ಮನಿ ಪ್ಲಾಂಟ್ ಅದೃಷ್ಟವನ್ನು ತರುತ್ತದೆ ಎಂಬುವುದು ಅನೇಕ ಮಂದಿಯ ನಂಬಿಕೆಯಾಗಿದ್ದು, ಹೀಗಾಗಿ ಅನೇಕ ಮಂದಿ ಮನಿಪ್ಲಾಂಟ್ ಅನ್ನು ಮನೆಯಲ್ಲಿ ಬೆಳೆಸುತ್ತಾರೆ. ಮನಿ ಪ್ಲಾಂಟ್ ಹೆಸರೇ ಸೂಚಿಸುವಂತೆ , ಹಣದ ಗಿಡ. ಇದಷ್ಟೇ ಅಲ್ಲದೇ ಮನಿಪ್ಲಾಂಟ್ಗಳು ಅಲಂಕಾರ ಮತ್ತು ಪರಿಸರ ವಿಜ್ಞಾನದ ದೃಷ್ಟಿಯಿಂದಲೂ ಬಹಳಷ್ಟು ಪ್ರಯೋಜನಕಾರಿ ಆಗಿದ್ದು , ಹೆಚ್ಚು ಶ್ರಮವಿಲ್ಲದೇ ಕಡಿಮೆ ಕಾಳಜಿವಹಿಸಿಯೂ ನೀವು ಮನಿ ಪ್ಲಾಂಟ್ಗಳನ್ನು ಮನೆಯಲ್ಲಿಯೇ ಬೆಳೆಸಬಹುದು. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಪುಣ್ಯ ಸಿಗುತ್ತದೆ ಮತ್ತು ಹಣದ ಕೊರತೆ ಇರುವುದಿಲ್ಲ ಎಂದು ನಂಬಕ್ಕೆ ಇದೆ . ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಅನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ . ಇದರ ಬಗ್ಗೆ ಇನ್ನೋ ಇಂಟ್ರೇಸ್ಟೀಂಗ್ ಸ್ಟೋರಿ ತಿಳಿಯ ಬೇಕಾದ್ದಾರೆ ಈ ಸುದ್ದಿ ಓದಿ..
ಮನಿಪ್ಲಾಂಟ್ಗಳು ಅಲಂಕಾರ ಮತ್ತು ಪರಿಸರ ವಿಜ್ಞಾನದ ದೃಷ್ಟಿಯಿಂದಲೂ ಬಹಳಷ್ಟು ಪ್ರಯೋಜನಕಾರಿ ಆಗಿದ್ದು , ಹೆಚ್ಚು ಶ್ರಮವಿಲ್ಲದೇ ಕಡಿಮೆ ಕಾಳಜಿವಹಿಸಿಯೂ ಮನಿ ಪ್ಲಾಂಟ್ಗಳನ್ನು ಮನೆಯಲ್ಲಿಯೇ ಬೆಳೆಸಬಹುದು . ಆದರೆ ಕೆಲವೊಮ್ಮೆ ಈ ಗಿಡ ಒಣಗುತ್ತದೆ . ಸರಿಯಾದ ಆರೈಕೆಯ ಕೊರತೆಯಿಂದಾಗಿ ನಾವು ನಿರೀಕ್ಷಿಸಿದಂತೆ ಬೆಳೆಯುವುದಿಲ್ಲ . ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಮನಿಪ್ಲಾಂಟ್ ಅನ್ನು ಬೆಳೆಸಿರುವುದನ್ನು ನೀವು ಕಾಣಬಹುದು .
ಅಲ್ಲದೇ ಮನೆಯಲ್ಲಿ ಮನಿಪ್ಲಾಂಟ್ ಶುಭ ಸೂಚಕ ಎಂದು ಹೇಳಲಾಗುತ್ತದೆ . ಮನಿ ಪ್ಲಾಂಟ್ ಅದೃಷ್ಟವನ್ನು ತರುತ್ತದೆ ಎಂಬುವುದು ಅನೇಕ ಮಂದಿಯ ನಂಬಿಕೆಯಾಗಿದ್ದು , ಹೀಗಾಗಿ ಅನೇಕ ಮಂದಿ ಮನಿಪ್ಲಾಂಟ್ ಅನ್ನು ಮನೆಯಲ್ಲಿ ಬೆಳೆಸುತ್ತಾರೆ. ಇದಷ್ಟೇ ಅಲ್ಲದೇ ಮನಿಪ್ಲಾಂಟ್ಗಳು ಅಲಂಕಾರ ಮತ್ತು ಪರಿಸರ ವಿಜ್ಞಾನದ ದೃಷ್ಟಿಯಿಂದಲೂ ಬಹಳಷ್ಟು ಪ್ರಯೋಜನಕಾರಿ ಆಗಿದೆ.
ಹೆಚ್ಚು ಶ್ರಮವಿಲ್ಲದೇ ಕಡಿಮೆ ಕಾಳಜಿವಹಿಸಿಯೂ ನೀವು ಮನಿ ಪ್ಲಾಂಟ್ಗಳನ್ನು ಮನೆಯಲ್ಲಿಯೇ ಬೆಳೆಸಬಹುದು . ಆದರೆ ಕೆಲವೊಮ್ಮೆ ಈ ಗಿಡ ಒಣಗುತ್ತದೆ. ಸರಿಯಾದ ಆರೈಕೆಯ ಕೊರತೆಯಿಂದಾಗಿ ನಾವು ನಿರೀಕ್ಷಿಸಿದಂತೆ ಬೆಳೆಯುವುದಿಲ್ಲ ಅಲ್ವಾ . ನಿಮ್ಮ ಮನೆಯಲ್ಲಿರುವ ಮನಿ ಪ್ಲಾಂಟ್ ಎಷ್ಟೇ ದಿನ ಕಳೆದರೂ ಸರಿಯಾಗಿ ಬೆಳೆಯುತ್ತಿಲ್ಲ ಅಂದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ, ಇವು ಮನಿಪ್ಲಾಂಟ್ ಬೆಳೆಯಲು ಸಹಾಯಕವಾಗಿದೆ.
ನಿಮ್ಮ ಮನಿಪ್ಲಾಂಟ್ನ ಎತ್ತರವನ್ನು ಉತ್ತೇಜಿಸುವಲ್ಲಿ ಚಹಾ ಎಲೆಗಳು ಹೆಚ್ಚು ಪರಿಣಾಮಕಾರಿ ಆಗಿದೆ. ಇವು ಎಲೆಗಳ ಉದ್ದವನ್ನು ಹೆಚ್ಚಿಸುವುದಲ್ಲದೇ ಹೆಚ್ಚು ಎಲೆಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮನಿ ಪ್ಲಾಂಟ್ಗೆ ಒಂದು ಚಮಚ ತಾಜಾ ಚಹಾ ಎಲೆಗಳನ್ನು ಬೇರುಗಳಿಗೆ ಸೇರಿಸಿ ಮತ್ತು ಸ್ವಲ್ಪ ನೀರು ಹಾಕಿ.
ಮನಿ ಪ್ಲಾಂಟ್ಗಳ ಬೆಳವಣಿಗೆಗೆ ಹಾಲು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ . ಅರ್ಧ ಗ್ಲಾಸ್ ನೀರಿನಲ್ಲಿ 2-3 ಟೇಬಲ್ಸ್ಪೂನ್ ಹಾಲು ಮಿಶ್ರಣ ಮಾಡಿ. ಸಸ್ಯದ ಬೇರುಗಳಿಗೆ ಸುರಿಯಿರಿ. ಹಾಲಿನಲ್ಲಿರುವ ಪೋಷಕಾಂಶಗಳು ಮನಿ ಪ್ಲಾಂಟ್ ದಪ್ಪವಾಗಿ ಮತ್ತು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಮನಿ ಪ್ಲಾಂಟ್ ಒಳಾಂಗಣ ಸಸ್ಯವಾಗಿದ್ದರೂ, ಇದಕ್ಕೆ ಸೂರ್ಯನ ಬೆಳಕು ಬೇಕೇ ಬೇಕು. ಆದ್ದರಿಂದ, ಪ್ರತಿದಿನ ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ಇರಿಸಿ. ತಿಂಗಳಿಗೊಮ್ಮೆ ಗೊಬ್ಬರ ಹಾಕಿ. ಸಸ್ಯವನ್ನು ಮಣ್ಣಿನಲ್ಲಿ ಹಾಕಿದರೆ, ತೇವಾಂಶವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸಾಕಷ್ಟು ನೀರು ಹಾಕಿ.
ಮನಿ ಪ್ಲಾಂಟ್ ನೆಲದಲ್ಲಿದ್ದರೆ , ಗಿಡದ ಕೆಲಭಾಗದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ . ಏಕೆಂದರೆ ಅತಿಯಾಗಿ ನೀರು ಹಾಕುವುದರಿಂದ ಗಿಡ ಬೇಗ ಹಾನಿಗೊಳಗಾಗುತ್ತದೆ. ಗಿಡ ಒಣಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ ಪಾಟ್ ಮೀರಿ ಬೆಳೆದರೆ, ಹೊಸ ಮಣ್ಣಿನೊಂದಿಗೆ ದೊಡ್ಡ ಟಬ್ನಲ್ಲಿ ಮತ್ತೆ ಗಿಡವನ್ನು ಮರುಸ್ಥಾಪಿಸ ಬಹುದು.
ಮನಿಪ್ಲಾಂಟ್ ಅನ್ನು ಯಾವಾಗಲೂ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಇರಿಸಿ ಪ್ರತಿ 4 ರಿಂದ 6 ವಾರಗಳಿಗೊಮ್ಮೆ ಸಸ್ಯವನ್ನು ಫಲವತ್ತಾಗಿಸಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ , ನಿಮ್ಮ ಮನಿ ಪ್ಲಾಂಟ್ನ ಬೆಳವಣಿಗೆಯನ್ನು ನೀವು ಸುಲಭವಾಗಿ ಹೆಚ್ಚಿಸಬಹುದು . ನಿಮಗೆ ವಾಸ್ತು ಶಾಸ್ತ್ರದಲ್ಲಿ ನಂಬಿಕೆಯಿದ್ದರೆ, ಮನಿ ಪ್ಲಾಂಟ್ ಅನ್ನು ನೆಡುವ ಮೊದಲು ನೀವು ಸರಿಯಾದ ದಿಕ್ಕಿನ ಬಗ್ಗೆ ತಿಳಿದಿರಬೇಕು. ನೀವು ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ನೆಡಲು ಬಯಸಿದರೆ , ಅದನ್ನು ಆಗ್ನೇಯ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಇದರೊಂದಿಗೆ, ಈಶಾನ್ಯದಲ್ಲಿ ಮನಿ ಪ್ಲಾಂಟ್ ಅನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.