
actor dr rajkumars sister nagamma passes away
Ashwaveega News 24×7 ಅ. 01: ನಟ ಸಾರ್ವಭೌಮ ಡಾ.ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ ಅವರು ಇಂದು (ಆ.1) ವಿಧಿವಶರಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗಾಜನೂರಿನ ಸ್ವಗ್ರಹದಲ್ಲಿ ವಾಸಿಸುತ್ತಿದ್ದ ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ರಾಜ್ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಇವರು ಇಂದು ತಮ್ಮ 92ನೇ ವಯಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಡಾಕ್ಟರ್ ರಾಜ್ಕುಮಾರ್ ಸಹೋದರಿ ನಾಗಮ್ಮ ಅವರಿಗೆ ಅಪ್ಪು ನಿಧನದ ವಿಷಯವೇ ಗೊತ್ತಿಲ್ಲ. ಅಪ್ಪು ಹೋಗಿ ವರ್ಷಗಳೇ ಕಳೆದು ಹೋಗಿವೆ. ಆದರೆ, ಅತ್ತೆ ನಾಗಮ್ಮ ಅವರಿಗೆ ಪುನೀತ್ ತೀರಿ ಹೋಗಿರೋ ವಿಷಯ ಗೊತ್ತಿಲ್ಲ.
ಅತ್ತೆ ನಾಗಮ್ಮ ಆಗಾಗ “ಅಪ್ಪು ಕಂದ ಬಂದು ನನ್ ನೋಡ್ಕೊಂಡು ಹೋಗು” ಅಂತ ಹೇಳ್ತಾನೇ ಇರುತ್ತಿದ್ದರು.
ಪುನೀತ್ ಮನೆಯಲ್ಲಿ ಎಲ್ಲರ ಪ್ರೀತಿಯ ಅಪ್ಪುನೇ ಆಗಿದ್ದರು. ಮನೆಯ ಸದಸ್ಯರಿಗೆ ಅಪ್ಪು ಅಂದ್ರೆ ತುಂಬಾನೆ ಇಷ್ಟ. ಅದೆಷ್ಟು ಅಂದ್ರೆ, ಎಲ್ಲೇ ಹೋದ್ರು ಅಪ್ಪು ಇರ್ತಾ ಇದ್ದರು.
ಅಷ್ಟು ಪ್ರೀತಿಯ ಅಪ್ಪು ಇಲ್ಲ ಅನ್ನೋದು ಎಲ್ಲರಿಗೂ ಬೇಸರ ತರಿಸುತ್ತದೆ. ಆದರೆ, ರಾಜ್ಕುಮಾರ್ ಸಹೋದರಿ ನಾಗಮ್ಮ ಅವರಿಗೆ ಅಪ್ಪು ನಿಧನರಾಗಿರೋ ವಿಷಯವೇ ಗೊತ್ತಿರಲಿಲ್ಲ.
ಇನ್ನು ನಾಗಮ್ಮನವರ ಅಂತ್ಯಕ್ರಿಯೆ ನಾಳೆ (ಆಗಸ್ಟ್ 2) ಗಾಜನೂರಿನಲ್ಲಿಯೇ ನಡೆಯಲಿದೆ.