ಭಾರತದ ಮಾಜಿ ಕ್ರಿಕೆಟಿಗ ಸಯ್ಯದ್ ಅಬಿದ್ ಅಲಿ (83) ಅನಾರೋಗ್ಯದಿಂದ ನಿಧನರಾಗಿದ್ದಾರೆ. 1967ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಸಯ್ಯದ್ 1967ರಿಂದ 1974ರ ಅವಧಿಯವರಗೆ 29 ಟೆಸ್ಟ್ ಪಂದ್ಯಗಳನ್ನು ಆಡಿ 1018 ರನ್ ಹಾಗೂ 47 ವಿಕೆಟ್ ಪಡೆದುಕೊಂಡಿದ್ದಾರೆ. ವಿಶೇಷ ಅಂದರೆ ಭಾರತ ತಂಡ ಚೊಚ್ಚಲ ಏಕದಿನ ಪಂದ್ಯ ಆಡಿದಾಗ, ಆ ತಂಡದ ಸದಸ್ಯರಾಗಿ ದ್ದರು. 1975ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಬಿದ್ ಅಲಿ ಕೆಲವು ಪಂದ್ಯಗಳನ್ನು ಆಡಿದ್ದರು. ಹೈದರಾಬಾದ್ ಮೂಲದ ಸಯ್ಯದ್ ಅಬಿದ್ ಅಲಿ , ಮನ್ಸೂರ್ ಅಲಿ ಖಾನ್ ಪಟೌಡಿ , ಎಂಎಲ್ ಜಯಸಿಂಹ , ಅಬ್ಬಾಸ್ ಅಲಿ ಬೇಗ್ರಂತಹ ದಿಗ್ಗಜ ಆಟಗಾರರ ಜೊತೆ ಆಟವಾಡಿದ್ದಾರೆ. ಅಬಿದ್ ಅಲಿ ಬ್ಯಾಟಿಂಗ್ ಬೌಲಿಂಗ್ ಜೊತೆಗೆ ಫೀಲ್ಡಿಂಗ್ಗೆ ಹೆಚ್ಚು ಹೆಸರುವಾಸಿಯಾಗಿದ್ದರು. ಫೀಲ್ಡಿಂಗ್ಗೆ ಹೆಸರುವಾಸಿಯಾಗಿದ್ದ ಆಸ್ಟ್ರೇಲಿಯಾ ಹಾಗೂ ದಕ್ಷಿನ ಆಫ್ರಿಕಾ ಆಟಗಾರರ ಜೊತೆ ಅಲಿ ಕೂಡ ಫೀಲ್ಟಿಂಗ್ಗೂ ಒತ್ತು ಕೊಟ್ಟಿದ್ದರು. ಅವರ ನಿಧನಕ್ಕೆ ಕ್ರಿಕೆಟ್ ಲೋಕ ಸೇರಿದಂತೆ ದೇಶ ವಿದೇಶ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಅಭಿಷೇಕ್.ಎಸ್