Ashwaveega News 24×7 ಏಪ್ರಿಲ್ 13 – 2026 : ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಮತ್ತೆ ನಿರಾಸೆ ಎದುರಾಗಿದೆ. ಇತ್ತೀಚೆಗೆ ಸ್ವಲ್ಪ ಇಳಿಕೆ ಕಂಡಿದ್ದ ದರಗಳು ಇದೀಗ ಮತ್ತೆ ಏರಿಕೆಯ ದಾರಿಗೆ ತಿರುಗಿವೆ .
ಅಂತರರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಪರಿಸ್ಥಿತಿ ಮತ್ತು ಆರ್ಥಿಕ ಅನಿಶ್ಚಿತತೆಗಳ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಸುರಕ್ಷಿತ ಹೂಡಿಕೆ (Safe Haven) ಎಂದು ಪರಿಗಣಿಸಲ್ಪಡುವ ಚಿನ್ನದ ಮೇಲಿನ ಬೇಡಿಕೆ ಹೆಚ್ಚಾದ ಹಿನ್ನೆಲೆ ದರದಲ್ಲಿ ಜಿಗಿತವಾಗಿದೆ .
ಪ್ರಸ್ತುತ, 10 ಗ್ರಾಂ ಚಿನ್ನದ ಬೆಲೆ ಸುಮಾರು 1 ಲಕ್ಷ 55 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ, ಬೆಳ್ಳಿ ದರವೂ ಗಗನಕ್ಕೇರಿದ್ದು, ಪ್ರತಿ ಕೆಜಿ ಬೆಳ್ಳಿ ಸುಮಾರು 2 ಲಕ್ಷ 43 ಸಾವಿರ ರೂಪಾಯಿಗೆ ತಲುಪಿದೆ .
ದಿನದಿಂದ ದಿನಕ್ಕೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆ ಕಾಣಿಸುತ್ತಿರುವುದರಿಂದ ಮಧ್ಯಮ ವರ್ಗದ ಜನರಿಗೆ ಖರೀದಿ ಕಷ್ಟವಾಗುತ್ತಿದೆ. ಮದುವೆ ಮತ್ತು ಹಬ್ಬಗಳ ಸಂದರ್ಭದಲ್ಲೂ ಚಿನ್ನ ಖರೀದಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ತಜ್ಞರ ಪ್ರಕಾರ, ಜಾಗತಿಕ ಅಸ್ಥಿರತೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಹೂಡಿಕೆದಾರರು ಚಿನ್ನದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
