
Ashwaveega News 24×7 ಅಕ್ಟೋಬರ್. 05: ಬಿಗ್ಬಾಸ್ ಕನ್ನಡ ಸೀಸನ್-12ರ ಸ್ಪರ್ಧಿಯಾಗಿರುವ ಜಾಹ್ನವಿ ಅವರು ಡಿವೋರ್ಸ್ ಪಡೆದಿರುವುದು ಗೊತ್ತೇ ಇದೆ. ಬಿಗ್ಬಾಸ್ ಮನೆಯಲ್ಲೂ ಇದರ ಬಗ್ಗೆ ಜಾಹ್ನವಿ ಆಗಾಗ ಡಿವೋರ್ಸ್ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ. ನಾನಿರುವಾಗಲೇ ಗಂಡ ಬೇರೊಬ್ಬರನ್ನು ಮದುವೆಯಾಗಿ, ಮಗು ಕೂಡ ಮಾಡಿಕೊಂಡಿದ್ದ. ಅದನ್ನು ಸಹಿಸಿಕೊಳ್ಳಲಾಗದೆ ಡಿವೋರ್ಸ್ ಪಡೆದಿದ್ದು ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಜಾಹ್ನವಿ ಮಾಜಿ ಪತಿ ಕಾರ್ತಿಕ್ ಸ್ಪಷ್ಟನೆ ನೀಡಿದ್ದು, ಜಾಹ್ನವಿ ಬಗ್ಗೆ ಶಾಕಿಂಗ್ ಆರೋಪಗಳನ್ನು ಮಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಡಿವೋರ್ಸ್ ಬಗ್ಗೆ ಹೇಳಿಕೊಂಡಿದ್ದ ಜಾಹ್ನವಿ, ನನ್ನ ಪತಿಗೆ ಸುಮ್ಮನೆ ಡಿವೋರ್ಸ್ ಕೊಟ್ಟಿದ್ದಲ್ಲ. ನಾನಿರುವಾಗಲೇ ಬೇರೊಬ್ಬರನ್ನು ಮದುವೆಯಾಗಿದ್ರು, ಮಗು ಕೂಡ ಇತ್ತು. ನನ್ನ ಗಂಡನ ಸ್ಥಾನ ಬೇರೊಬ್ಬರಿಗೆ ಹೋದಾಗ ಅದಕ್ಕೆ ಬೆಲೆ ಇರಲ್ಲ ಅಂತ ಡಿವೋರ್ಸ್ ಕೊಟ್ಟಿದ್ದು ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ. ಆದರೆ ಅವರ ಮಾಜಿ ಪತಿ ಕಾರ್ತಿಕ್ ಬೇರೆಯೇ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಹೌದು. .ನಮ್ಮ ಅಶ್ವವೇಗ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಜಾಹ್ನವಿ ಮಾಜಿ ಪತಿ ಕಾರ್ತಿಕ್,
ಗಂಡನನ್ನ ಬಿಟ್ಟು ಬೇರೆ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದಾಗ ಯಾರು ತಾನೇ ಸಹಿಸಿಕೊಳ್ತಾರೆ? ಅದನ್ನು ನಾನು ವಿವರವಾಗಿ ಹೇಳಲು ಇಷ್ಟಪಡಲ್ಲ. ಜಾಹ್ನವಿ ಕೆಳಮಟ್ಟಕ್ಕೆ ಇಳಿದು ಮಾತನಾಡ್ತಾಳೆ ಅಂದ್ರೆ, ನಾನೂ ಹಾಗೆ ಮಾತನಾಡಲು ಆಗಲ್ಲ. ಹೆಣ್ಣು ಎನ್ನುವ ಕಾರಣಕ್ಕೆ ಗೌರವ ಕೊಡುತ್ತೀನಿ ಎಂದು ಕಾರ್ತಿಕ್ ಗಂಭೀರ ಆರೋಪ ಮಾಡಿದ್ದಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಎರಡು ವರ್ಷ ಯಾವುದೇ ಸಮಸ್ಯೆ ಇರಲಿಲ್ಲ. ಜಾಹ್ನವಿ ಏನೇನೋ ಹೇಳಿಕೆ ಕೊಡಬಹುದು. ಅದೆಲ್ಲ ನಿಜ ಅಲ್ಲ, ಆಕೆ ಬೇರೆ ವ್ಯಕ್ತಿ ಜೊತೆ ಸದಾ ಮಾತನಾಡುತ್ತಿದ್ದಳು. ಅದನ್ನು ನೋಡುತ್ತಾ ಸುಮ್ಮನಿರಲು ಸಾಧ್ಯವಿಲ್ಲ. ಹಾಗಾಗಿ ಒಮ್ಮೆ ನಾನು ಕುಡಿದು ಕೈ ಮಾಡಿದ್ದೆ’ ಎಂದಿದ್ದಾರೆ.
‘ಬೇರೆ ಮನೆ ಮಾಡೋಣ ಅಂದಿದ್ದಕ್ಕೆ ಬಾಡಿಗೆ ಮನೆ ಬಿಟ್ಟು, ಅಪಾರ್ಟ್ಮೆಂಟ್ ಮಾಡಿದೆ. ಆದರೆ ಬೇರೆಯವರ ಜೊತೆ ಬರೀ ಮಾತನಾಡುವುದಲ್ಲ, ತನ್ನ ಖಾಸಗಿ ಫೋಟೋಗಳನ್ನ ಬೇರೆಯವರಿಗೆ ಶೇರ್ ಮಾಡುತ್ತಿದ್ದಳು. ಅದನ್ನು ಯಾರು ತಾನೇ ಸಹಿಸಿಕೊಳ್ತಾರೆ? ಇದನ್ನು ಬೇರೆ ಯಾರೋ ಹೇಳಿದ್ದಲ್ಲ, ನಾನೇ ನನ್ನ ಕಣ್ಣಾರೆ ನೋಡಿದ್ದು. ನಾನು ಯಾವುದೇ ಆದಾಯವಿಲ್ಲದೆ ಒಂದೂವರೆ ಕೋಟಿ ಸಾಲ ಮಾಡಿಕೊಂಡಿದ್ದೆ. ಸಿಕ್ಕಾಪಟ್ಟೆ ಫಸ್ಟ್ರೇಷನ್ ಆದಾಗ ಮನುಷ್ಯ ಏನು ಮಾಡ್ತಾನೆ? ಗಂಡನಿಗಿಂತ ಬೇರೆಯವರಿಗೆ ಸಮಯ ಕೊಟ್ಟಾಗ ಯಾರಿಗೆ ತಾನೆ ಕೋಪ ಬರಲ್ಲ?’ ಎಂದು ಆಕ್ರೋಶ ಹೊರಹಾಕಿದ್ದಾರೆ.
‘ನನ್ನ ತಪ್ಪುಗಳಿಗೆ ಕ್ಷಮೆ ಕೂಡ ಕೇಳಿದ್ದೆ. ಆದರೆ ಕ್ಷಮಿಸಲಿಲ್ಲ. ನೀನು ಇದ್ರೆ ಮನೆಗೆ ಬರಲ್ಲ ಅಂದಳು. ಆಗ ನಾನು ಮನೆ ಬಿಟ್ಟು ಬಂದು ಒಂದೂವರೆ ವರ್ಷ ಸುಮ್ಮನಿದ್ದೆ. ಹೊಂದಿಕೊಂಡು ಹೋಗಲು ಒಪ್ಪಲಿಲ್ಲ. ನಂತರ ಇಬ್ಬರೂ ಒಪ್ಪಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದೆವು. ಆದರೆ ಈಗ ನನ್ನ ತೇಜೋವಧೆ ಮಾಡುತ್ತಿದ್ದಾಳೆ. ನನ್ನ ಬಗ್ಗೆ ಈಗ ಬಿಗ್ಬಾಸ್ ಮನೆಯಲ್ಲಿ ಮಾತನಾಡಿದ್ದು ತುಂಬಾ ನೋವಾಗಿದೆ. ಡಿವೋರ್ಸ್ ಬಳಿಕ ನಾನು ಮದುವೆ ಆಗಿರೋದು. ಆದರೆ ಡಿವೋರ್ಸ್ಗೆ ಮುನ್ನ ಮದುವೆ ಆಗಿದ್ದೆ ಅನ್ನೋದು ಸುಳ್ಳು. ನನಗೂ ಈಗ ಒಂದು ಸಂಸಾರ ಇದ್ದು, ಜಾಹ್ನವಿ ಮಾತಿನಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಸಮಸ್ಯೆ ಆಗ್ತಿದೆ’ ಎಂದು ಕಾರ್ತಿಕ್ ಹೇಳಿದ್ದಾರೆ.
ಇನ್ನು 2016ರಲ್ಲಿ ನನಗೆ ಬೇರೆ ಮನೆ ಮಾಡಬೇಕು ಎಂದರು. ಆಗ ಬೆಂಗಳೂರಿಗೆ ಬಂದು ಮನೆ ಮಾಡಿದ್ದೆ. ಇದಕ್ಕಾಗಿ ಸ್ವಲ್ಪ ಸಾಲವೂ ಆಗಿದ್ದು, ಇದನ್ನು ತೀರಿಸಿಕೊಂಡ ನಂತರ ಸ್ವಲ್ಪ ಸುಧಾರಿಸಿಕೊಳ್ಳಲಾರಂಭಿಸಿದೆ. ಇದಾದ ನಂತರ, ಸ್ವಂತ ಮನೆ ಬೇಕು ಎಂದು ಹಠವಿಡಿದರು. ಆಗ ಅಪಾರ್ಟ್ಮೆಂಟ್ನಲ್ಲಿ 1.5 ಕೋಟಿ ಫ್ಲ್ಯಾಟ್ ಖರೀದಿ ಮಾಡಿದೆವು. ಆಗ ನನ್ನ ಬಿಸಿನೆಸ್ ಲಾಸ್ ಆಯ್ತು, ನನಗೆ ಕೆಲಸವೂ ಸರಿಯಾಗಿ ಇರಲಿಲ್ಲ. ಸಾಲ ಕಟ್ಟಲಾಗದೇ ತುಂಬಾ ಕಷ್ಟಪಡುತ್ತಿದ್ದಾಗ 3-4 ಬಾರಿ ಹರಾಜಿಗೂ ಬಂದಿತ್ತು. ಆಗ ಬ್ಯಾಂಕ್ ಜೊತೆಗೆ ಮಾತಾಡಿಕೊಂಡು ಅಪಾರ್ಟ್ಮೆಂಟ್ ಉಳಿಸಿಕೊಳ್ಳಲು ಪ್ರಯತ್ನ ಮಾಡಿದೆ. ಕೋ-ಆಪರೇಟಿವ್ ಬ್ಯಾಂಕ್ನಿಂದ ರಾಷ್ಟ್ರೀಕೃತ ಬ್ಯಾಂಕ್ಗೆ ಮನೆ ಸಾಲ ಶಿಫ್ಟ್ ಮಾಡಿಸಿಕೊಂಡೆವು. ಆಗ ನನಗೆ ಕೆಲಸ ಇಲ್ಲದಿದ್ದಾಗ ಜಾಹ್ನವಿ ಅವರೇ ಒಂದು ವರ್ಷ ಕಾಲ ಇಎಂಐ ಕಟ್ಟಿಕೊಂಡು ಹೋಗುತ್ತಿದ್ದರು.
ನಾವು ತುಂಬಾ ಸ್ಥಿತಿವಂತರು, ಪೆಟ್ರೋಲ್ ಬಂಕ್ ಇದ್ದವು, ಟ್ರಾವೆಲ್ಸ್ ಇತ್ತು. ಆದರೆ, ನನ್ನ ಪ್ಯಾಶನ್ ಒಂದಿಷ್ಟು ಇದೆ ಎನ್ನುತ್ತಾ ಆರಂಭದಲ್ಲಿ ಧಾರಾವಾಹಿ, ಮಾಧ್ಯಮ ಕ್ಷೇತ್ರದಲ್ಲಿ ಆಫರ್ ಬರ್ತಿವೆ ಎಂದರು. ಆಗ ನಾನು ಸೀರಿಯಲ್ ಬೇಡ, ನ್ಯೂಸ್ ಚಾನಲ್ಗೆ ಓಕೆ ಅಂತಾ ಹೇಳಿದೆ. ನಮ್ಮ ಪಿತ್ರಾರ್ಜಿತ ಆಸ್ತಿ ಇದ್ದರೂ ನಾನು ಫ್ಲಾಟ್ ಅನ್ನು ಸ್ವಂತ ಮಾಡಿಕೊಳ್ಳುವ ಸಾಮರ್ಥ್ಯ ಇದ್ದರೂ, ನಾನು ಕಟ್ಟಲು ಮನಸ್ಸು ಮಾಡಲಿಲ್ಲ. ಅಪ್ಪ-ಅಮ್ಮನ ಆಸ್ತಿ ಮಾರಿ ಮನೆ ಮಾಡುವ ಮನಸ್ಸು ಬರಲಿಲ್ಲ. ಹೀಗಾಗಿ, ಫ್ಲಾಟ್ ಖರೀದಿ ಮಾಡಿದ ಸಾಲ ತೀರಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಮಾಡಿದ ಬಿಸಿನೆಸ್ ಲಾಸ್ ಆಗ್ತಿತ್ತು. ಕೆಲಸವೂ ಇರಲಿಲ್ಲ. ಆಗ ಅವರ ಮನಸ್ಸು ಡೈವರ್ಟ್ ಆಗಿರಬಹುದು ಎಂದು ಕಾರ್ತಿಕ್ ತಿಳಿಸಿದರು.
ಮತ್ತಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ