
Ashwaveega News 24×7 ಅಕ್ಟೋಬರ್. 15: ಡಾ.ಮಹೇಶ ವಾಳ್ವೇಕರ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಡಾ. ಮಹೇಶ ವಾಳ್ವೇಕರ ಅವರು ಸಂಶೋಧನೆ ಕೈಗೊಂಡು ಮಹಾಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ರಾಜ್ಯ ಕಾನೂನುವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಡಾ.ಮಹೇಶ ವಾಳ್ವೇಕರ್,ಕಾನೂನು ಸಲಹೆಗಾರರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ.
ಡಾ. ಮಹೇಶ ವಾಳ್ವೇಕರ ಅವರು ಕಳೆದ 24 ವರ್ಷಗಳಿಂದ ಪತ್ರಿಕೋದ್ಯಮ ಮಾಧ್ಯಮದಲ್ಲಿ ಎಲ್ಲಾ ಪ್ರಕಾರಗಳಲ್ಲೂ ಸಮರ್ಥವಾಗಿ, ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದ್ದಾರೆ . ಹಲವು ಸಂಘ ಸಂಸ್ಥೆಗಳಿಗೆ ಮಾಧ್ಯಮ ತಜ್ಞರಾಗಿ ಮತ್ತು ಮಾಧ್ಯಮ ಸಲಹೆಗಾರರಾಗಿ, ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.
ಧಾರವಾಡ ಅಕಾಶವಾಣಿ ಕೇಂದ್ರದ ಸುದ್ದಿ ವಿಭಾಗದ ವರದಿಗಾರರಾಗಿ, ವಾರ್ತಾ ವಾಚಕರಾಗಿ ಕರ್ತವ್ಯ ನಿರ್ವಹಿಸಿರುವ ಜೊತೆಗೆ , ಉದಯ TV , ಸುದ್ದಿ ವಾಹಿನಿ , ಕಾವೇರಿ TV ಸೇರಿದಂತೆ ಹಲವಾರು ವಿದ್ಯುನ್ಮಾನ ಸುದ್ದಿವಾಹಿನಿಯ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ .
ದೂರದರ್ಶನ ವಾಹಿನಿಯ ವರದಿಗಾರರಾಗಿ, ಸಹಾಯಕ ಸುದ್ದಿ ಸಂಪಾದಕರಾಗಿಯೂ ಸಹ ಕರ್ತವ್ಯ ನಿರ್ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಕಳೆದ 4 ವರ್ಷ 9 ತಿಂಗಳಿನಿಂದ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಹಿರಿಯ ಪತ್ರಕರ್ತ, ಪ್ರಸ್ತುತ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಹೇಶ ವಾಳ್ವೇಕರ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.