
Ashwaveega News 24×7 ಅ. 27: ಎಲ್ಲಿ ನೋಡಿದ್ರು ವಿಘ್ನ ವಿನಾಯಕನದ್ದೆ ನಾಮಸ್ಮರಣೇ..ಬೀದಿ ಬೀದಿಗಳಲ್ಲೂ ವಿಘ್ನ ನಿವಾರಕ, ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕನ ಪ್ರತಿಷ್ಠಾಪನೆ.ದೇವಾಲಯಗಳಲ್ಲಿ ಮೊದಲ ಪೂಜ್ಯಾಧಿಪತಿಗೆ ವಿಶೇಷ ಪೂಜೆ…ಗಣಪತಿಯ ಆರಾಧನೆ…
ನಾಡಿನೆಲ್ಲೆಡೆ ಗೌರಿಗಣೇಶ ಹಬ್ಬವನ್ನು ಭಕ್ತಿಯಿಂದ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉದ್ಯಾನ ನಗರಿಯ ಬೀದಿ ಬೀದಿಗಳಲ್ಲೂ ಸಂಕಷ್ಟಹರ ಗಣಪನ ಪ್ರತಿಷ್ಠಾಪಿಸಲಾದೆ. ಬಸವನಗುಡಿಯ ದೊಡ್ಡ ಗಣೇಶ ದೇಗುಲದಲ್ಲಿ ಹಬ್ಬದ ಸಡಗರ ಕಳೆಗಟ್ಟಿದೆ. ದೊಡ್ಡ ಗಣೇಶ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜೆ ಪುನಸ್ಕಾರ, ಹೋಮ, ಹವನಗಳನ್ನ ಭಕ್ತರು ಕಣ್ತುಂಬಿಕೊಂಡ್ರು
ಇನ್ನೂ ನಗರದ ದೊಡ್ಡ ಗಣಪತಿ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ದೇವಸ್ಥಾನ ಸಂಪೂರ್ಣ ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರವಾಗಿದ್ದು ಗಣಪತಿಗೆ ವಿಶೇಷ ನೈವೇದ್ಯ,ಕನಕಾಭಿಷೇಕ, ನೋಟಿನ ಹಾರ ಅರ್ಪಣೆ ಮಾಡಿದ್ರು. ಸರತಿ ಸಾಲಿನಲ್ಲಿ ನಿಂತು ಭಕ್ತರಿಂದ ದೇವರ ದರ್ಶನ ಪಡೆದು ಪುನೀತರಾದ್ರು…
ಇನ್ನೂ ಗಣೇಶ ಹಬ್ಬ ಅಂದ್ರೆ ಮಲೆನಾಡಿಗರಿಗೆ ಅಚ್ಚುಮೆಚ್ಚು.. ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ ಮಂಗಳ ವಾದ್ಯಗಳೊಂದಿಗೆ ಹಿಂದೂ ಮಹಾಸಭಾ ಗಣಪತಿಯನ್ನ ಪ್ರತಿಷ್ಠಾಪಿಸಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ, ಹಿಂದೂ ಮಹಾಮಂಡಲಿ ಅಧ್ಯಕ್ಷ ಸುರೇಶ್ ಸೇರಿ ಹಿಂದೂ ಮುಖಂಡರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇತ್ತ ಹುಬ್ಬಳ್ಳಿಯಲ್ಲೂ ಗಣಪನ ಆರಾಧನೆ ಜೋರಾಗಿದೆ. ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನ ಗಣೇಶ ಪ್ರತಿಷ್ಠಾಪನೆಯಾಗಿದೆ. ಡೋಲು, ತಮಟೆ ಬಾರಿಸಿ ವಿನಾಯಕನನ್ನ ಪ್ರತಿಷ್ಠಾಪಿಸಿ ಸಂಭ್ರಮಿಸಿದ್ದಾರೆ.
ಇನ್ನೂ ಬಾಗಲಕೋಟೆಯ ಕುಮಾರೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಅದ್ದೂರಿಯಾಗಿ ಗಣೇಶೋತ್ಸವನ್ನ ಆಚರಿಸಲಾಗಿದೆ. ಗಣಪತಿ ಬಪ್ಪ ಮೋರಯಾ ಎಂದು ವಿದ್ಯಾರ್ಥಿಗಳು ಜೈಕಾರ ಹಾಕಿದ್ದಾರೆ. ಕಾಲೇಜು ಆವರಣದಲ್ಲಿ ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸಿದ್ದಾರೆ.
ಒಟ್ನಲ್ಲಿ ರಾಜ್ಯಾದ್ಯಂತ ವಿಘ್ನವಿನಾಯಕನ ಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ್ದಾರೆ. ಇನ್ನೂ ಹಬ್ಬದ ದಿನವೂ ಕೂಡ ಮಣ್ಣಿನ ಗಣೇಶನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದೆ. ಇನ್ನು ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಮಳೆಯನ್ನೂ ಲೆಕ್ಕಿಸದೇ ಏಕದಂತನನ್ನ ಸ್ಮರಿಸಿದ್ದಾರೆ.