ಕಿರುತೆರೆ ನಟ ಹುಲಿ ಕಾರ್ತಿಕ್ ಮೇಲೆ FIR ಆಗಿದ್ದು, ಜಾತಿ ನಿಂದನೆ ಮಾಡಿದ್ದಾನೆಂದು ಕೇಸ್ ದಾಖಲು ಮಾಡಲಾಗಿದೆ. ಸಮುದಾಯವೊಂದನ್ನ ಹಿಯಾಳಿಸುವ ರೀತಿಯಲ್ಲಿ ಮಾತನಾಡಿದ್ದ ಆರೋಪ ಅವರ ಮೇಲೆ ಕೇಳಿಬಂದಿದೆ.
ಹುಲಿ ಕಾರ್ತಿಕ್ ಕಿರುತೆರೆ ರಿಯಾಲಿಟಿ ಶೋನಲ್ಲಿ ಗೆದ್ದು ಹಿರಿ ತೆರೆಯಲ್ಲಿ ಮಿಂಚುತ್ತಿದ್ದ ನಟ, ಆದರೀಗ ಜಾತಿ ನಿಂದನೆ ಮಾಡಿದ್ದಾನೆಂದು ಹುಲಿ ಕಾರ್ತಿಕ್ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಇನ್ನೂ ಖಾಸಗಿ ಚಾನಲ್ನ ಅವಾರ್ಡ್ ನೀಡುವ ಕಾರ್ಯಕ್ರಮ ಒಂದರಲ್ಲಿ, ರೋಡಲ್ಲಿ ಬಿದ್ದಿರುವ ವಡ್ಡನ ತರ ಇದ್ಯಾ’ ಎಂದು ಹುಲಿ ಕಾರ್ತಿಕ್ ಡೈಲಾಗ್ ಹೊಡೆದಿದ್ದು, ಈ ಪದ ಬಳಕೆ ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿಯನ್ನ ನಿಂದಿಸಿ ಮಾತನಾಡಿದ್ದಾರೆ ಎಂದು ನಟ, ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ಹಾಗೂ ನಿರ್ದೇಶಕನ ಮೇಲೆ ಕೂಡ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ.
ಇದನ್ನೂ ಓದಿ : https://ashwaveega.com/raagi-soup-recipe-how-to-make-raagi-vegetable-soup-updates/