Ashwaveega News 24×7 ಜನವರಿ 19 : ಆಪಲ್ ಅಂದ ತಕ್ಷಣ ನಮಗೆ ನೆನಪಿಗೆ ಬರೋದೆ ಕಾಶ್ಮೀರ. ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೆಳೆಯುತ್ತಿದ್ದ ಸೇಬು ಈಗ ನಮ್ಮ ಕರ್ನಾಟಕದಲ್ಲಿಯೂ ತನ್ನ ಸ್ಥಾನವನ್ನು ಗುರುತಿಸಿಕೊಂಡಿದೆ. ನಮ್ಮ ರಾಜ್ಯದ ರೈತರು ಕೂಡ ಈಗ ಸೇಬು ಕೃಷಿಗೆ ಕೈಹಾಕಿದ್ದಾರೆ. ಇದರ ರುಚಿ ಹೇಗಿರುತ್ತೆ? ಎಷ್ಟು ರೇಟು ಸಿಗುತ್ತೆ? ಮಾರ್ಕೆಟಿಂಗ್ ಹೇಗೆ ? ಬನ್ನಿ ತಿಳಿಯೋಣ
ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿಡುತ್ತದೆ .ಅನ್ನೋ ಮಾತಿದೆ. ಹೌದು ದಿನಕ್ಕೆ ಒಂದು ಸೇಬು ತಿನ್ನುವುದರಿಂದ, ವೈದ್ಯರಿಂದ ದೂರವಿರಬಹುದು. ಶ್ರೀಮಂತರ ಹಣ್ಣು ಆಗುವ ಫಲ ಪೋಷಕಾಂಶಗಳಲ್ಲಿಯೂ ಶ್ರೀಮಂತವೇ ಆಗಿದ್ದು, ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಆ್ಯಪಲ್ ರೇಟು ಸದಾ ಹೆಚ್ಚಾಗಿಯೇ ಇರುತ್ತದೆ.
ಭಾರತದ ತುತ್ತ ತುದಿಯ ಪ್ರದೇಶಗಳಾದ ಜಮ್ಮು ಕಾಶ್ಮೀರ , ಹಿಮಾಚಲ ಪ್ರದೇಶ, ಉತ್ತರಾಖಾಂಡ, ಅರುಣಾಚಲ ಪ್ರದೇಶ, ಪಂಜಾಬ್ ನಲ್ಲಿ ಬೆಳೆಯುತ್ತಿದ್ದ ಸೇಬು ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಕಾಮನ್ ಫ್ರೂಟ್ ಆಗುತ್ತಿದೆ. ವಿಜಯಪುರ, ಬೀದರ್, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವಾರು ಜಿಲ್ಲೆಗಳ ಪ್ರಯೋಗಶೀಲ ರೈತರು ಸೇಬು ಬೆಳೆಗೆ ಕೈ ಹಾಕಿದ್ದಾರೆ. ಸಾಮಾನ್ಯವಾಗಿ ಸಮಶೀತೊಷ್ಣ ಪ್ರದೇಶದಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತದೆ, ಸೇಬು ಬೆಳವಣಿಗೆಗೆ 4 ರಿಂದ 21 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಸೂಕ್ತವಾಗಿದೆ, ಅಲ್ಲದೆ ವಾರ್ಷಿಕವಾಗಿ 100 ರಿಂದ 124 ಸೆಂಟಿ ಮೀಟರ್ ನಷ್ಟು ಮಳೆ ಬೇಕಾಗುತ್ತದೆ. ಆದರೆ ಇದಕ್ಕೆ ಪರ್ಯಾಯವಾಗಿ ಈಗ ಬಿಸಿಲು ನಾಡಿನಲ್ಲಿಯೂ ಸೇಬು ಬೆಳೆಯ ಬಹುದಾದ ತಳಿಗಳು ಮಾರ್ಕೆಟ್ ಗೆ ಕಾಲಿಟ್ಟಿದ್ದು, ಕರ್ನಾಟಕದ ರೈತರಿಗೆ ವರದಾನವಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಕಾಶ್ಮೀರ್ ಆ್ಯಪಲ್ ಗಳು ನಮ್ಮ ಮಾರುಕಟ್ಟೆಗೆ ಬರುವುದು ಅಗಸ್ಟ್, ಸೆಪ್ಟಂಬರ್ , ಅಕ್ಟೋಬರ್ ತಿಂಗಳಲ್ಲಿ. ಆದ್ರೆ ಕರ್ನಾಟಕದಲ್ಲಿ ಬೆಳೆದ ಸೇಬು ಮೇ, ಜೋನ್ ತಿಂಗಳಲ್ಲಿ ಇಳುವರಿ ಬರುವುದರಿಂದ ಮಾರುಕಟ್ಟೆಯಲ್ಲಿ ಒಳ್ಳೆ ಬ್ಯುಸಿನೆಸ್ ಆಗುತ್ತದೆ. ಇದರಿಂದ ರೈತರು ಒಂದೊಳ್ಳೆ ಆದಾಯ ಪಡೆಯಬಹುದು, ಪ್ರತಿ ಎಕರೆಗೆ 300 ಗಿಡಗಳನ್ನು ಬೆಳೆಯಬಹುದಾಗಿದ್ದು, ಕೆಜಿಗೆ 100 ರೂ ಅಂತೆ ಮಾರಾಟವಾದ್ರು 1 ಎಕರೆಯಲ್ಲಿ 18 ಲಕ್ಷ ಆದಾಯ ಪಡೆಯಲು ಅವಕಾಶವಿದೆ …
