
Is it safe to drink saffron milk during pregnancy & will it influence my baby’s complexion?
ಪ್ರತಿ ತಾಯಿಯು ತನ್ನ ಮಗು ಆರೋಗ್ಯಕರ ಮತ್ತು ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಗರ್ಭಿಣಿಯರಿಗೆ ಹಿರಿಯರು ಕೇಸರಿ ಹಾಲನ್ನ ಕುಡಿಯುವಂತೆ ಹೇಳುವುದನ್ನ ನೀವೂ ಕೇಳಿರಬಹುದು. ಆದರೆ ನಿಜವಾಗಿಯೂ ಕೇಸರಿಯನ್ನ ಹಾಲಿಗೆ ಬೆರೆಸಿ ಕುಡಿದರೆ ಮಗು ಬೆಳ್ಳಗೆ ಹುಟ್ಟುತಾ ? ಇದು ನಿಜಾನಾ..? ಈ ಕುರಿತು ಇಲ್ಲಿದೆ ಡಿಟೈಲ್ಸ್….
ಭಾರತದಲ್ಲಿ ಅತಿ ಹೆಚ್ಚು ಬಳಸುವ ದುಬಾರಿ ಮಸಾಲೆ ಪದಾರ್ಥ ಎಂದರೆ ಅದು ಕೇಸರಿ. ದೇಹದಲ್ಲಿನ ಜೀರ್ಣಶಕ್ತಿಯನ್ನ ಹೆಚ್ಚಿಸುವುದರಿಂದ ಹಿಡಿದು, ಆರೋಗ್ಯ, ಸೌಂದರ್ಯ, ಆಹಾರದ ರುಚಿ, ಬಣ್ಣ, ವಾಸನೆಯನ್ನು ಹೆಚ್ಚಿಸಲು ಬಳಕೆಯಾಗುತ್ತದೆ. ಮಾನ್ಯವಾಗಿ ಯಾವುದೇ ವಿಶೇಷ ಸಮಾರಂಭಗಳಲ್ಲಿ ಸಿಹಿ ಖಾದ್ಯಗಳಲ್ಲಿ ಕೇಸರಿಯನ್ನ ಬಳಸುತ್ತಾರೆ. ಆದರೆ ಈ ಕೇಸರಿಯನ್ನ ಹೆಚ್ಚಾಗಿ ಸೇವನೆ ಮಾಡಿದರೆ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ಉಷ್ಣ ಹೆಚ್ಚಿಸುವ ಆಹಾರಗಳ ಸೇವನೆಯಿಂದ ಗರ್ಭಪಾತವಾಗುವ ಅಪಾಯ ಹೆಚ್ಚಿದೆ ಎಂದು ತಜ್ಞರು ಹೇಳಿದ್ದಾರೆ… ಹಾಗಾದರೆ ಕೇಸರಿ ಯಾವಾಗ, ಹೇಗೆ ಸೇವಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ
ಕೇಸರಿ ದೇಹದ ತೂಕವನ್ನ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ವೈದ್ಯರು ಹೇಳುವ ಪ್ರಕಾರ, ಹೆರಿಗೆ ಸುಸೂತ್ರವಾಗಿ ಆಗಲು ಮತ್ತು ಪ್ರಸವದ ಬಳಿಕ ಗರ್ಭಕೋಶ ಬೇಗನೆ ಚೇತರಿಸಿಕೊಳ್ಳಲು ಕೇಸರಿ ಸಹಾಯ ಮಾಡುತ್ತದೆ. ಹೀಗಾಗಿ ಆಯುರ್ವೇದದ ಪ್ರಕಾರ ಗರ್ಭಾವಸ್ಥೆಯಲ್ಲಿ ಕೇಸರಿಯನ್ನ ಸೇವನೆ ಮಾಡಬಹುದು. ಸರಿ ಹೆಚ್ಚು ಉಷ್ಣದ ಗುಣಗಳನ್ನ ಹೊಂದಿರುವ ಕಾರಣ ಮೊದಲ ಮೂರು ತಿಂಗಳು ಸೇವನೆ ಮಾಡಲೇಬಾರದು. ಇದರಿಂದ ಗರ್ಭಪಾತವಾಗುವ ಅಪಾಯ ಇರುತ್ತದೆ. ಆದರೆ ಒಮ್ಮೆ ಗರ್ಭನಿಂತ ಮೇಲೆ ಅಂದರೆ 6ನೇ ತಿಂಗಳ ಬಳಿಕ ಕೇಸರಿಯನ್ನ ಸೇವನೆ ಮಾಡಬಹುದು. ಆದರೆ ಅದು ಸಹ ಮಿತಿಯಲ್ಲಿ …
ಗರ್ಭಾವಸ್ಥೆಯಲ್ಲಿ ಕೇಸರಿಯನ್ನ ಸೇವನೆ ಮಾಡುವುದಕ್ಕೂ ಒಂದು ವಿಧಾನವಿದೆ. ದು ಏನೆಂದರೆ ರಾತ್ರಿ 1 ಲೋಟ ಕಾಯಿಸಿದ ಹಾಲಿಗೆ 3 ರಿಂದ 4 ಕೇಸರಿ ಎಳೆ, ಮತ್ತು ಕಲ್ಲುಸಕ್ಕರೆಯ ಮಿಶ್ರಣ ಮಾಡಿ ಇಟ್ಟುಕೊಳ್ಳಿ.. ನಂತರ ಬೆಳಗ್ಗೆ ಕೇಸರಿ ಬೆರೆಸಿದ ಹಾಲನ್ನು ಉಗುರು ಬೆಚ್ಚಗೆ ಹದಕ್ಕೆ ಕಾಯಿಸಿಕೊಂಡು ಸೇವನೆ ಮಾಡಿ. ಇದರಿಂದ ಆರೋಗ್ಯವೂ ಸುಧಾರಿಸುತ್ತದೆ. ಗರ್ಭಧಾರಣೆಯಲ್ಲಿ ಮಗುವಿನ ಬೆಳವಣಿಗೆಯಾದಂತೆ ಹೊಟ್ಟೆಯ ಭಾರ ಹೆಚ್ಚುತ್ತದೆ. ಇದರಿಂದ ಸರಿಯಾಗಿ ನಿದ್ದೆ ಬರದೇ ಇರಲು ಕಾರಣವಾಗಬಹುದು. ಹೀಗಾಗಿ ಕೇಸರಿ ಮಿಶ್ರಿತ ಹಾಲನ್ನು ಸೇವಿಸಬಹುದು. ಕೇಸರಿಯು ಸೌಮ್ಯವಾದ ನಿದ್ರಾಜನಕ ಗುಣಗಳನ್ನ ಹೊಂದಿದ್ದು
ಅದು ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಆರಾಮವಾಗಿರುವಂತೆ ಮಾಡುತ್ತದೆ. ಹಾಲಿನೊಂದಿಗೆ ಕೇಸರಿ ಸೇರಿಸಿ ಕುಡಿಯುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಹೆರಿಗೆಯೂ ಹೆಚ್ಚು ತ್ರಾಸದಾಯಕವಾಗಿರುವುದಿಲ್ಲ. ನ್ನು… ಕೇಸರಿ ಸೇವನೆಯಿಂದ ಮಗುವಿನ ಚರ್ಮದ ಬಣ್ಣ ಸುಧಾರಿಸಲು ಕೇಸರಿ ದಳವು ಯಾವುದೇ ಮಾತ್ರಿಕ ಶಕ್ತಿಯನ್ನು ಹೊಂದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಕೇಸರಿ ಹಾಲು ಮಗುವಿನ ಬಣ್ಣ ಬೆಳ್ಳಗೆ ಮಾಡುವುದಿಲ್ಲ.
ಬದಲಾಗಿ ತಾಯಿ ಹಾಗು ಮಗುವಿನ ಆರೋಗ್ಯ ಉತ್ತೇಜಿಸಲು ಸಹಾಯ ಮಾಡುತ್ತದೆ. ಮಗುವಿನ ಚರ್ಮದ ಬಣ್ಣವು ಅನುವಂಶಿಯ ಅಂಶಗಳಿಂದ ಹಾಗು ಗರ್ಭಾವಸ್ಥೆಯಲ್ಲಿ ಸೇವಿಸುವ ನಿರ್ದಿಷ್ಟ ಆಹಾರ ಕ್ರಮಗಳಿಂದ ನಿರ್ಧರಿಸಲ್ಪಡುತ್ತದೆ ಎನ್ನುತ್ತಾರೆ ವೈದ್ಯರು. ನ್ನು ಕೊನೆಯದಾಗಿ ಕೇಸರಿಯನ್ನ ಬೇಕಾಬಿಟ್ಟಿಯಾಗಿ ಸೇವಿಸುವಂತಿಲ್ಲ. ಪ್ರತಿದಿನ ಸೇವಿಸಬೇಕಾದ ಸುರಕ್ಷಿತ ಪ್ರಮಾಣದ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುವ ತಜ್ಷರು ನೀಡಿದ ಸೂಚನೆಗಳನ್ನ ಅನುಸರಿಸಿ…ಎಚ್ಚರಿಕೆ ತಪ್ಪಿದ್ದಲ್ಲಿ ವಾಕರಿಕೆ, ರಕ್ತಸ್ರಾವದಂತಹ ಅಡ್ಡ ಪರಿಣಾಮಗಳು ಉಂಟು ಮಾಡಬಹುದು.