Ashwaveega News 24×7 ಮಾರ್ಚ್ 30 – 2026 : ಬೆಂಗಳೂರು: ಐಪಿಎಲ್ ಟಿಕೆಟ್ ವಿವಾದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸಂಸದ D. K. Suresh ತಮ್ಮದೇ ಪಕ್ಷದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಶಾಸಕರು ಐಪಿಎಲ್ ಪಂದ್ಯಗಳಿಗೆ ಬಿಟ್ಟಿ ಟಿಕೆಟ್ ಕೇಳಿರುವುದು ತಪ್ಪು ಎಂದು ಖಂಡಿಸಿದ ಅವರು, “ಪಂದ್ಯ ನೋಡೋ ಇಚ್ಛೆ ಇದ್ದರೆ ಅವರು ಸ್ವತಃ ಹೋಗಿ ಟಿಕೆಟ್ ತೆಗೆದುಕೊಳ್ಳಬೇಕು . ಆಸಕ್ತಿ ಇರುವವರು ತಮ್ಮ ಹಣ ಕೊಟ್ಟು ಮ್ಯಾಚ್ ನೋಡಬೇಕು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ವಿವಾದಕ್ಕೆ ಕಾರಣವಾದದ್ದು ಶಾಸಕ Vijayanand Kashappanavar ಅವರ ಟಿಕೆಟ್ ಬೇಡಿಕೆ. ಈ ಹೇಳಿಕೆ ಹೊರಬಂದ ಬಳಿಕ ರಾಷ್ಟ್ರಮಟ್ಟದಲ್ಲೇ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ.
ಡಿಕೆ ಸುರೇಶ್ ಅವರು ಮತ್ತಷ್ಟು ಕಟುವಾಗಿ ಪ್ರತಿಕ್ರಿಯಿಸಿ, “ಐಪಿಎಲ್ ಕ್ರಿಕೆಟ್ ಒಂದು ಕರ್ಮಷಿಯಲ್ ಗೇಮ್. ಇಲ್ಲಿ ಬಿಟ್ಟಿ ಟಿಕೆಟ್ ಎಂಬ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಯಾರು ಮಾತನಾಡಲಿಲ್ಲ ಎಂಬುದನ್ನೂ ಅವರು ಪ್ರಶ್ನಿಸಿ, “ಈಗ ಮಾತನಾಡೋದು ಸುಲಭ , ಆದರೆ ಆಗ ಯಾರೂ ಏನೂ ಹೇಳಿಲ್ಲ” ಎಂದು ಟೀಕಿಸಿದ್ದಾರೆ .
ಇನ್ನೊಂದೆಡೆ, ಮಾಜಿ ಸಚಿವ Suresh Kumar ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, “ನನಗೆ ಮಾತ್ರ ಬಿಟ್ಟಿ ಟಿಕೆಟ್ ಬೇಡ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಐಪಿಎಲ್ ಟಿಕೆಟ್ ವಿಚಾರವು ರಾಜಕೀಯ ನಾಯಕರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿಯೂ ಚರ್ಚೆ ಆಗ್ತಾಯಿದೆ ….
