ಬೆಂಗಳೂರು ನಗರಕ್ಕೆ 110 ಹಳ್ಳಿಗಳಿಗೆ ಕಾವೇರಿ 5ನೇ ಹಂತದ ನೀರು ಪೂರೈಕೆ ಕಾಮಗಾರಿ ಪರಿಶೀಲನೆಗೆ ಸಚಿವ ಡಿ ಕೆ ಶಿವಕುಮಾರ್ ಭೇಟಿ ನೀಡಿದರು. ಅವರ ಮಾತಿನಲ್ಲಿ, “ನಾನು ಕಿವಿಯಿಂದ ಕೇಳಿ ಒಪ್ಪಿಗೆ ನೀಡುವುದಿಲ್ಲ, ಕಣ್ಣಾರೆ ನೋಡುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ” ಎಂದರು.
ಸಮಯದಂತೆ ಕಾಮಗಾರಿ ಪೂರ್ಣಗೊಳಿಸಲು ತಂತ್ರಜ್ಞರ ಜೊತೆಗೆ ಸತತ ಪರಿಶೀಲನೆ ಮಾಡುತ್ತಿದ್ದ DK ಶಿವಕುಮಾರ್, “ಈ ಬಾರಿ ವಿಜಯದಶಮಿ ಹಬ್ಬದ ಶುಭ ಗಳಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಹತ್ವದ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ” ಎಂದು ಘೋಷಿಸಿದರು.
ಅವರು ಈ ಸಂದರ್ಭದಲ್ಲಿ ಡ್ರೈನೇಜ್ ಪುರೈಕೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ₹1,000 ಕೋಟಿ ರೂ. ಯೋಜನೆ, ಹಾಗೂ ಜೈಕಾ ಬ್ಯಾಂಕಿನಿಂದ ಸಾಲದ ಒಪ್ಪಂದದ ಕುರಿತು ಮಾತನಾಡಿದರು. “ಈ ಯೋಜನೆಯಲ್ಲಿ 1.45 ಲಕ್ಷ ಮೆಗಾ ಟನ್ ಸ್ಟೀಲ್ ಪೈಪ್ ಬಳಸಿ 110 ಕಿ.ಮೀ. ಪ್ರದೇಶಕ್ಕೆ ನೀರು ಪೂರೈಸಲು ಸಿದ್ಧತೆ ಮಾಡಿದ್ದೇವೆ” ಎಂದು ಹೇಳಿದರು.
ಬೆಂಗಳೂರು ವಾಟರ್ ಸಪ್ಲೈ ಬೋರ್ಡ್ ಈ ಯೋಜನೆಗೆ ಚೊಚ್ಚಲ ಹೆಜ್ಜೆ ಇಟ್ಟಿದ್ದು, ಈ ಮೊದಲು ಒಟ್ಟು 1,450 MLD ನೀರು ನಾಲ್ಕು ಹಂತಗಳಲ್ಲಿ ಪೂರೈಕೆ ಮಾಡುತ್ತಿದ್ದರೆ, ಈಗ 750 MLD ನೀರನ್ನು ಒಂದೇ ಹಂತದಲ್ಲಿ ಪೂರೈಕೆ ಮಾಡಲಾಗುತ್ತಿದೆ.
“ಈಗಾಗಲೇ 4 ಲಕ್ಷ ಹೊಸ ನೀರಿನ ಸಂಪರ್ಕ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದೊಂದು ದಿಟ್ಟ ಹೆಜ್ಜೆ, ಇಡೀ ದೇಶದಲ್ಲೇ ಅತಿ ದೊಡ್ಡ ನೀರಿನ ಪೂರೈಕೆ ಯೋಜನೆಯಾಗಿದ್ದು, ‘ಮಾರ್ವೆಲ್’ ಅಂತ ಕರೀತಾರೆ” ಎಂದರು.