ಬೆಂಗಳೂರು : ಎಲ್ಲರೂ ರಾಜೋತ್ಸವ ಆಚರಣೆ ಮಾಡುತ್ತಾರೆ ಯಾವ ಕನ್ನಡ ಸಂಘಟನೆಗಳು ಕೂಡ ಒತ್ತಡ ಹೇರಬಾರದು ರಾಜ್ಯೋತ್ಸವ ಆಚರಣೆಗೆ ಒತ್ತಡ ಮಾಡಬಾರದು ಇದು ಸರ್ಕಾರವೇ ಆದೇಶ ಮಾಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ
ಇಂದು ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಎಲ್ಲರೂ ರಾಜೋತ್ಸವ ಆಚರಣೆ ಮಾಡುತ್ತಾರೆ ಈ ಆಚರಣೆ ಮಾಡದ ಸಂಸ್ಥೆಗೆ ಯಾವ ರೀತಿಯ ಕ್ರಮ ಮಾಡಬೇಕು ಈ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತೆ, ಬಲವಂತ ಮಾಡುವ ಕನ್ನಡಪರ ಸಂಘಟನೆಗಳಿಗೆ ಎಚ್ಚರಿಕೆ ಎಂದು ಡಿಕೆಶಿ ಹೇಳಿದ್ದಾರೆ.