Ashwaveega News 24×7 ಫೆಬ್ರವರಿ 23 – 2026 ಬೆಂಗಳೂರು : “ಟಾಕ್ಸಿಕ್” ಸಿನಿಮಾಗಾಗಿ ನಟ Yash ಹೊಸ ಅವತಾರ ತಾಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ . ಅವರ ಹೊಸ ಲುಕ್ ಎಐ ಸೃಷ್ಟಿ ಎಂದು ಕೆಲವರು ಟೀಕಿಸಿದ್ದ ಬೆನ್ನಲ್ಲೇ, ಅದಕ್ಕೆ ಕೌಂಟರ್ ನೀಡುವಂತೆ ಮೇಕೋವರ್ ಪ್ರಕ್ರಿಯೆಯ ನೈಜ ವಿಡಿಯೋ ಬಿಡುಗಡೆಗೊಂಡಿದೆ.
ಸೆಲೆಬ್ರಿಟಿ ಹೇರ್ಸ್ಟೈಲಿಸ್ಟ್ Alex Vijaykanth ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಮೇಕೋವರ್ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ “ರಾಕಿಬಾಯ್” ಎಂದೇ ಖ್ಯಾತಿ ಪಡೆದ ಯಶ್ ಗಡ್ಡ ಟ್ರಿಮ್ ಮಾಡಿಸಿಕೊಂಡು, ಹೇರ್ ಕಟ್ ಮಾಡಿಸಿಕೊಂಡು ಯಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
“ರಾಕಿಬಾಯ್” ಪಾತ್ರದ ಗಡ್ಡದ ಲುಕ್ಗೆ ಫುಲ್ ಸ್ಟಾಪ್ ಹಾಕಿದ ಯಶ್, ಸಂಪೂರ್ಣ ಹೊಸ ಸ್ಟೈಲ್ನಲ್ಲಿ ಮಿಂಚಿದ್ದಾರೆ. ಹೇಗೆ ಹಂತ ಹಂತವಾಗಿ ಲುಕ್ ಬದಲಾಯಿಸಲಾಯಿತು ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಎಐ ಅಲ್ಲ, ರಿಯಲ್ ಮೇಕೋವರ್ ಎಂದು ಅಭಿಮಾನಿಗಳಿಗೆ ಸ್ಪಷ್ಟಪಡಿಸಲಾಗಿದೆ.
ಈ ಹೊಸ ಲುಕ್ “ಟಾಕ್ಸಿಕ್” ಸಿನಿಮಾದ ಪಾತ್ರಕ್ಕಾಗಿ ಎನ್ನಲಾಗುತ್ತಿದ್ದು, ಯಶ್ ಅವರ ಟ್ರಾನ್ಸ್ಫರ್ಮೇಶನ್ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಕಿಂಗ್ ಸ್ಟಾರ್ ಮತ್ತೊಮ್ಮೆ ವಿಭಿನ್ನ ಗೇಟಪ್ನಲ್ಲಿ ಕಾಣಿಸಿಕೊಂಡಿರುವುದು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.
