುರಿತು ಮಾತನಾಡಿದ್ದಾನೆ.
ಎರಡು ವರ್ಷದ ಹಿಂದೆ ಚಿನ್ನಯ್ಯ ತನ್ನ ಪತ್ನಿ ಜೊತೆ ತಿಮರೋಡಿ ಮನೆಗೆ ಹೋಗಿದ್ದ. ಈ ವೇಳೆ ಚಿನ್ನಯ್ಯ ತಾನು ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ವಿಡಿಯೋಗಳನ್ನ ತಿಮರೋಡಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಇದೀಗ ಒಂದೊಂದಾಗಿ ರಿಲೀಸ್ ಮಾಡಿದ್ದಾರೆ. ನಿನ್ನೆ ರಾತ್ರಿ ಮೊದಲ ಪಾರ್ಟ್ ಬಿರುಗಡೆ ಮಾಡಿದ್ದ ತಿಮರೋಡಿ, ಇಂದು ಎರಡು ಮತ್ತು ಮೂರನೇ ಭಾಗವನ್ನು ರಿಲೀಸ್ ಮಾಡಿದ್ದಾರೆ.. ಈ ಮೂಲಕ ತಿಮರೋಡಿ ಪ್ರಕರಣಕ್ಕೆ ತಿರುವು ನೀಡಿದ್ದಾರೆ.
ಮಹೇಶ್ ತಿಮರೋಡಿ ಜೊತೆ ಮಾತನಾಡಿರೋ ಚಿನ್ನಯ್ಯ, ಧರ್ಮಸ್ಥಳದಲ್ಲಿ 70ಕ್ಕೂ ಹೆಚ್ಚು ಶವಗಳನ್ನ ಹೂತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಗೋಮಟ್ಟ ಬೆಟ್ಟದಿಂದ ಬರುವ ಫಸ್ಟ್ ಟರ್ನ್ನಲ್ಲಿ ಏನಿಲ್ಲ ಅಂದ್ರೂ 70ಕ್ಕೂ ಹೆಚ್ಚು ಹೆಣ ಹೂತು ಹಾಕಿದ್ದೇನೆ ಎಂದಿದ್ದಾನೆ. ಆ ಟರ್ನ್ನಲ್ಲಿ ಬಿಳಿ ಸೀರೆಯ ಕೇರಳ ಮೂಲದ ಹೆಂಗಸಿನ ಹೆಣ ಹೂತು ಹಾಕಿದ್ದೇನೆ ಎಂದು ಮಾಸ್ಕ್ ಮ್ಯಾನ್ ಹೇಳಿದ್ದಾನೆ. ಅಲ್ಲದೇ. ನಾನು ಹೆಣ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಹೋಗುತ್ತಿದ್ದೆ, ಪೂಜೆ ಮಾಡುವ ಭಟ್ಟರ ಮನೆ ಮಗಳನ್ನು ಹೂತು ಹಾಕಿದ್ದೇನೆ ಎಂಬ ಸ್ಫೋಟಕ ವಿಚಾರಗಳು ವಿಡಿಯೋದಲ್ಲಿವೆ..
ಇದೆಲ್ಲದರ ನಡುವೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬೆಳ್ತಂಗಡಿ ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಶುಕ್ರವಾರ ಅಧಿಕಾರಿಗಳು ತಿಮರೋಡಿ ಮನೆಗೆ ಹೋದಾಗ, ಇರಲಿಲ್ಲ. ಹೀಗಾಗಿ, ಅವರ ಮನೆಯ ಮುಂದೆ ನೋಟಿಸ್ ಅಂಟಿಸಲಾಗಿದೆ.
ಒಟ್ನಲ್ಲಿ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಅನ್ನೋ ಆರೋಪ ದಟ್ಟವಾಗಿರೋ ಹೊತ್ತಿನಲ್ಲೇ ತಿಮರೋಡಿ ಮೂರು ವಿಡಿಯೋ ರಿಲೀಸ್ ಮಾಡಿ ಟ್ವಿಸ್ಟ್ ಕೊಟ್ಟಿದ್ದಾರೆ. ಎಸ್ಐಟಿ ಈ ಮೂರು ವಿಡಿಯೋಗಳ ಕುರಿತು ವಿಚಾರಣೆ ನಡೆಸುತ್ತಾ ಅನ್ನೋದು ಕುತೂಹಲ ಮೂಡಿಸಿದೆ.