ಕಲಬುರಗಿ : 93 ವರ್ಷದ ವೃದ್ಧ ಮಹಿಳಾ ಖೈದಿಯನ್ನ ಗುರುವಾರ ಪೆರೋಲ್ ಮೇಲೆ ಬಿಡುಗಡೆ ಮಾಡಿರುವುದನ್ನ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ನವೆಬರ್ 16ರಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ ಭೇಟಿನೀಡಿದ ಸಂದರ್ಭದಲ್ಲಿ 93 ವರ್ಷದ ವೃದ್ದೆ, ಮಹಿಳಾ ಸಜೆ ಕೈದಿಯೊಬ್ಬರ ಸ್ಥಿತಿಯನ್ನ ಕಂಡು ಕಾನೂನು ಸೇವಾ ಪ್ರಾಧಿಕಾರಕ್ಕೆ ಸದರಿ ಮಹಿಳೆಯನ್ನ ಬಿಡುಗಡೆಗೊಳಿಸಲು ಮೇಲ್ಮನವಿ ಸಲ್ಲಿಸಲು ಸಲಹೆ ನೀಡಿದ್ದರು. ಈಗ ವೃದ್ದೆ ಖೈದಿಯನ್ನ ತಾತ್ಕಲಿಕವಾಗಿ ಪೆರೋಲ್ ಮೇಲೆ ಬಿಡುಗಡೆ ಮಾಡಿರುವ ಸುದ್ದಿ ತಿಳಿದ ಉಪ ಲೋಕಾಯುಕ್ತರು ಖುಷಿ ವ್ಯಕ್ತಪಡಿಸಿದ್ದಾರೆ.